ಆನೇಕಲ್:ತನ್ನ ಮನೆಯಲ್ಲೇ ಹಾಯಾಗಿ ನಿದ್ದೆ ಮಾಡುತ್ತಿದ್ದ ಈ ವ್ಯಕ್ತಿಯ ಮೇಲೆ ದುರದೃಷ್ಟವಶಾತ್ ಸಿಮೆಂಟಿನ ಇಟ್ಟಿಗೆ ಬಿದ್ದಿದೆ. ಇದರಿಂದಾಗಿ ಆತ ಸಾವಿಗೀಡಾಗಿದ್ದಾನೆ.
ಈತ ತಗಡಿನ ಮನೆಯಲ್ಲಿ ವಾಸವಿದ್ದ ಬಡ ವ್ಯಕ್ತಿ. ಹೆಚ್ಚೇನು ಆದಾಯವಿಲ್ಲದ ಈತ, ತನ್ನದೆ ರೀತಿಯಲ್ಲಿ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ. ಈತನ ಹೆಸರು ಗೌರೀನ್ ಶಿಯೋಲ್ (27) ಎಂದು. ಈತನ ಮನೆ ಇದ್ದದ್ದು ಬೆಂಗಳೂರು ಹೊರವಲಯದ ಅತ್ತಿಬೆಲೆ ತಾಲೂಕಿನ ಆನೇಕಲ್ ಸಮೀಪದ ಶೆಟ್ಟಿ ಹಳ್ಳಿ ಎಂಬಲ್ಲಿ.
ಈತ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಪಕ್ಕದಲ್ಲಿ ಪುಟ್ಟ ತಗಡಿನ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದ. ಪಕ್ಕದಲ್ಲಿ ಕಾಮಗಾರಿ ನಡೆಯುತ್ತಿದ್ದರೂ ಈತ ಹಾಯಾಗಿ ತನ್ನ ಮನೆಯಲ್ಲಿ ನಿದ್ರಿಸಿದ್ದಾನೆ. ಆದರೆ ಯಮರಾಯ ಈತನನ್ನು ಸಿಮೆಂಟ್ ಇಟ್ಟಿಗೆಯ ರೂಪದಲ್ಲಿ ಭೇಟಿ ಮಾಡಿ ಕರೆದುಕೊಂಡು ಹೋಗಿದ್ದಾನೆ.
ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಏನೋ ಅಚಾತುರ್ಯವಾಗಿ ಸಿಮೆಂಟಿನ ಇಟ್ಟಿಗೆ ಬಿದ್ದಿದೆ. ಇದು ನೇರವಾಗಿ ಈತನ ಮನೆಯ ಮೇಲೆ ಬಿದ್ದಿದ್ದು, ನಿದ್ರಿಸುತ್ತಿದ್ದ ಈತನ ಮೇಲೆ ಬಿದ್ದಿದೆ. ಇದರಿಂದಾಗಿ ಈತ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಮನೆ ನಿರ್ಮಾಣ ಹಂತದಲ್ಲಿದ್ದ ಮನೆಯ ಮಾಲೀಕರನ್ನು ವಿಶ್ವನಾಥ್ ರೆಡ್ಡಿ ಎಂದು ಗುರುತಿಸಲಾಗಿದೆ. ಮನೆ ನಿರ್ಮಾಣದ ವೇಳೆ ಆದ ಅಚಾತುರ್ಯದಿಂದಾಗಿ ಒಬ್ಬಾತ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಈ ಘಟನೆ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೆಲಸದ ವೇಳೆ ಆದ ಅಚಾತುರ್ಯದಿಂದಾಗಿ ಒಬ್ಬಾತ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಈ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 14 =
Remember me
