ಬೆಂಗಳೂರು:ಗೂಗಲ್ ಪ್ಲೈ ಸ್ಟೋರ್‌ನಲ್ಲಿ ಉಚಿತವಾಗಿ ಸಿಗಲಿವೆ ಅಥವಾ ಅನಾಮಧೇಯ ವ್ಯಕ್ತಿ ಮಾತು ಕೇಳಿ ಸಿಕ್ಕ ಸಿಕ್ಕ ಅಪ್ಲೀಕೇಷನ್ ಮತ್ತು ಆ್ಯಪ್‌ಗಳನ್ನು ಅಪ್‌ಲೌಡ್ ಮಾಡಿಕೊಳ್ಳುವ ಮುನ್ನ ಎಚ್ಚರ ವಹಿಸಿ. ಇಲ್ಲೊಬ್ಬ ಸೈಬರ್ ಕಳ್ಳ, ಅಮಾಯಕ ವ್ಯಕ್ತಿಯ ಮೊಬೈಲ್‌ಗೆ ಕ್ವಿಕ್ ಸಪೋರ್ಟ್ ಟೀಮ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಸಿ ಬ್ಯಾಂಕ್ ಖಾತೆಗೆ 30 ಸಾವಿರ ರೂ.ಗೆ ಕನ್ನ ಹಾಕಿದ್ದಾನೆ.
ದೀಪಾಂಜಲಿನಗರದ ಮಹೇಂದ್ರ (52) ವಂಚನೆಗೆ ಒಳಗಾದವರು. ಮಹೇಂದ್ರ ಅವರು ಮಗನ ಮೊಬೈಲ್‌ನ ಗೂಗಲ್ ಪ್ಲೈಸ್ಟೋರ್‌ನಲ್ಲಿ ಕೆಲವೊಂದು ಗೇಮ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಾಗ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 6,687 ರೂ. ಕಡಿತವಾಗಿದೆ. ಇದರ ಬಗ್ಗೆ ವಿಚಾರಣೆ ಮಾಡುವ ಸಲುವಾಗಿ ಗೂಗಲ್‌ನಲ್ಲಿ ಹೆಲ್ಪ್ ಲೈನ್ ಎಂದು ಸರ್ಚ್ ಮಾಡಿ ಅದರಲ್ಲಿ ಸಿಕ್ಕ ಮೊಬೈಲ್ ನಂಬರ್‌ಗೆ ಮಹೇಶ್ ಕರೆ ಮಾಡಿದ್ದಾರೆ.
ಇದನ್ನೂ ಓದಿ:ಕರೊನಾದಷ್ಟೇ ಮಾರಕವಾಗಿದ್ದ ಈ ಕಾಯಿಲೆ ಕೊನೆಗೂ ತೊಲಗಿದೆ…!
ಕರೆ ಸ್ವೀಕರಿಸಿದ ವ್ಯಕ್ತಿ, ಗೇಮ್ಸ್‌ಗಳು ಉಚಿತವಾಗಿ ಸಿಗಬೇಕೆಂದರೆ ಮೊದಲು ಕ್ವಿಕ್ ಸಪೋರ್ಟ್ ಟೀಮ್ ಅಪ್ಲೀಕೇಷನ್‌ಗಳನ್ನು ಡೌನ್‌ಲೌಡ್ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾನೆ. ಅದರಂತೆ ಮಹೇಶ್, ಮೊದಲು ಕ್ವಿಕ್ ಸಪೋರ್ಟ್ ಟೀಮ್ ಅಪ್ಲೀಕೇಷನ್‌ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಡೌನ್‌ಲೋಡ್ ಮಾಡಿಕೊಂಡಾಗ ಅದು ಆಕ್ಟಿವೇಟ್ ಆಗಲು ಬ್ಯಾಂಕ್ ಖಾತೆ ವಿವರ ಕೇಳಿದೆ. ಅದಕ್ಕೆ ಮಹೇಶ್, ಮಾಹಿತಿಯನ್ನು ಭರ್ತಿ ಮಾಡಿದ್ದಾರೆ.
ಇದಾದ ಮೇಲೆ ಸೈಬರ್ ಕಳ್ಳ, ಕ್ವಿಕ್ ಸಪೋರ್ಟ್ ಟೀಮ್ ಅಪ್ಲೀಕೇಷನ್ ಬಳಸಿಕೊಂಡು ಮಹೇಶ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 30 ಸಾವಿರ ರೂ.ಗಳನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಎಚ್ಚೆತ್ತ ಮಹೇಶ್, ವಂಚನೆಗೆ ಒಳಗಾಗುತ್ತಿರುವುದು ಗೊತ್ತಾಗಿ ಬ್ಯಾಂಕ್ ಖಾತೆಯನ್ನು ಸ್ಥಗಿತ ಮಾಡಿಸಿ ಠಾಣೆಗೆ ಬಂದು ದೂರು ನೀಡಿದ್ದಾರೆ.
ಇದನ್ನೂ ಓದಿ:ಬಿಡುಗಡೆಯಾಯ್ತು 10 ಚಿತ್ರದ ಟೀಸರ್​ … ವಿನಯ್​ ನೋಡಿ ಕಲೀಬೇಕು ಅಂತಿದ್ದಾರೆ ಜನ
ಈ ಕ್ವಿಕ್ ಸಪೋರ್ಟ್ ಆ್ಯಪ್ ಎನಿಡೆಸ್ಕ್ ಆ್ಯಪ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಳ್ಳುವಾಗ ಮೊಬೈಲ್ ನಂಬರ್ ನಮೂದು ಮಾಡಿರುತ್ತೇವೆ. ಆ್ಯಪ್ ಇನ್‌ಸ್ಟಾಲ್ ಆದ ಕೂಡಲೇ ಮೊಬೈಲ್ ಕಂಟ್ರೋಲನ್ನು ಸೈಬರ್ ಕಳ್ಳರು ಪಡೆಯುತ್ತಾರೆ. ಅಜ್ಞಾತ ಸ್ಥಳದಲ್ಲಿ ಕುಳಿತು ನಮ್ಮ ಮೊಬೈಲ್‌ನ್ನು ರಿಮೋಟ್ ಕಂಟ್ರೋಲ್ ಮಾದರಿಯಲ್ಲಿ ಬಳಸುತ್ತಾರೆ. ಮೊಬೈಲ್ ಬ್ಯಾಂಕಿಂಗ್, ವ್ಯಾಲೆಟ್ ಆಪರೇಟ್ ಮಾಡಿ ತಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವೈಭವದ ಹುಟ್ಟುಹಬ್ಬ ಬೇಡ … ಅಭಿಮಾನಿಗಳಿಗೆ ಗಣೇಶ್​ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
