ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಬೆಳೆಸಿಕೊಂಡು ಯುವತಿಯರನ್ನು ವಂಚಿಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು ರೆಹಮಾನ್ ಎಂಬಾತ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈತ ಈ ಹಿಂದೆಯೂ ಗಾಂಜಾ ಸೇವನೆ ಕೇಸ್​ನಲ್ಲಿ ಬಂಧಿಸಲ್ಪಟ್ಟಿದ್ದ ಎನ್ನಲಾಗಿದೆ.
ರೆಹಮಾನ್, ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಯುವತಿಗೆ ರೆಹಮಾನ್ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಯುವತಿ, ಇದನ್ನು ನಂಬಿ ದೈಹಿಕ ಸಂಪರ್ಕಕ್ಕೆ ಒಪ್ಪಿದ್ದಾಳೆ. ಇದನ್ನೇ ಬಳಸಿಕೊಂಡ ಯುವಕ, ನಿರಂತರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಇಬ್ಬರೂ ಹೊಟೇಲ್​ನಲ್ಲಿ ರೂಂ ಮಾಡಿ ನಿರಂತರ 20 ದಿನಗಳ ಕಾಲ ದೈಹಿಕ ಸಂಪರ್ಕದಲ್ಲಿ ತೊಡಗಿದ್ದರು. ಈ ನಡುವೆ ಯುವತಿಗೆ ಆತನಿಗೆ ಮದುವೆಯಾಗಿರುವ ವಿಚಾರ ಹೇಗೋ ತಿಳಿದುಬಂದಿದೆ. ಇದರಿಂದ ಆಘಾತಕ್ಕೆ ಒಳಗಾದ ಯುವತಿ, ಕಡೆಗೆ ಬೇರೆ ದಾರಿ ತೋಚದೇ ಪೊಲೀಸರಿಗೆ ದೂರು ನೀಡಿದದ್ದಾರೆ.
ಕಡಬ ಮೂಲದ ಅನೀಶ್ ರೆಹಮಾನ್ ಬಂಧಿಸಿದ ಮಂಗಳೂರು ಪೊಲೀಸರು ಐಪಿಸಿ 506, 417 ಹಾಗೂ 376 ರಡಿ ಕೇಸು ದಾಖಲಿಸಿ ಅರೆಸ್ಟ್ ಮಾಡಿದ್ದಾರೆ. ಈತ ಈ ಹಿಂದೆ ಕಾವೂರು ಠಾಣಾ ವ್ಯಾಪ್ತಿಯಲ್ಲೂ ಗಾಂಜಾ ಸೇವನೆ ಕೇಸ್​ನಲ್ಲಿ ರೆಹಮಾನ್ ಬಂಧಿತನಾಗಿದ್ದ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 2 =
Remember me
