ಬೆಂಗಳೂರು: ಮೊಬೈಲ್ ಸಿಮ್ ಕಾರ್ಡ್ ಬ್ಲಾಕ್ ಆಗಿದೆ. ಅದನ್ನು ಅನ್‌ಲಾಕ್ ಮಾಡುವುದಾಗಿ ಒಟಿಪಿ ಪಡೆದು ಮಹಿಳೆ ಬ್ಯಾಂಕ್ ಖಾತೆಗೆ ಸೈಬರ್ ವಂಚಕರು 8 ಸಾವಿರ ರೂ. ಕನ್ನ ಹಾಕಿದ್ದಾರೆ.
ನಾಗದೇವನಹಳ್ಳಿಯ 54 ವರ್ಷದ ಮಹಿಳೆ ವಂಚನೆಗೆ ಒಳಗಾದವರು. ಮಹಿಳೆ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಆಗಿದೆ. ಅದನ್ನು ಅನ್ ಲಾಕ್ ಮಾಡಲು ಏರ್‌ಟೆಲ್ ಕಂಪನಿಯಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿದ.
ಇದನ್ನೂ ಓದಿಸೈಬರ್ ಕಳ್ಳರಿಂದ ಖಾತೆಗೆ ಕನ್ನ!: ಕೌನ್ ಬನೇಗಾ ಕರೋಡ್​ಪತಿ ಸೋಗಿನಲ್ಲಿ ವಂಚನೆ
ಇದನ್ನು ಆ ಮಹಿಳೆ ನಂಬಿದರು. ಹಾಗಾದರೆ ಈಗ ಏನು ಮಾಡಬೇಕು ಎಂದು ಕೇಳಿದರು. ‘ನಿಮ್ಮ ಮೊಬೈಲ್‌ಗೆ ಒಂದು ಒಟಿಪಿ ನಂಬರ್ ಬರುತ್ತೆ. ಅದನ್ನು ನನಗೆ ಕೊಡಿ’ ಎಂದು ಹೇಳಿದ.
ಕೂಡಲೇ ಆ ಮಹಿಳೆ ತಮ್ಮ ಮೊಬೈಲ್ ಫೋನ್‌ಗೆ ಬಂದಿದ್ದ ಒಟಿಪಿ ನಂಬರ್ ಹೇಳಿದರು. ಆ ಕಡೆಯಿಂದ ಆತ ಕರೆ ಕಟ್ ಮಾಡಿದ. ಸ್ವಲ್ಪ ಸಮಯದ ನಂತರ ಮಹಿಳೆಗೆ ಇನ್ನೊಂದು ಮೆಸೇಜ್ ಬಂತು. ಅದರಲ್ಲಿ ಅವರ ಬ್ಯಾಂಕ್ ಖಾತೆಯಿಂದ 8 ಸಾವಿರ ರೂ. ಎಗರಿಸಿರುವುದು ಗೊತ್ತಾಯಿತು. ಈಗ ಆ ಮಹಿಳೆ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
https://www.vijayavani.net/5-5-lakhs-per-teacher-fraud-cyber-fraudsters/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 5 =
Remember me
