ಬೆಂಗಳೂರು:ಪ್ರೀತಿಸಿ ಮದುವೆಯಾಗಿದ್ದ ಟೆಕ್ಕಿಯೊಬ್ಬ ವರದಕ್ಷಿಣೆ ತರಲು ನಿರಾಕರಿಸಿದ ಪತ್ನಿಗೆ ಮೊಬೈಲ್‌ನಲ್ಲಿ ತಲಾಖ್ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಿ.ಎಲ್. ರಾಮಯ್ಯ ಲೇಔಟ್ ನಿವಾಸಿ 26 ವರ್ಷದ ಮಹಿಳೆ ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಪತಿ ಮೊಹಮ್ಮದ್ ತಾರಿಖ್ ಇಮ್ರಾನ್ ಹಾಗೂ ಈತನ ತಾಯಿ ಉಮೇಖೆರ್, ತಂದೆ ಮೊಹಮ್ಮದ್ ಾರೂಕ್ ಮತ್ತಿತರರ ವಿರುದ್ಧ ಮುಸ್ಲಿಂ ಮಹಿಳೆಯರ ಮದುವೆ ಹಕ್ಕು ರಕ್ಷಣೆ ಕಾಯ್ದೆ ಅಡಿ ಡಿ.ಜೆ. ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತ ಮಹಿಳೆ ಹಾಗೂ ಮೊಹಮ್ಮದ್ ತಾರಿಖ್ ಕಳೆದ 2 ವರ್ಷದ ಹಿಂದೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು. ಇಬ್ಬರ ಪ್ರೀತಿಯನ್ನು ಎರಡು ಕಡೆಯ ಕುಟುಂಬದವರು ಒಪ್ಪಿದ್ದರು. 2018ರ ಜನವರಿಯಲ್ಲಿ ನಿಶ್ಚಿತಾರ್ಥವಾಗಿತ್ತು. ಈ ವೇಳೆ ತಾರಿಖ್‌ನ ಪಾಲಕರು ವರದಕ್ಷಿಣೆಯಾಗಿ 1 ಕಾರು ಹಾಗೂ ಒಡವೆಗಳನ್ನು ಕೇಳಿದ್ದರು. ದೊಡ್ಡಮೊತ್ತದ ಹಣವಾಗಿದ್ದರಿಂದ 1 ವರ್ಷ ಕಾಲಾವಕಾಶವನ್ನು ಸಂತ್ರಸ್ತೆ ಪಾಲಕರು ಕೋರಿದ್ದರು. ಡಿಸೆಂಬರ್‌ನಲ್ಲಿ ಮದುವೆ ಮಾಡಿಕೊಟ್ಟಿದ್ದರು.
ಮದುವೆಯಾದ ಕೆಲ ತಿಂಗಳ ಬಳಿಕ ಅತ್ತೆ ಉಮೇಖೆರ್, ಕಾರು ಕೊಡಲಿಲ್ಲ ಎಂದು ಗಲಾಟೆ ತೆಗೆದಿದ್ದಳು. ಗೋವಾ ಪ್ರವಾಸಕ್ಕೆ ತೆರಳಿದ್ದ ವೇಳೆ ಮೊಹಮ್ಮದ್ ವರದಕ್ಷಿಣೆ ವಿಚಾರಕ್ಕೆ ಪತ್ನಿಯನ್ನು ನಿಂದಿಸಿ, ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಜನವರಿಯಲ್ಲಿ ಮನೆಯವರೆಲ್ಲ ಸೇರಿ ಹಲ್ಲೆ ನಡೆಸಿದ್ದರಿಂದ ಸಂತ್ರಸ್ತೆ ತವರು ಮನೆಗೆ ಹೋಗಿ ನೆಲೆಸಿದ್ದಳು.
ತವರು ಮನೆಗೆ ಬಂದ ಕೆಲ ದಿನಗಳ ಬಳಿಕ ಸಂತ್ರಸ್ತೆ, ‘ಆಗಿದ್ದು ಆಗಿದೆ. ಇನ್ನು ಮುಂದೆ ಕುಳಿತು ಮಾತನಾಡಿ ಸರಿಪಡಿಸಿಕೊಂಡು ಜೀವನ ನಡೆಸೋಣ’ ಎಂದು ಪತಿ ಮೊಹಮ್ಮದ್‌ಗೆ ಮೆಸೇಜ್ ಕಳುಹಿಸಿದ್ದಳು. ಈ ವೇಳೆ ಆತ ಮೂರು ಬಾರಿ ತಲಾಖ್ ಸಂದೇಶ ಕಳುಹಿಸಿದ್ದಾನೆ. ಏ.21ರಂದು ಮನೆ ಬಳಿ ಬಂದು ಗಲಾಟೆ ಮಾಡಿದ್ದಲ್ಲದೆ ಮನೆಯ ಕಿಟಕಿ ಗಾಜು ಒಡೆದು, ಮತ್ತೆ ಮೂರು ಬಾರಿ ತಲಾಖ್ ಹೇಳಿದ್ದಾನೆ. ನಿನಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿಹೋಗಿದ್ದಾನೆ. ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ ಪತಿ ಹಾಗೂ ಆತನ ಕುಟುಂಬದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರಿನಲ್ಲಿ ಕೋರಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
https://www.vijayavani.net/tripple-taluq-in-kundapur/
https://www.vijayavani.net/%e0%b2%97%e0%b2%b0%e0%b3%8d%e0%b2%ad%e0%b2%aa%e0%b2%be%e0%b2%a4-%e0%b2%92%e0%b2%aa%e0%b3%8d%e0%b2%aa%e0%b2%a6%e0%b3%8d%e0%b2%a6%e0%b2%95%e0%b3%8d%e0%b2%95%e0%b3%86-%e0%b2%a4%e0%b2%b2%e0%b2%be%e0%b2%96/
https://www.vijayavani.net/first-triple-talaq-case-registered-in-bengaluru/
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one × three =
Remember me
