ಕುಮಟಾ:ಈ ವ್ಯಕ್ತಿಗೆ ಮಹಿಳೆಯರ ಬಟ್ಟೆ, ಚಪ್ಪಲಿಗಳೇ ಇಷ್ಟ. ಅವುಗಳನ್ನು ಕದಿಯಲು ರಾತ್ರಿವೇಳೆ ಸ್ತ್ರೀ ವೇಷಧಾರಿಯಾಗಿ ಬರ್ತಾನೆ..!
ಹೌದು, ಸ್ತ್ರೀ ವೇಷಧಾರಿ ಪುರುಷನೊಬ್ಬ ಮಹಿಳೆಯರ ಬಟ್ಟೆ ಮತ್ತು ಚಪ್ಪಲಿಗಳನ್ನು ಕದ್ದೊಯ್ಯುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪಟ್ಟಣದ ಮಣಕಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಈತನ ಕೃತ್ಯ ಸೆರೆಯಾಗಿದ್ದು, ಮನೆಯೊಂದರ ಅಂಗಳದಲ್ಲಿ ಓಡಾಡಿ ಹೆಣ್ಣುಮಕ್ಕಳ ಬಟ್ಟೆ, ಚಪ್ಪಲಿಯನ್ನಷ್ಟೇ ಕದ್ದೊಯ್ಯುತ್ತಿರುವ ವಿದ್ಯಮಾನ ದಾಖಲಾಗಿದೆ.
ಇದನ್ನೂ ಓದಿರಿಒಂದು ಸಾವಿರ ಕರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ: ಡಾ.ಗಿರಿಧರ್ ಕಜೆ
ಸ್ತ್ರೀ ವೇಷಧಾರಿಯಾಗಿ ಕಳವು ಮಾಡುತ್ತಿರುವ ವ್ಯಕ್ತಿ ಯಾರೆಂಬುದು ಪತ್ತೆಯಾಗಿಲ್ಲ. ಸ್ಥಳೀಯರ ಪ್ರಕಾರ ಹಲವು ದಿನಗಳಿಂದ ಮನೆಯ ಹೊರಗಡೆ ಇದ್ದ ಹೆಂಗಸರ ಬಟ್ಟೆಗಳು, ಚಪ್ಪಲಿಗಳು ಕಾಣೆಯಾಗುತ್ತಿವೆ. ಈಗ ಕ್ಯಾಮರಾದಲ್ಲಿ ದಾಖಲಾದಂತೆ ಕದಿಯಲು ಬರುವವ ಸ್ವತಃ ಹೆಣ್ಣುಮಕ್ಕಳಂತೆ ಉಡುಪು ಧರಿಸಿರುವುದು ಆತಂಕಕಾರಿ ಎನ್ನುತ್ತಾರೆ.
ಈ ಬಗ್ಗೆ ಪೊಲೀಸ್​ ಇಲಾಖೆ ಗಮನಕ್ಕೆ ತರಲಾಗಿದೆ. ರಾತ್ರಿ ವೇಳೆ ವಿಶೇಷವಾಗಿ ಗಸ್ತು ತಿರುಗಿ ಹುಡುಕುತ್ತೇವೆ. ಯಾರ ಮೇಲಾದರೂ ಅನುಮಾನ ಬಂದರೆ ಪೊಲೀಸರ ಗಮನಕ್ಕೆ ತರುವಂತೆ ಸಾರ್ವಜನಿಕರಿಗೆ ಪಿಎಸ್​ಐ ಆನಂದಮೂರ್ತಿ ಮನವಿ ಮಾಡಿದ್ದಾರೆ.
https://www.facebook.com/VVani4U/videos/371666393821810/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
