ಹಾವೇರಿ:ಹಾವೇರಿಯ ಹಾನಗಲ್​ನಲ್ಲಿ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು ಇಲ್ಲಿ ಅಣ್ಣನಿಗೆ ಆದ ಪ್ರೇಮ ವೈಫಲ್ಯಕ್ಕೆ ತಮ್ಮನ ಪ್ರಾಣ ಹೋಗಿದೆ ಈತ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡದ ಯುವಕನಾಗಿದ್ದು ಹಂಸಬಾವಿಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರನ್ನು ಸುರೇಶ್ ನಾಯ್ಕ ಎಂದು ಗುರುತಿಸಲಾಗಿದೆ.
ಹೌದು, ಅಣ್ಣ ಮಂಜು ನಾಯ್ಕ ಕಳೆದ 8 ವರ್ಷದಿಂದ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆ ಹಾನಗಲ್ ತಾಲೂಕಿನ ಬಾಳೂರು ತಾಂಡಾದ ಯುವತಿಯಾಗಿದ್ದು ಕೊನೆಗೆ ಮದುವೆಯಾಗಲು ನಿರಾಕರಿಸಿದ್ದಳು. ಕಡೆಗೆ ನಾಲ್ಕು ದಿನಗಳ ಹಿಂದೆ ಆಕೆ ಬೇರೆ ಯುವಕನ‌ ಜೊತೆ ಮದುವೆಯಾಗಿದ್ದಳು.
ಇದನ್ನೂ ಓದಿ:ಸಹಕಾರ ಸಂಘದ ಕಾರ್ಯದರ್ಶಿ ಆತ್ಯಹತ್ಯೆ; ಡೆತ್‌ನೋಟ್ ಆಧರಿಸಿ ಪ್ರಿಯಕರ ಸೆರೆ
ಈ ಸಂದರ್ಭ ಅಣ್ಣ ಮಂಜು ನಾಯ್ಕ ಮೇಲೆ ಯುವತಿ ಕಡೆಯಿಂದ ದೂರು ದಾಖಲಾಗಿತ್ತು. ಪೊಲೀಸರಿಗೆ ಮಂಜು ನಾಯ್ಕ ಸಿಗದಿದ್ದಾಗ ಸಹೋದರ ಸುರೇಶ ನಾಯ್ಕರನ್ನು ವಶಕ್ಕೆ ಪಡೆದುಕೊಂಡು ಹೋದ ಪೊಲೀಸರು, ಠಾಣೆಯಲ್ಲಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದ್ಯಾವುದರಲ್ಲೂ ಕೈಯಾಡಿಸದೇ ತನ್ನ ಪಾಡಿಗೆ ಬೆಂಗಳೂರಿನಲ್ಲಿ ಕಾರು ಚಲಾಯಿಸುತ್ತಾ ಜೀವನ ಸಾಗಿಸುತ್ತಿದ್ದ ತಮ್ಮ ಸುರೇಶ್ ನಾಯ್ಕರನ್ನು ಪೊಲೀಸರು ಅಣ್ಣ ಸಿಗಲಿಲ್ಲ ಎಂದು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಠಾಣೆಯಲ್ಲಿ ಕಿರುಕುಳ/ಟಾರ್ಚರ್​ ನೀಡಲಾಗಿದೆ ಎಂದೂ ಆರೋಪಿಸಲಾಗಿದೆ. ಆದರೆ ಸುರೇಶ್ ನಾಯ್ಕರನ್ನು ಬಿಟ್ಟು ಕಳಿಸುವಾಗ ಪೊಲೀಸರು, ಕಾರ್ ಇಟ್ಟುಕೊಂಡಿರುವ ಆರೋಪವೂ ಕೇಳಿ ಬಂದಿದೆ. ಎಷ್ಟೇ ಕೇಳಿದರೂ ಪೊಲೀಸರು ಕಾರ್ ಬಿಟ್ಟುಕೊಡಲಿಲ್ಲ ಎನ್ನಲಾಗಿದ್ದು ಇದರಿಂದ ಮನನೊಂದ ಯುವಕ ಸುರೇಶ್ ನಾಯ್ಕ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಗುಂಡು ಹಾರಿಸಿಕೊಂಡ ಉದ್ಯಮಿ ಮೂರು ಕಡೆ ಡೆತ್​ನೋಟ್​ ಇಟ್ಟಿದ್ದು ಯಾಕೆ? ಒಂದೇ ಗಂಟೆ ಒಳಗೆ ಕೇಸ್​ ವಾಪಸ್​ ಪಡೆದ ಪತ್ನಿ!
ಇದನ್ನೂ ಓದಿ:ಲೇಡಿ ಪಿಎಸ್​ಐ ಕಿರುಕುಳ ಕೊಡುತ್ತಿದ್ದಾರೆ… ಡೆತ್​ನೋಟ್​ ಬರೆದಿಟ್ಟು ನಾಪತ್ತೆಯಾಗಿದ್ದ ಸಿರಿವಾರದ ಯುವಕ 3 ದಿನದ ಬಳಿಕ ಪತ್ತೆ!
ಸುರೇಶ್ ನಾಯ್ಕ, ತಮ್ಮ ಡೆತ್​ನೋಟ್​ನಲ್ಲಿ ದುಡಿದು ತಿನ್ನಲು ಪೊಲೀಸರಿ ಕಾರ್​ ಹಿಂತಿರುಗಿಸದೇ ಇದ್ದ ಕಾರಣ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದುಕೊಂಡಿದ್ದಾರೆ. ಅದಲ್ಲದೇ, ಅವರು ಯಾರಿಂದ ಎಷ್ಟು ಸಾಲವನ್ನು ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿಯನ್ನೂ ಹಂಚಿಕೊಂಡಿದ್ದು ಆ ಸಾಲವನ್ನು ಸಾವಿಗೆ ಕಾರಣರಾದವರು ತೀರಿಸಬೇಕು ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
