ಮೈಸೂರು:ಗೃಹಿಣಿಗೆ ಮೆಸೇಜ್​ ಮಾಡಿದ್ದಕ್ಕೆ ಯುವಕನ ಕೊಲೆಯಾಗಿದೆ ಎಂದು ಆರಂಭದಲ್ಲಿ ಎಲ್ಲರು ನಂಬಿದ್ದ ಪ್ರಕರಣವೀಗ ರೋಚಕ ತಿರುವು ಪಡೆದುಕೊಂಡಿದೆ. ಮತ್ತೊಬ್ಬನ ಮೇಲಿನ ದ್ವೇಷಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವುದು ಬಹಿರಂಗವಾಗಿದೆ.
ಹೆಂಡತಿಗೆ ಮೆಸೇಜ್ ಮಾಡಿದ ಎಂಬ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇದೇ ಗಲಾಟೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲು ಜತೆಗಿದ್ದ ಸ್ನೇಹಿತನನ್ನೇ ಕೊಲೆ ಮಾಡಿ, ಆ ಕೊಲೆಯನ್ನು ಮತ್ತೊಬ್ಬನ ಮೇಲೆ ಹಾಕಿ, ಸೇಡು ತೀರಿಸಿಕೊಳ್ಳಲು ಯತ್ನಿಸಿದ ದುಷ್ಕರ್ಮಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ವಿವರಣೆಗೆ ಬರುವುದಾದರೆ, ಎಚ್‌.ಡಿ. ಕೋಟೆ ತಾಲೂಕಿನ ನೇರಳೆಹುಂಡಿ ಗ್ರಾಮದಲ್ಲಿ ಭಾನುಪ್ರಕಾಶ್ ಅಲಿಯಾಸ ಸಿದ್ದ ಎಂಬ ಯುವಕನ‌ ಬರ್ಬರ ಕೊಲೆಯಾಗಿತ್ತು. ಅದೇ ಗ್ರಾಮದ ಎನ್.ಪ್ರಕಾಶ್ ಸೇರಿದಂತೆ ಸಿದ್ದನ ಜತೆ ಗಲಾಟೆ ಮಾಡಿದ್ದ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹೆಂಡತಿಗೆ ಮೆಸೇಜ್​ ಮಾಡಿದ್ದಕ್ಕೆ ಸಿದ್ದನ ಜತೆ ಪ್ರಕಾಶ ಜಗಳವಾಡಿದ್ದ.
ಇದನ್ನೂ ಓದಿ:ಅಭಿಮಾನಿಗಳ ಜತೆ ಕಿಚ್ಚನ ಅದ್ಧೂರಿ ಹುಟ್ಟುಹಬ್ಬ ಆಚರಣೆ: ಹೊಸ ಚಿತ್ರಗಳ ಅಪ್​ಡೇಟ್​ ನೋಡಿ ಫ್ಯಾನ್ಸ್​ ಖುಷ್​

ಆದರೆ ತನಿಖೆ ನಡೆಸಿದಾಗ ಕೊಲೆ ಮಾಡಿರುವುದು ಪ್ರಕಾಶ್​ ಅಲ್ಲ, ಸಿದ್ದನ ಆತ್ಮೀಯ ಸ್ನೇಹಿತ ದಿನೇಶ್ ಎಂಬುದು ಬಹಿರಂಗವಾಗಿದೆ. ಆರೋಪಿ ದಿನೇಶ್, ತನ್ನ ಗೆಳೆಯ ಭೀಮನ ಜತೆ ಸೇರಿ ಸಿದ್ದನನ್ನು ಕತ್ತು ಸೀಳಿ ಕೊಲೆ ಮಾಡಿದ್ದರು. ಬಳಿಕ ಗ್ರಾಮದ ಹೊರ ವಲಯದಲ್ಲಿ ಶವ ಬಿಟ್ಟು, ಡ್ರ್ಯಾಗರ್ ಅನ್ನು ಕಬಿನಿ ನದಿಗೆ ಬಿಸಾಕಿದ್ದರು. ಹಳೇ ಸೇಡಿನ ಹಿನ್ನೆಲೆಯಲ್ಲಿ ಈ ಕೊಲೆಯನ್ನು ಅದೇ ಗ್ರಾಮದ ಎನ್.ಪ್ರಕಾಶ್ ಎಂಬುವರ ಮೇಲೆ ಬರುವಂತೆ ದಿನೇಶ್​ ಮಾಡಿರುವುದು ಬೆಳಕಿಗೆ ಬಂದಿದೆ.
ಮೊಬೈಲ್ ಟವರ್ ಲೊಕೇಶನ್ ಮೂಲಕ ಕೊಲೆ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿಗಳಿಬ್ಬರು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಎನ್.ಪ್ರಕಾಶ್ ಮೇಲಿನ ಹಳೆಯ ದ್ವೇಷಕ್ಕೆ ಆತ್ಮೀಯ ಸ್ನೇಹಿತನನ್ನೇ ದಿನೇಶ್​ ಕೊಂದಿದ್ದಾನೆ. ಈ ಸಂಬಂಧ ಅಂತರಸಂತೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.
ಏಷ್ಯಾಕಪ್​ನಲ್ಲಿ ಇಂದು ಭಾರತ-ಪಾಕ್​ ಸಮರ; ಕಾಡುತ್ತಿದೆ ಮಳೆ ಭೀತಿ

video: ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಸೂಪರ್ ಓವರ್‌ನಲ್ಲಿ ತಂಡವನ್ನು ಗೆಲ್ಲಿಸಿದ ರಿಂಕು ಸಿಂಗ್

ವಿರಳ ವಿರಹ ಗೀತೆ: ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ವಿಮರ್ಶೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 × 4 =
Remember me
