ಮಂಡ್ಯ:ಸಕ್ಕರೆ ನಾಡು ಮಂಡ್ಯ ಭೀಕರ ಕೃತ್ಯವೊಂದಕ್ಕೆ ಸಾಕ್ಷಿಯಾಗಿದೆ. ಇಲ್ಲೊಬ್ಬ ವ್ಯಕ್ತಿ ಅಣ್ಣನ ಹೆಂಡತಿ ಹಾಗೂ ಮಗನನ್ನು ಹೊಡೆದು ಕಡಿದು ಕೊಲೆ ಮಾಡಿದ್ದಾನೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಇಂಥದ್ದೊಂದು ಭಯಂಕರ ಪ್ರಕರಣ ನಡೆದಿದೆ.
ಶಾಂತಮ್ಮ (40) ಮತ್ತು ಆಕೆಯ ಪುತ್ರ ಯಶ್ವಂತ್ (17) ಕೊಲೆಯಾದ ದುರ್ದೈವಿಗಳು. ಈಕೆಯ ಪತಿಯ ತಮ್ಮ ಸತೀಶ್ ಎಂಬಾತನೇ ಕೊಲೆ ಆರೋಪಿ. ಮಂಡ್ಯ ಜಿಲ್ಲೆಯ ಪಾಂಡವಪುರದ ಹೆಗ್ಗಡಹಳ್ಳಿಯಲ್ಲಿ ಈ ಪ್ರಕರಣ ನಡೆದಿದೆ.
ಇದನ್ನೂ ಓದಿ:ಒಬ್ಬ 14 ಫ್ಲ್ಯಾಟ್​ಗಳ ಒಡೆಯ, ಇನ್ನೊಬ್ಬ 15 ಸೈಟ್​ಗಳ ಮಾಲೀಕ: ಇಲ್ಲಿದೆ ಭ್ರಷ್ಟರ ಆಸ್ತಿ ವಿವರ!
ಇಂದು ಜಮೀನು ಬಳಿ ಜಗಳವಾದ ಬಳಿಕ ಈ ಕೊಲೆ ಪ್ರಕರಣ ನಡೆದಿದೆ. ಜಮೀನಿಗೆ ನೀರು ಹಾಯಿಸುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು, ಬಳಿಕ ಸತೀಶ್ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ್ದಲ್ಲದೆ ಕುಡುಗೋಲಿನಿಂದ ಕಡಿದು ಕೊಲೆ ಮಾಡಿದ್ದಾನೆ. ಆ ನಂತರ ಆತ ಪೊಲೀಸರಿಗೆ ಶರಣಾಗಿದ್ದು, ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್​ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲು ಚುನಾವಣಾ ಆಯೋಗಕ್ಕೆ ಮನವಿ: ಡಿ.ಕೆ.ಶಿವಕುಮಾರ್ ವಿರುದ್ಧವೂ ದೂರು

ದರ್ಗಾದಲ್ಲಿನ ಶಿವಲಿಂಗ ಪೂಜೆ ಅವಕಾಶ ನಮಗೆ ಬೇಕು: ನಿರ್ಮಲಾ ಸೀತಾರಾಮನ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − 3 =
Remember me
