ಬೆಂಗಳೂರು:ಡೇಟಿಂಗ್ ವೆಬ್‌ಸೈಟ್‌ನಲ್ಲಿ ಪರಿಚಯವಾದ ಯುವತಿಯ ಸಹವಾಸ ಮಾಡಲು ಬಯಸಿ ಸಾಫ್ಟ್​ವೇರ್​ ಇಂಜಿನಿಯರೊಬ್ಬ ಬರೋಬ್ಬರಿ 16 ಲಕ್ಷ ರೂ. ವಂಚನೆಗೆ ಒಳಗಾಗಿದ್ದಾನೆ. ವೈಟ್‌ಫೀಲ್ಡ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ 27 ವರ್ಷದ ಟೆಕ್ಕಿಯೇ ವಂಚನೆಗೆ ಒಳಗಾಗಿರುವವನು. ಶೇರಿನ್, ಶ್ವೇತಾ, ಪ್ರೀತಿ ಅಗರ್‌ವಾಲ್ ಮತ್ತು ನಿಖಿತಾ ಎಂಬುವವರು ಈತನಿಗೆ ಪಂಗನಾಮ ಹಾಕಿರುವ ಯುವತಿಯರು.
ಇದನ್ನೂ ಓದಿ:ಭಾರತಕ್ಕೆ ಬಂತು ವಾಟ್ಸ್​ಆ್ಯಪ್​ ಪೇ! ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಪೇ ಆ್ಯಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ?
ಡಿ. 3ರಂದು ಈ ಟೆಕ್ಕಿ ತನ್ನ ಬಿಡುವಿನ ಸಮಯದಲ್ಲಿ ಡೇಟಿಂಗ್ ವೆಬ್‌ಸೈಟ್‌ ನೋಡುತ್ತಿದ್ದ. ಅದರಲ್ಲಿ ಶ್ವೇತಾ ಎಂಬಾಕೆಯ ಪರಿಚಯವಾಯಿತು. ಚಾಟಿಂಗ್‌ನಲ್ಲೇ ಈ ಟೆಕ್ಕಿ ಆಕೆಯ ಪರ್ಸನಲ್ ಮೊಬೈಲ್ ನಂಬರ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ. ‘ನಮ್ಮ ಸೇವೆ ಬೇಕಾದರೆ ಮೊದಲಿಗೆ 2 ಸಾವಿರ ರೂ. ಆನ್‌ಲೈನ್‌ನಲ್ಲಿ ಪಾವತಿಸಿ’ ಎಂದು ಆಕೆ ಸೂಚಿಸಿದಳು. ಅದಕ್ಕೆ ಒಪ್ಪಿದ ಟೆಕ್ಕಿ, ಕೂಡಲೇ ಆನ್‌ಲೈನ್‌ನಲ್ಲಿ 2 ಸಾವಿರ ರೂ. ಟ್ರಾನ್ಸ್‌ಫರ್ ಮಾಡಿ. ಆನಂತರ ಶ್ವೇತಾ ಕರೆ ಮಾಡಿ ನಿಕಿತಾ ಎಂಬಾಕೆಯ ಮೊಬೈಲ್ ನಂಬರ್ ಕೊಟ್ಟಳು. ‘ಈಕೆ ನಿಮ್ಮ ಸೇವೆಗೆ ಬರುತ್ತಾಳೆ’ ಎಂದು ಹೇಳಿದಳು. ನಂತರ ಕೆಲವೇ ನಿಮಿಷಗಳಲ್ಲಿ ನಿಕಿತಾ ಕರೆ ಮಾಡಿ ಈ ಟೆಕ್ಕಿ ಜತೆ ಸಲುಗೆಯಿಂದ ಮಾತನಾಡಿದಳು. ವಿಡಿಯೋ ಕಾಲ್ ಮಾಡುವಂತೆಯೂ ಹೇಳಿದಳು.
ಅದನ್ನೇ ಕಾಯುತ್ತಿದ್ದ ಟೆಕ್ಕಿ, ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಮಾಡಿದಾಗ ಮೊದಲು ಯುವತಿಯರು ತಮ್ಮ ಬೆತ್ತಲೆ ದೃಶ್ಯ ತೋರಿಸಿ ಪ್ರಚೋದನೆ ಮಾಡಿದರು. ಆನಂತರ ಟೆಕ್ಕಿಗೆ ‘ನೀನೂ ಬಟ್ಟೆ ಬಿಚ್ಚು’ ಎಂದು ಪುಸಲಾಯಿಸಿದರು. ಆತನೂ ಬಟ್ಟೆ ಬಿಚ್ಚಿದ. ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡ ಯುವತಿಯರು, ಸ್ಕ್ರೀನ್ ಶಾಟ್‌ಗಳನ್ನೂ ತೆಗೆದುಕೊಂಡರು. ಮೊಬೈಲ್ ಕರೆ ಕಟ್ ಮಾಡಿ ಟೆಕ್ಕಿಯ ವಾಟ್ಸ್‌ಆ್ಯಪ್‌ಗೆ ಆತನದೇ ಅಶ್ಲೀಲ ವಿಡಿಯೋ ಮತ್ತು ಫೋಟೋ ಕಳುಹಿಸಿದರು. ‘ಆನ್‌ಲೈನ್‌ನಲ್ಲಿ ನಾವು ಕೇಳಿದಷ್ಟು ಹಣ ವರ್ಗಾವಣೆ ಮಾಡದಿದ್ದರೆ ನಿನ್ನ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟ್ರಾಗ್ರಾಮ್ ಖಾತೆಗಳಲ್ಲಿ ಅಶ್ಲೀಲ ವಿಡಿಯೋ ಅಪ್‌ಲೋಡ್ ಮಾಡುತ್ತೇವೆ’ ಎಂದು ಬ್ಲ್ಯಾಕ್‌ಮೇಲ್ ಶುರು ಮಾಡಿದರು.
ಇದನ್ನೂ ಓದಿ:ಕೈಲಾಸಕ್ಕೆ ಕಾಸಿಲ್ಲದೆ ವೀಸಾ ತೆಗೆದುಕೊಂಡು ಬನ್ನಿ! ಭಕ್ತರಿಗೆ ಚಳಿಗಾಲದ ಆಫರ್​ ನೀಡಿದ ನಿತ್ಯಾನಂದ ಸ್ವಾಮಿ!
ಮರ್ಯಾದೆಗೆ ಹೆದರಿ ಟೆಕ್ಕಿ, ತಕ್ಷಣ ಮೊಬೈಲ್ ಬ್ಯಾಂಕಿಂಗ್‌ನಲ್ಲಿ ಅವರು ಕೇಳಿದಷ್ಟು ಹಣ ವರ್ಗಾವಣೆ ಮಾಡಿದ. ಮತ್ತೆ ಅದೇ ಡೇಟಿಂಗ್ ವೆಬ್‌ಸೈಟ್‌ನಿಂದ ಪ್ರೀತಿ ಅಗರ್ವಾಲ್ ಮತ್ತು ಶೇರಿನ್ ಎಂಬ ಯುವತಿಯರು ಕರೆ ಮಾಡಿ ಟೆಕ್ಕಿಯ ಅಶ್ಲೀಲ ವಿಡಿಯೋವನ್ನು ಕಳುಹಿಸಿ ಹಣ ಸುಲಿಗೆಗೆ ಇಳಿದರು. ಪಂಜಾಬ್ ನ್ಯಾಷನಲ್ ಬ್ಯಾಂಕ್, ಎಚ್‌ಡಿಎಫ್​ಸಿ ಬ್ಯಾಂಕ್, ಎಸ್‌ಬಿಐ ಬ್ಯಾಂಕ್ ಖಾತೆಗಳಿಗೆ ಕೇವಲ 10 ದಿನಗಳಲ್ಲಿ 16 ಲಕ್ಷ ರೂ.ಗಳನ್ನು ಹಂತ ಹಂತವಾಗಿ ಜಮೆ ಮಾಡಿಕೊಂಡರು. ಇಷ್ಟಾದರೂ ಬಿಡದೆ ಮತ್ತೆ ಮತ್ತೆ ಹಣ ಕೇಳಿದಾಗ ಬ್ಯಾಂಕ್ ಖಾತೆ ಖಾಲಿ ಮಾಡಿಕೊಂಡಿದ್ದ ಟೆಕ್ಕಿ ಕೊನೆಗೆ ದಿಕ್ಕು ತೋಚದೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ. ಆರೋಪಿಗಳ ಮೊಬೈಲ್ ನಂಬರ್, ಟವರ್ ಲೊಕೇಶನ್ ಆಧರಿಸಿ ಪೊಲೀಸರು ಆ ಯುವತಿಯರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
https://www.vijayavani.net/bride-leaves-from-marriage-hall/
ಕಿರಿ ಸೊಸೆ ಜತೆ ಮಾವನ ಅಕ್ರಮ ಸಂಬಂಧ; ವಿಚಾರ ತಿಳಿದ ಹಿರಿ ಸೊಸೆ, ಅತ್ತೆ ಮಾಡಿದ್ದೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 4 =
Remember me
