ಮೈಸೂರು:ಅತ್ತಿಗೆ ಜತೆ ಸಂಸಾರ ಮಾಡುತ್ತಿದ್ದ ವ್ಯಕ್ತಿಯೊಬ್ಬ ಅಣ್ಣನ ಮಗಳ ಜತೆ ಎಸ್ಕೇಪ್​ ಆಗಿರುವ ಘಟನೆ ನಂಜನಗೂಡಿನ ಇಮ್ಮಾವು ಹುಂಡಿ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ:ಪುರುಷರ ವಾರ್ಡ್​ನಲ್ಲಿ ಒಳ ಉಡುಪು ಕಾಣುವಂತೆ ಪಿಪಿಇ ಗೌನ್ ತೊಟ್ಟಿದ್ದ ನರ್ಸ್​ಗೆ ಒಲಿಯಿತು ಬಂಪರ್​ ಆಫರ್​!
ಕೃಷ್ಣ ಎಂಬಾತನ ವಿರುದ್ಧ ಇದೀಗ ಅಪ್ರಾಪ್ತೆಯನ್ನು ಅಪಹರಣ ಮಾಡಿದ ಆರೋಪ ಕೇಳಿಬಂದಿದೆ. ಮೂರು ವರ್ಷಗಳ ಹಿಂದೆ ಕೃಷ್ಣನ ಅಣ್ಣ ಮಹದೇವು ತೀರಿಕೊಂಡಿದ್ದರು. ಆ ಬಳಿಕ ಅತ್ತಿಗೆ ಜತೆ ಕೃಷ್ಣ ಸಂಸಾರ ನಡೆಸುತ್ತಿದ್ದ. ಅಣ್ಣನ ಮೂವರು ಮಕ್ಕಳ ಜವಾಬ್ದಾರಿಯನ್ನು ತಾನೇ ಹೊತ್ತುಕೊಂಡಿದ್ದ.
ಇತ್ತ ಮೊದಲ ಮಗಳು ಋತುಮತಿಯಾಗುತ್ತಿದ್ದಂತೆ ಆರೋಪಿ ಕೃಷ್ಣ ಆಕೆಯ ಮೇಲೆ ಕಣ್ಣ ಹಾಕಿದ್ದ ಎನ್ನಲಾಗಿದೆ. ಇದೇ ವಿಚಾರದಲ್ಲಿ ಗಲಾಟೆಯಾಗಿ ಗ್ರಾಮದ ಮುಖಂಡರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಯು ನಡೆದಿತ್ತಂತೆ. ತಪ್ಪು ಒಪ್ಪಿಕೊಂಡು ತಿದ್ದಿಕೊಂಡಂತೆ ನಟಿಸಿದ್ದ ಕೃಷ್ಣ ಮೇ 17ರ ತಡರಾತ್ರಿ 3 ಗಂಟೆ ಸಮಯದಲ್ಲಿ ಅಣ್ಣನ‌ ಮಗಳನ್ನು ಅಪಹರಿಸಿಕೊಂಡು ನಾಪತ್ತೆಯಾಗಿದ್ದಾನೆ.
ಇದನ್ನೂ ಓದಿ:ಕುಟುಂಬದಿಂದ ದೂರಾದ ಕಿನ್ನರಿ!
ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅತ್ತಿಗೆ ಜಯಲಕ್ಷ್ಮೀ ದೂರು ದಾಖಲಿಸಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.(ದಿಗ್ವಿಜಯ ನ್ಯೂಸ್​)
VIDEO| ರಂಜಾನ್‌ ಹಿನ್ನೆಲೆ ಸೀಲ್‌ಡೌನ್‌ ಆಗಿದ್ದ ಏರಿಯಾ ಓಪನ್‌ ಮಾಡಿಸಿದ ಶಾಸಕ ರಹೀಮ್ ಖಾನ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
