ಚಿಕ್ಕಬಳ್ಳಾಪುರ:ನಗರಸಭೆ ಸದಸ್ಯರೊಬ್ಬರ ವಿರುದ್ಧ ಕಿರುಕುಳ ಆರೋಪ ಹೊರಿಸಿದ ವ್ಯಕ್ತಿಯೊಬ್ಬ ವಾಟ್ಸ್​ಆ್ಯಪ್​ನಲ್ಲಿ ವಿಡಿಯೋ ಸ್ಟೇಟಸ್​ ಹಾಕಿ ನೇಣು ಹಾಕಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಆತ್ಮಹತ್ಯೆ ಪ್ರಕರಣ ನಡೆದಿದೆ.
ಚಿಕ್ಕಬಳ್ಳಾಪುರ ನಗರದ 15ನೇ ವಾರ್ಡ್​ನಲ್ಲಿ ಈ ಘಟನೆ ನಡೆದಿದೆ. ಬಾಡಿಗೆ ಮನೆಯಲ್ಲಿದ್ದ ಪ್ರಶಾಂತ್ (32) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿಗೆ ನಗರಸಭಾ ಸದಸ್ಯ ಅಂಬರೀಷ್​ ಕಿರುಕುಳವೇ ಕಾರಣ ಎಂದು ಈತ ಆರೋಪಿಸಿದ್ದಾನೆ.
ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿಕೊಂಡಿರುವ ಈತ, ತನ್ನ ಸಾವಿಗೆ ನಗರಸಭಾ ಸದಸ್ಯ ಅಂಬರೀಷ್ ಕಿರುಕುಳ ಕಾರಣವೆಂದು ಆರೋಪಿಸಿದ್ದಾನೆ. ಬಳಿಕ ಆ ವಿಡಿಯೋ ವಾಟ್ಸ್​ಆ್ಯಪ್ ಸ್ಟೇಟಸ್​ಗೆ ಹಾಕಿಕೊಂಡು ನೇಣು ಹಾಕಿಕೊಂಡಿದ್ದಾನೆ.
ಈ ಆತ್ಮಹತ್ಯೆ ಬಳಿಕ ನಗರಸಭಾ ಸದಸ್ಯ ಅಂಬರೀಷ್​ ಪೊಲೀಸರಿಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರ ಡಿವೈಎಸ್​ಪಿ ವಾಸುದೇವ್ ಅವರ ಮುಂದೆ ಹಾಜರಾಗುವ ಮೂಲಕ ಶರಣಾಗಿದ್ದಾನೆ. ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಶಾಂತ್ ಆತ್ಮಹತ್ಯೆಯಲ್ಲಿ ತನ್ನ ಪಾತ್ರವಿಲ್ಲ, ತಾನು ಬೆದರಿಕೆ ಹಾಕಿಲ್ಲ, ಯಾವುದೇ ತನಿಖೆಗೂ ಸಿದ್ಧ ಎಂದು ಅಂಬರೀಷ್ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.
ಮತ್ತೆ ಆಯತಪ್ಪಿ ಎಡವಿದ ಮಾಜಿ ಸಿಎಂ; ಈ ಊರಲ್ಲಿ ಸಿದ್ದರಾಮಯ್ಯಗೆ ಇದೇನಿದು ಸಮಸ್ಯೆ?!

ಆಸ್ಕರ್ ಜ್ಯೂರಿಯಾಗಿ ಪಾಲ್ಗೊಂಡ ಪವನ್ ಒಡೆಯರ್; ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಭಾಗಿ

ಉದ್ಯೋಗಕ್ಕಾಗಿ ಛಲ ಬಿಡದ ಯತ್ನ: 2 ತಿಂಗಳಲ್ಲಿ 600 ಇ-ಮೇಲ್​, 80 ಫೋನ್​ ಕರೆ; ಕೊನೆಗೂ ಸಿಕ್ತು ಕೆಲಸ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + 6 =
Remember me
