ಹಾಸನ:ಮಡದಿ ಮೇಲಿನ ಅನುಮಾನಕ್ಕೆ ಪುರುಷರು ಕಾನೂನನ್ನು ಕೈಗೆತ್ತಿಕೊಂಡು ಎಡವಟ್ಟು ಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇಂದು ಬೆಳಗ್ಗೆ, ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಜಗಳವಾಡಿದ್ದ ಗಂಡ, ತನ್ನ ಹೆಂಡತಿಯನ್ನು ಡಂಬೆಲ್ಸ್​ನಿಂದ ಸಾಯುವವರೆಗೂ ಹೊಡೆದು ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದು ಪೊಲೀಸರನ್ನೂ ಬೆಚ್ಚಿಬೀಳಿಸಿತ್ತು.
ಇದನ್ನೂ ಓದಿ:ಹೆಂಡತಿ ಸಾಯುವವರೆಗೂ ಡಂಬೆಲ್ಸ್​ನಿಂದ ಹೊಡೆಯುತ್ತಲೇ ಭೀಕರವಾಗಿ ಕೊಲೆ ಮಾಡಿದ ಪತಿರಾಯ!
ಈ ಫೋಟೋದಲ್ಲಿ ನೀವು ನೋಡುತ್ತಿರುವ ಭೂಪ ಹಾಸನ ಮೂಲದವನು. ಈತ ತನ್ನ ಹೆಂಡತಿ ಮೇಲಿನ ಅನುಮಾನಕ್ಕೆ ಸಿಕ್ಕಸಿಕ್ಕವರಿಗೆ ಚಾಕು ಇರಿದಿದ್ದಾನೆ. ಹೌದು! ಈ ವಿಚಿತ್ರ ಘಟನೆ ನಡೆದದ್ದು ಹಾಸನದ ಸಿದ್ದಯ್ಯ ನಗರದಲ್ಲಿ. ಹೆಂಡತಿ ಮೇಲಿನ ಅನುಮಾನಕ್ಕೆ ಈತ ತನ್ನದೇ ಬೀದಿಯ ನಿವಾಸಿ ಮೇಲೆ ಮನ ಬಂದಂತೆ ಚಾಕು ಇರಿದಿದ್ದಾನೆ.
ಇದನ್ನೂ ಓದಿ:ಡಂಬೆಲ್ಸ್​ನಿಂದ ಪತ್ನಿ ಹತ್ಯೆ; ಸ್ಥಳಕ್ಕೆ ಹೋದ ಪೊಲೀಸರಿಗೇ ಶಾಕ್: ಡಿಸಿಪಿ
ಈ ಘಟನೆಯಲ್ಲಿ ಗಾಯಗೊಂಡ ಆದಿತ್ಯ ಎನ್ನುವಾತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟಕ್ಕೇ ನಿಲ್ಲದ ರಾಜೇಶ್, ಹೆಂಡತಿ ಮೇಲಿನ ಅನುಮಾನಕ್ಕೆ ಹಲವರ ಮೇಲೆ ದಾಳಿ ಮಾಡಿದ್ದಾನೆ. ಈ ಪ್ರಕರಣದಿಂದಾಗಿ ಜನರು ಮತ್ತೊಮ್ಮೆ ಆಘಾತಕ್ಕೆ ಒಳಗಾಗಿದ್ದಾರೆ. ಸದ್ಯ ಹಾಸನದ ಪೆನ್ಷನ್ ಮೊಹೊಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − four =
Remember me
