ಚಾಮರಾಜನಗರ:ಮನಸಾರೆ ಪ್ರೀತಿಸಿದ್ದ ಯುವಕ ಮದುವೆಯಾಗಲು ಒಪ್ಪಲಿಲ್ಲ ಅನ್ನುವ ಕಾರಣಕ್ಕೆ ಯುವತಿಯೊಬ್ಬಳು ಪ್ರಾಣವನ್ನೇ ಬಿಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಅಪ್ರಾಪ್ತ ವಯಸ್ಸಿನಲ್ಲೇ ಶುರುವಾಗಿದ್ದ ಒನ್​ ವೇ ಲವ್​ ಸ್ಟೋರಿ ಇದೀಗ ದುರಂತ ಅಂತ್ಯ ಕಂಡಿದೆ.
ಇದನ್ನೂ ಓದಿ:ಪಕ್ಕದ ಮನೆಯ ಬಾಲಕಿಯನ್ನೇ ರೇಪ್​ ಮಾಡಿದ 61 ವರ್ಷದ ವೃದ್ಧ! ಬಾಲಕಿ ಹೇಳಿದರೂ ತಲೆಯೇ ಕೆಡಿಸಿಕೊಳ್ಳದ ಪೋಷಕರು
ಚಾಮರಾಜನಗರ ಜಿಲ್ಲೆಯ‌ ಯಳಂದೂರು‌ ತಾಲೂಕಿನ ಹೊನ್ನೂರಿನ‌ ಬೀಚಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಂದಿನಿ(19) ನೇಣಿಗೆ ಶರಣಾದ ಯುವತಿ. ಈಕೆ ಅಪ್ರಾಪ್ತ ವಯಸ್ಸಿನಲ್ಲೇ ಅದೇ ಗ್ರಾಮದ ಯೋಗೇಶ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಮನೆಯವರಿಗೆ ಈಕೆಯ ಪ್ರೀತಿಯ‌ ವಿಚಾರ ತಿಳಿದು ಮದುವೆ ಮಾಡಿಕೊಡಲು ಒಪ್ಪಿಕೊಂಡಿದ್ದರು. ಕಳೆದ ಆರು ತಿಂಗಳ ಹಿಂದೆ ಎರಡು‌ ಮನೆಯವರು ಕುಳಿತು ಮದುವೆ ಮಾತು ಕತೆ ನಡೆಸಿದ್ದರು.
ಇದನ್ನೂ ಓದಿ:ಭಾರತಕ್ಕೂ ಬರಲಿದೆ ಬ್ರಿಟನ್​ನ ಫೈಜರ್ ಕರೊನಾ ಲಸಿಕೆ; ಕೇಂದ್ರ ಸರ್ಕಾರದ ಜತೆ ಒಪ್ಪಂದಕ್ಕೆ ಕಂಪನಿ ಉತ್ಸುಕ
ಈ ಮಧ್ಯೆ ಯೋಗೇಶ್​ಗೆ ಪೊಲೀಸ್ ಕೆಲಸ ಸಿಕ್ಕಿದೆ. ಕೆಲಸ ಸಿಗುತ್ತಿದಂತೆ ಯೋಗೇಶ್ ತನ್ನ ವರಸೆ ಬದಲಾಯಿಸಿದ್ದಾನೆ. ಮದುವೆಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾನೆ. ಇದರಿಂದ‌ ಮನನೊಂದ ನಂದಿನಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ಯಳಂದೂರು ಪೊಲೀಸ್ ಠಾಣೆಯಲ್ಲಿ ನಂದಿನಿ ಪೋಷಕರು ದೂರು ದಾಖಲಿಸಿದ್ದಾರೆ.
ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
