ನೆಲಮಂಗಲ:ಇನ್ನೇನು ಒಂದು ತಿಂಗಳಲ್ಲಿ ಮದುವೆಯಾಗಬೇಕಿದ್ದ ಯುವಕನೊಬ್ಬ ತಂದೆಯ ತಿಥಿ ನಡೆದ ಮರುದಿನವೇ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಈ ಘಟನೆ ನಡೆದಿದೆ.
ನೆಲಮಂಗಲದ ಅರಿಶಿನಕುಂಟೆ ಗ್ರಾಮದ ಕಿರಣ್ (26) ಸಾವಿಗೀಡಾದ ಯುವಕ. ಈತ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದಾಗ್ಯೂ ಯುವಕನ ಸಾವಿನ ಕುರಿತು ಅನುಮಾನಗಳಿದ್ದು, ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಂದೆ-ತಾಯಿಯರ ಅಗಲಿಕೆಯಿಂದ ಮನನೊಂದು ಖಿನ್ನತೆಗೊಳಗಾಗಿ ಈತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಈತನ ತಾಯಿ ನಾಲ್ಕು ವರ್ಷಗಳ ಹಿಂದೆ ಸಾವಿಗೀಡಾಗಿದ್ದರು. ಈತನ ನಿಶ್ಚಿತಾರ್ಥ ನಡೆದ 15 ದಿನಕ್ಕೆ ತಂದೆ ಸಾವಿಗೀಡಾಗಿದ್ದರು. ಮುಂದಿನ ತಿಂಗಳು ಮದುವೆ ಎಂದು ನಿಶ್ಚಯಿಸಲಾಗಿತ್ತು. ನಿನ್ನೆಯಷ್ಟೇ ಕಿರಣ್ ತಂದೆಯ ತಿಥಿ ಕಾರ್ಯ ನಡೆದಿದೆ. ಆದರೆ ಅದರ ಬೆನ್ನಿಗೆ ಕಿರಣ್ ಕೂಡ ಸಾವಿಗೀಡಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಲಗಿದ್ದವರ ಮೇಲೇ ಸಾಗಿದ ಟೆಂಪೋ; ಒಬ್ಬನ ಸಾವು, ಮೂವರಿಗೆ ಗಂಭೀರ ಗಾಯ..
ಜಾತಿ ಕಾರಣಕ್ಕೆ ಪ್ರೇಮ ವೈಫಲ್ಯ; ‘ತುಂಬಾ ನೆನಪಾಗ್ತಿದಿಯ..’ ಅಂತ ಆಡಿಯೊ ಮೆಸೇಜ್ ಕಳಿಸಿ ನೇಣು ಹಾಕೊಂಡ ಯುವಕ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 5 =
Remember me
