ಕೊಪ್ಪಳ:ಕೊಪ್ಪಳ ತಾಲೂಕಿನ ಭಾಗ್ಯನಗರದ ಉದ್ಯಮಿ ಶ್ರೀನಿವಾಸ್ ಗುಪ್ತಾ ಮಡಿದ ಪತ್ನಿಯ ಮೇಲಿನ ಪ್ರೀತಿಯನ್ನು ವಿಶಿಷ್ಟವಾಗಿ ಅಭಿವ್ಯಕ್ತಿಗೊಳಿಸಿದ್ದು, ಪತ್ನಿ ಪುತ್ಥಳಿಯೊಂದಿಗೆ ಮನೆ ಗೃಹಪ್ರವೇಶ ನೆರವೇರಿಸಿದ್ದಾರೆ. ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ಇವರ ಪತ್ನಿ ವೆಂಕಟನಾಗ ಮಾಧವಿ ಮೃತಪಟ್ಟಿದ್ದರು.
ಗುಪ್ತಾ ಅಪಾರ್ಟ್​ವೆುಂಟ್​ನಲ್ಲಿ ಇಷ್ಟದ ಮನೆ ಕಟ್ಟಬೇಕೆಂಬುದು ಪತ್ನಿಯ ಬಯಕೆ ಆಗಿತ್ತು. ಹೀಗಾಗಿ ಅವರ ಇಷ್ಟದಂತೆ ಪತಿ ಮನೆ ಕಟ್ಟಿದ್ದಾರೆ. ಪತ್ನಿ ಉಪಸ್ಥಿತಿಯಲ್ಲೇ ಗೃಹ ಪ್ರವೇಶ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ ಗುಪ್ತಾ, ಸೋಫಾ ಮೇಲೆ ಕುಳಿತ ಭಂಗಿಯಲ್ಲಿ ಇರುವಂತೆ ಪತ್ನಿಯ ಪುತ್ಥಳಿ ಮಾಡಿಸಿದ್ದಾರೆ. ನೋಡಲು ಇದು ನಿಜಮನುಷ್ಯರಂತೆ ಕಾಣುವುದು ವಿಶೇಷ.
ವರ್ಷದ ಹಿಂದೆ ಬೆಂಗಳೂರಿನಲ್ಲಿ ಮೂರ್ತಿ ಮಾಡಿಸಿದ್ದು, ಸಿಲಿಕಾನ್​ನಿಂದ ತಯಾರಿಸಲಾಗಿದೆ. 3-4 ಅಡಿ ಎತ್ತರ ಹಾಗೂ 15 ಕೆಜಿ ತೂಕ ಹೊಂದಿದೆ. ಪತ್ನಿ ಮೇಲೆ ಗುಪ್ತಾ ಇಟ್ಟಿರುವ ಪ್ರೀತಿಗೆ ಎಲ್ಲರೂ ತಲೆದೂಗಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
