ಬೆಂಗಳೂರು :2 ಕೆ.ಜಿ. ಚಿನ್ನ, 5 ಕೆ.ಜಿ. ಬೆಳ್ಳಿ, ಕೈ ತುಂಬಾ ಹಣ ಕೊಟ್ಟು ಅದ್ಧೂರಿ ಮದುವೆ ಮಾಡಿದರೂ ಸಂತೃಪ್ತನಾಗದ ಕಾಂಟ್ರಾಕ್ಟರ್‌ವೊಬ್ಬರ ಪುತ್ರ ಮತ್ತೆ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದಾನೆ. ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ನ್ಯಾಯಕ್ಕಾಗಿ ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಠಾಣೆಯ ಮೊರೆ ಹೋಗಿದ್ದಾಳೆ. ಮಾರತಹಳ್ಳಿ ನಿವಾಸಿ 28 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಪ್ರತಿಷ್ಠಿತ ಕಂಪನಿಯಲ್ಲಿ ಕಂಪನಿ ಎಕ್ಸಿಕ್ಯೂಟಿವ್ ಆಗಿರುವ ಪತಿ ಬಾಲಾಜಿ(32) ಸೇರಿ ನಾಲ್ವರ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.
2020 ನವೆಂಬರ್‌ನಲ್ಲಿ ದೂರುದಾರ ಮಹಿಳೆಯನ್ನು ಬಾಲಾಜಿ ವಿವಾಹವಾಗಿದ್ದರು. ಬಾಲಾಜಿ ತಂದೆ ಕಲ್ಯಾಣನಗರದಲ್ಲಿ ಖ್ಯಾತ ಕಂಟ್ರಾಕ್ಟರ್ ಆಗಿದ್ದಾರೆ. ಇವರ ಮನೆಯಲ್ಲಿ ಮಗಳು ಸುಖವಾಗಿ ಇರಬಹುದು ಎಂದುಕೊಂಡಿದ್ದ ದೂರುದಾರ ಮಹಿಳೆಯ ಪಾಲಕರು 2 ಕೆಜಿ ಚಿನ್ನಾಭರಣ, 5 ಕೆಜಿ ಬೆಳ್ಳಿ, ಕೈ ತುಂಬ ಹಣ ಕೊಟ್ಟು, 20 ಲಕ್ಷ ರೂ. ಖರ್ಚು ಮಾಡಿ ಭರ್ಜರಿ ವಿವಾಹ ಮಾಡಿದ್ದರು.
ಇದನ್ನೂ ಓದಿ:ಪ್ರೀತಿ ಒಪ್ಪೋದಕ್ಕೂ ಗಡುವು ಕೊಟ್ಟಿದ್ದ ಪಾಗಲ್ ಪ್ರೇಮಿ! ಪೊಲೀಸ್ ದೂರು ಕೊಟ್ಟು ಬುದ್ಧಿ ಕಲಿಸಿದ ಯುವತಿ
ವಿವಾಹವಾದ 1 ತಿಂಗಳಲ್ಲೇ ಪತಿ ಮತ್ತೆ 1 ಕೋಟಿ ರೂ. ವರದಕ್ಷಿಣೆಗೆ ಬೇಡಿಕೆಯಿಟ್ಟು, ಪತ್ನಿಗೆ ಕಿರುಕುಳ ಕೊಡಲು ಆರಂಭಿಸಿದ್ದ. ಮಹಿಳೆಯ ಪಾಲಕರು ಸಾಲ ಮಾಡಿ 80 ಲಕ್ಷ ರೂ. ಕೊಟ್ಟಿದ್ದರು. ಮನೆ ಕಟ್ಟಲು ಬಾಕಿ 20 ಲಕ್ಷ ರೂ.ಗಳನ್ನು ತರುವಂತೆ ಪತಿ ಆಗಾಗ ಪೀಡಿಸುತ್ತಿದ್ದ. ಇದಕ್ಕೆ ಪತ್ನಿ ನಿರಾಕರಿಸಿದಾಗ ಹಲ್ಲೆ ನಡೆಸಿ, ದೈಹಿಕ ಕಿರುಕುಳ ಕೊಟ್ಟು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ದೂರಿನಲ್ಲಿ ಹೇಳಲಾಗಿದೆ.
ಕಳೆದ ಜನವರಿಯಲ್ಲಿ ಪೊಂಗಲ್ ಹಬ್ಬಕ್ಕೆ ತವರಿನಿಂದ ಹಣ ತರಲಿಲ್ಲವೆಂದು ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದ. ಪತ್ನಿ ಪಾಲಕರ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಳು. ಮದುವೆಗೆ ಮಾಡಿದ ಸಾಲವನ್ನೇ ಇನ್ನೂ ತೀರಿಸದ ಹಿನ್ನೆಲೆಯಲ್ಲಿ ಪಾಲಕರ ಬಳಿ ಹಣವಿರಲಿಲ್ಲ. ನಂತರ ಸಂಬಂಧಿಕರ ಒತ್ತಾಯದ ಮೇರೆಗೆ ಪತ್ನಿಯನ್ನು ಮನೆಗೆ ಸೇರಿಸಿದ ಪತಿ ಬಾಲಾಜಿ, ರೂಮ್‌ನಲ್ಲಿ ಕೂಡಿ ಹಾಕಿ ಆಹಾರ ಕೊಡದೆ ಹಿಂಸಿಸುತ್ತಿದ್ದ.
ಇದನ್ನೂ ಓದಿ:ಮಂಗಳ ಗ್ರಹದ ಮೇಲಿನ ರೋವರ್​ ಚಾಲಕಿ, ಭಾರತ ಮೂಲದ ಮಹಿಳೆ!
ಮಗಳ ರೋಧನೆ ಕಂಡು ಮರುಗಿದ ಪಾಲಕರು ಮತ್ತೆ 30 ಲಕ್ಷ ರೂ.ಗಳನ್ನು ಕೊಟ್ಟಿದ್ದರು. ಇದಾದ ಕೆಲ ಸಮಯ ಸುಮ್ಮನಿದ್ದ ಪತಿ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದ್ದಾನೆ. ಪತ್ನಿಯ ಚಿನ್ನಾಭರಣ, ವರದಕ್ಷಿಣೆ ಹಣ ಪಡೆದು ಇದೀಗ ವಿಚ್ಛೇದನ ಕೊಡುವಂತೆ ಪತ್ನಿಗೆ ದುಂಬಾಲು ಬಿದ್ದಿದ್ದಾನೆ. ಪತಿಯ ವರ್ತನೆಯಿಂದ ನೊಂದ ಪತ್ನಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಬಾಲಾಜಿಗೆ ನೋಟಿಸ್ ನೀಡಿರುವ ಪೊಲೀಸರು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹತ್ಯೆ; ಹೆಂಡತಿಯೊಂದಿಗೆ ನಿತ್ಯ ಜಗಳ ಆಡುತ್ತಿದ್ದವನ ಸಾವಿಗೆ ಕಾರಣವೇನು?

ಉತ್ತರಾಖಂಡದ ಹೊಸ ಸಿಎಂ: ಶಾಸಕ ಪುಷ್ಕರ್​ ಸಿಂಗ್​ ಧಾಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
