ಉತ್ತರಕನ್ನಡ:ಕೋವಿಡ್​ ಮೂರನೇ ಅಲೆ ಆತಂಕ ಹೊಸ ಬದುಕಿನ ಕನಸಿನಲ್ಲಿರುವ ಇವರಿಬ್ಬರಿಗೂ ಚಿಂತೆ ತಂದಿದ್ದಲ್ಲದೆ, ಕುಟುಂಬದವರು ಎರಡು ಗಂಟೆಗೂ ಅಧಿಕ ಕಾಲ ಗಡಿಭಾಗದಲ್ಲಿ ಗಡಿಬಿಡಿಗೊಳ್ಳುವಂಥ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕರ್ನಾಟಕ-ಗೋವಾ ಗಡಿಪ್ರದೇಶದಲ್ಲಿ ಇಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಿತ್ತು.
ಕೋವಿಡ್​ ಮೂರನೇ ಅಲೆಯ ಪ್ರವೇಶದ ಆತಂಕದ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲಾಡಳಿತ ಗೋವಾ-ಕಾರವಾರ ಗಡಿಯಲ್ಲಿ ಬಿಗಿಕ್ರಮ ಕೈಗೊಂಡಿದ್ದರಿಂದ ನಿಶ್ಚಿತಾರ್ಥಕ್ಕೆ ಅಣಿಯಾಗಿದ್ದ ಎರಡು ಕುಟುಂಬಗಳು ಇಂದು ಚಿಂತೆಗೆ ಒಳಗಾಗುವಂತೆ ಆಗಿದೆ. ಕಾರವಾರದ ಯುವತಿ ಹಾಗೂ ಗೋವಾದ ಯುವಕನ ಮಧ್ಯೆ ಇಂದು ಕಾರವಾರದಲ್ಲಿ ನಿಶ್ಚಿತಾರ್ಥ ನಿಗದಿಯಾಗಿತ್ತು.
ಇದನ್ನೂ ಓದಿ:ಸಾವಿಗೆ ವೈದ್ಯರೇ ಕಾರಣ, ಅವರನ್ನು ಬಂಧಿಸಿ; ಹೆರಿಗೆ ವೇಳೆ ಸತ್ತ ಗರ್ಭಿಣಿಯ ಸಂಬಂಧಿಕರ ಆಗ್ರಹ
ನಿಶ್ಚಿತಾರ್ಥದ ಹಿನ್ನೆಲೆಯಲ್ಲಿ ಯುವಕನ ಕಡೆಯವರು ಆಗಮಿಸುತ್ತಿದ್ದಾಗ ಅವರನ್ನು ಗಡಿಭಾಗದಲ್ಲೇ ತಡೆಯಲಾಗಿತ್ತು. ಯಾರ ಬಳಿಯೂ ಆರ್​ಟಿಪಿಸಿಆರ್​ ವರದಿ ಇರದ್ದರಿಂದ ಪೊಲೀಸರು ಅವರಿಗೆ ಪ್ರವೇಶ ನಿರಾಕರಿಸಿದ್ದರು. ಹೀಗಾಗಿ ಯುವಕನ ಕಡೆಯುವರು ಸುಮಾರು 2 ಗಂಟೆ ಕಾಲ ಪರದಾಡುವಂತಾಗಿತ್ತು. ಕೊನೆಯಲ್ಲಿ ಎಂಟು ಜನರಿಗೆ ಮಾತ್ರ ನಿಶ್ಚಿತಾರ್ಥಕ್ಕೆ ತೆರಳಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರಿಂದ ಉಳಿದವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಗೋವಾಗೆ ಮರಳಬೇಕಾಯಿತು.
ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ತುರ್ತಾಗಿ ಕರೊನಾ ಲಸಿಕೆ ತೆಗೆದುಕೊಳ್ಳುವುದು ಅನಿವಾರ್ಯ..

‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…

ಮಾಮೂಲಿ ಕೊಡದ್ದಕ್ಕೆ ಸುಳ್ಳು ಕೇಸ್ ದಾಖಲಿಸಿದ್ದ ಲೇಡಿ ಇನ್​ಸ್ಪೆಕ್ಟರ್, ಸಬ್​ ಇನ್​ಸ್ಪೆಕ್ಟರ್ ಸೇರಿ ಮೂವರ ಸಸ್ಪೆಂಡ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
