ಬೆಂಗಳೂರು:ಇದೀಗ ಕರೊನಾ ಭೀತಿ ಜನರಲ್ಲಿ ಎಷ್ಟು ಬಾಧಿಸುತ್ತಿದೆ ಎಂದರೆ ಒಬ್ಬರಿಗೊಬ್ಬರು ಪರಸ್ಪರ ಸಹಾಯ ಮಾಡುವುದಕ್ಕೂ ಅಂಜುವಂತಾಗಿದೆ. ಅದರಲ್ಲಿಯೂ ಗುರುತು ಪರಿಚಯ ಇರದ ವ್ಯಕ್ತಿಗಳು ಸಂಕಷ್ಟದಲ್ಲಿ ಇದ್ದರೆ ಸಹಾಯ ಮಾಡುವ ಮನಸ್ಸಾದರೂ ಕರೊನಾ ಭಯದಿಂದ ಹತ್ತಿರ ಸುಳಿಯದ ಸ್ಥಿತಿ ಉಂಟಾಗಿದೆ.
ಅಂಥದ್ದೇ ಒಂದು ಘಟನೆ ಬೆಂಗಳೂರಿನ ಆರ್‌.ಟಿ.ನಗರದಲ್ಲಿ ನಡೆದಿದೆ. ಇಂದು ಬೆಳಗ್ಗೆ ವಾಕಿಂಗ್‌ಗೆ ಹೋಗಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಕುಸಿದು ಬಿದ್ದಿದ್ದಾರೆ. ಆದರೆ ಕರೊನಾ ಭೀತಿಯಿಂದ ಯಾರೊಬ್ಬರೂ ಅವರ ಬಳಿ ಹೋಗಲಿಲ್ಲ ಎನ್ನಲಾಗಿದೆ.
ಕುಸಿದುಬಿದ್ದಿರುವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ವರದಿಯಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನು ಆಂಬ್ಯಲೆನ್ಸ್‌ನಲ್ಲಿ ಶಿಫ್ಟ್‌ ಮಾಡಿದ್ದಾರೆ.
ಇದನ್ನೂ ಓದಿ:ಪೊಲೀಸ್​ ಜೀಪ್ ಕಂಡೊಡನೆ ಹೆದರಿ ಓಡುತ್ತಿದ್ದ ಯುವಕ ಪ್ರಜ್ಞೆತಪ್ಪಿ ಬಿದ್ದು ಸಾವು
ಬೆಂಗಳೂರಿನಲ್ಲಿ ಏಕಾಏಕಿ ಹೀಗೆ ಮೃತಪಡುವವರ ಪ್ರಕರಣಗಳು ಹೆಚ್ಚಾತ್ತಿದ್ದು, ಹಲವು ಪ್ರಕರಣಗಳಲ್ಲಿ ಮೃತಪಟ್ಟ ಬಳಿಕ ಕೊರೊನಾ ಪಾಸಿಟಿವ್ ಇರುವುದು ದೃಢಪಡುತ್ತಿವೆ. ಅಲ್ಲದೇ ಮೃತರ ಮನೆಯವರಿಗೂ ಪಾಸಿಟಿವ್ ಪತ್ತೆ ಆಗುತ್ತಿದೆ. ಸದ್ಯ ಇಂತಹ ಸಾವಿನ ಪ್ರಕರಣಗಳು ಬಿಬಿಎಂಪಿ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆಯೂ ಹೀಗೆಯೇ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಮೃತಪಟ್ಟಿದ್ದರು. ಅವರಿಗೆ ಕರೊನಾ ಪಾಸಿಟಿವ್‌ ಇರುವುದು ವರದಿಯಾಗಿತ್ತು.
ಮಗಳಿಗೆ ಕರೊನಾ ಎಂದು ರೀಲುಬಿಟ್ಟ ವಧುವಿನ ಅಪ್ಪ- ಮದುವೆ ರದ್ದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − six =
Remember me
