ಬೆಂಗಳೂರು:ನಡುರಾತ್ರಿ ಲೇಡಿಸ್​ ಪಿಜಿಗೆ ಎಂಟ್ರಿ ಕೊಟ್ಟ ವ್ಯಕ್ತಿಯೋರ್ವ ಬಿಹಾರ ಮೂಲದ ಯುವತಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿರುವ ವಿಆರ್ ಲೇಔಟ್​ನಲ್ಲಿ ನಡೆದಿದೆ. ಮೃತರನ್ನು ಕೃತಿ ಕುಮಾರಿ (24) ಎಂದು ಗುರುತಿಸಲಾಗಿದ್ದು, ಇವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಮಂಗಳವಾರ ತಡರಾತ್ರಿ ಪಿಜಿಗೆ ಚಾಕು ಹಿಡಿದು ನುಗ್ಗಿದ್ದ ಆರೋಪಿ ಮೂರನೇ ಮಹಡಿಯಲ್ಲಿದ್ದ ರೂಮಿಗೆ ನುಗ್ಗಿ ಯುವತಿಯ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ, ಕೋರಮಂಗಲದಲ್ಲಿ ರಾತ್ರಿ ಯುವತಿಯನ್ನ ಪಿಜಿಯಲ್ಲಿ ಕೊಲೆ ಮಾಡಲಾಗಿದೆ. ಆರೋಪಿ ಪರಾರಿಯಾಗಿದ್ದು, ಹುಡುಕಾಟ ನಡೆಸಲಾಗ್ತಿದೆ. ಬಿಹಾರ ಮೂಲದ ಯುವತಿ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಕೊಲೆಗೆ ಕಾರಣ, ಕೊಲೆ ಮಾಡಿದವ್ರು ಯಾರು ಅನ್ನೋದು ತನಿಖೆ ಮಾಡ್ಬೇಕಿದೆ. ಆರೋಪಿಯ ಪತ್ತೆ ಕಾರ್ಯ ನಡೆಯುತ್ತಿದೆ. ಪಿಜಿಗಳಿಗೆ ಕೆಲ ರೂಲ್ಸ್ ಇದೆ‌, ಆದರೂ ಆತ ಒಳ ಹೋದ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಯನ್ನು ಪತ್ತೆಹಚ್ಚಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
Barbaric murder at Koramangala PG in#BengaluruKiller walks into the PG building late night, slits the throat of 22YO Kriti Kumari & storms outKriti hails from Bihar was working in Bengaluru. Assailant broke into the PG around 11:30 PM, killed her & fled. Cops suspect the…pic.twitter.com/MxhL0DYcIn
ಇದನ್ನೂ ಓದಿ:ಸೀರೆಯುಟ್ಟು ತೌಬಾ ತೌಬಾ ಹಾಡಿಗೆ ಮಸ್ತ್​ ಸ್ಟೆಪ್ಸ್​ ಹಾಕಿದ ಮಹಿಳೆ; ವಿಕ್ಕಿ ಕೌಶಲ್​ನಿಂದ ಸಿಕ್ತು ಭರ್ಜರಿ ಗಿಫ್ಟ್​
ಸದ್ಯ ತಿಳಿದು ಬಂದಿರುವ ಮಾಹಿತಿ ಪ್ರಕಾರ ಪರಿಚಯಸ್ಥನಿಂದಲೇ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಯನ್ನು ಯುವತಿಯ ರೂಮ್​ಗೆ ಕರೆಸಿಕೊಂಡಿದ್ದಳು ಎಂದು ವರದಿಯಾಗಿದೆ. ಪಿಜಿಯಿಂದ ಹೊರ ಬಂದ ಕೃತಿ ಆರೋಪಿ ಜೊತೆಗೆ ಊಟಕ್ಕೆ ತೆರಳಿದ್ದು, ವಾಪಸ್​ ಯುವಕನನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ವೇಳೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಎರಡು ದಿನದ ಹಿಂದಷ್ಟೇ ಯುವತಿ ಪಿಜಿ ಸೇರಿಕೊಂಡಿದ್ದಳು. ಆ ವೇಳೆ ಆರೋಪಿಯು ಆಕೆಯ ಜೊತೆಗಿದ್ದನಂತೆ. ಈ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಆಕೆಯ ಫೋನ್​, ಕಾಲ್ ಡೀಟೇಲ್ಸ್​ ಹಾಗೂ ಸಿಡಿಆರ್ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಕೊನೆಯದಾಗಿ ಕೃತಿ ಕುಮಾರಿ ಯಾರಿಗೆ ಕಾಲ್ ಮಾಡಿದ್ದರು. ಯಾವ, ಯಾವ ನಂಬರ್‌ನಿಂದ ಈಕೆಗೆ ಕಾಲ್ ಬಂದಿದೆ. ಇದರ ಜೊತೆಗೆ ಪಿಜಿಯ ಸಿಸಿಟಿವಿಯನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + fifteen =
Remember me
