ಬೆಂಗಳೂರು ಗ್ರಾಮಾಂತರ:ಬೆಸುಗೆ ಹಾಕುತ್ತಿದ್ದಾಗಲೇ ದೇಹದಿಂದ ಜೀವ ಬೇರೆಯಾದ ಹೃದಯವಿದ್ರಾವಕ ಪ್ರಕರಣವೊಂದು ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು ಇಂಥದ್ದೊಂದು ದುರಂತ ಸಂಭವಿಸಿದೆ.
ನೆಲಮಂಗಲ ತಾಲೂಕಿನ ಹೊಸನಿಜಗಲ್ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮಧುಗಿರಿ ಮೂಲದ ಫಿರೋಜ್​ (40) ಸಾವಿಗೀಡಾಗಿದ್ದಾನೆ. ಈತ ಸೋಂಪುರ ಹೋಬಳಿಯ ಕೂತಘಟ್ಟ ಗ್ರಾಮದಲ್ಲಿ ವಾಸವಿದ್ದು, ವೆಲ್ಡಿಂಗ್ ವೃತ್ತಿಯಿಂದ ಜೀವನ ಸಾಗಿಸುತ್ತಿದ್ದ.
ಇಂದು ಮಧ್ಯಾಹ್ನ ಸೋಂಪುರ ಸಮೀಪದ ಹೊಸನಿಜಗಲ್ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಆಂಜನೇಯ ದೇವಾಲಯದ ವೆಲ್ಡಿಂಗ್ ಕೆಲಸದಲ್ಲಿದ್ದಾಗ ಹೈಟೆನ್ಷನ್​ ವಿದ್ಯುತ್ ತಂತಿಯಿಂದ ವಿದ್ಯುತ್ ಸಂಪರ್ಕದಿಂದ ತೀವ್ರ ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಮೃತದೇಹವನ್ನ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ, ಸ್ಥಳದಲ್ಲೇ ನಾಲ್ವರ ಸಾವು..

ಲಾಕ್​ಡೌನ್​ ಸೆಕ್ಸ್​: ಆರ್​ಟಿಐನಲ್ಲಿ ಬಹಿರಂಗವಾಯ್ತು ಆತಂಕಕಾರಿ ವಿಷಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
