ಚಾಮರಾಜನಗರ:‌ವಯಸ್ಸು 34 ಅಷ್ಟೇ.. ನೋಡಲು ಸ್ಫುರದ್ರೂಪಿ. ಇನ್ನೂ ಮದುವೆ ಆಗಿರಲಿಲ್ಲ.‌. ಮಾಡೋಕೆ‌ ಕೆಲಸವೂ ಇರಲಿಲ್ಲ. ಈ ಬೇಸರದಲ್ಲೇ ಕುಡಿತದ ಚಟಕ್ಕೆ ದಾಸನಾದ ಯುವಕನೊಬ್ಬ ಮನೆಯಲ್ಲಿದ್ದ ತನ್ನ ರೂಮ್​ಗೆ ಬಣ್ಣ ಬಳಿಯುತ್ತೇನೆ ಎಂದು ಸುಳ್ಳು ಹೇಳಿ ಒಳಗೆ ಸೇರಿಕೊಂಡು ವಿಷ ಕುಡಿದು ಆಸ್ಪತ್ರೆಯಲ್ಲಿ ಸತ್ತಿದ್ದಾನೆ.
ಹನೂರು ಪಟ್ಟಣದ ನಿವಾಸಿ ವಿನೋದ್ ಕುಮಾರ್ ಮೃತ ಯುವಕ. ಈತ ಮಾ.17ರಂದು ಮನೆಯಲ್ಲಿದ್ದ ತನ್ನ ರೂಮ್​ನೊಳಗೆ ವಿಷ ಕುಡಿದಿದ್ದಾನೆ. ವಿಷಯ ತಿಳಿದ ಮನೆಯವರು ಈತನನ್ನು ಕೊಳ್ಳೇಗಾಲದ ಆಸ್ಪತ್ರೆಗೆ ಸೇರಿ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ವಿನೋದ್ ಶುಕ್ರವಾರ ಮೃತಪಟ್ಟಿದ್ದಾನೆ.
ಈತನಿಗೆ ಐವರು ಅಣ್ಣಂದಿರು, ಒಬ್ಬಳು ತಂಗಿ ಇದ್ದಾಳೆ. ಇವರೆಲ್ಲರಿಗೂ ಮದುವೆಯಾಗಿದೆ.‌‌ ವಿನೋದ್​ಗೆ ಮಾತ್ರ ವಿವಾಹವಾಗಿರಲಿಲ್ಲ. ಇದೇ ಬೇಸರದಲ್ಲಿ ಕುಡಿಯೋದು ಕಲಿತ. ಹನೂರು ಅರಣ್ಯ ಇಲಾಖೆ ಕಚೇರಿಯಲ್ಲಿ ಮಾಡುತ್ತಿದ್ದ ಕಂಪ್ಯೂಟರ್ ಆಪರೇಟರ್ ಕೆಲಸ ಕಳೆದುಕೊಂಡ. ನಂತರ ಬೆಂಗಳೂರಲ್ಲಿ ಫ್ಯಾಕ್ಟರಿಯಲ್ಲೂ ದುಡಿಯಲಾಗದೆ ಊರಿಗೆ ಮರಳಿದ್ದ.‌ ಮದುವೆ ಆಗದ ಬೇಸರ, ಜೀವನದಲ್ಲಿ‌ ಜಿಗುಪ್ಸೆ ಬಂದು ಪೇಂಟ್​ ಜೊತೆಗೆ ವಿಷ ತಂದು ರೂಂ ಒಳಗೆ ಹೋಗಿ ಕುಡಿದ್ದಾನೆ ಎಂದು‌ ಮೃತನ‌ ತಂದೆ ಸಿದ್ದಯ್ಯ‌ ಹನೂರು ಠಾಣೆಗೆ ದೂರು ನೀಡಿದ್ದಾರೆ.
ರಾಜ್ಯದಲ್ಲಿ ಮತ್ತೆ ಕೇಸರಿ ಹವಾ!; ಈಗ ಶಾಲು ತೊಡಲು ಕಾರಣ ಅದಲ್ಲ..

ಹೋಳಿ ಆಡಲು ಹೋದವನಿಗೆ ಶಾಕ್​; ಆಟಕ್ಕೂ ಮುನ್ನ ಪ್ರಾಣ ಕಳೆದುಕೊಂಡ ಬಾಲಕ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 6 =
Remember me
