ಬೆಂಗಳೂರು:ಪತ್ನಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ಸ್ನೇಹಿತನನ್ನು ಮಾರಕಾಸ್ತ್ರದಿಂದ ಹತ್ಯೆ ಮಾಡಿದ ಚಾಲಕ ಹಾಗೂ ಆತನ ಇನ್ನೊಬ್ಬ ಗೆಳೆಯನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರದ ಯೋಗೇಶ್ (34) ಕೊಲೆಯಾದ ವ್ಯಕ್ತಿ. ಮಹೇಶ್ (32), ಪ್ರಶಾಂತ್(37) ಬಂಧಿತರು. ಈ ಮೂವರೂ ಸ್ನೇಹಿತ ರಾಗಿದ್ದು, ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಯೋಗೇಶ್ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರೆ, ಮಹೇಶ್ ಚಾಲಕನಾಗಿದ್ದ. ಪ್ರಶಾಂತ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ. ಇತ್ತೀಚೆಗೆ ಮಹೇಶ್ ಪತ್ನಿ ಬಗ್ಗೆ ಯೋಗೇಶ್ ಅಶ್ಲೀಲವಾಗಿ ಮಾತನಾಡಿದ್ದ. ಇದರಿಂದ ಆಕ್ರೋಶಗೊಂಡ ಮಹೇಶ್ ಸ್ನೇಹಿತನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ.
ಅದರಂತೆ, ಆ. 8ರಂದು ರಾತ್ರಿ ಪರಪ್ಪನ ಅಗ್ರಹಾರದ ಎಸಿಎಸ್ ಲೇಔಟ್ ಬಯಲು ಪ್ರದೇಶಕ್ಕೆ ಪಾರ್ಟಿ ಮಾಡುವ ನೆಪದಲ್ಲಿ ಯೋಗೇಶ್​ನನ್ನು ಕರೆದುಕೊಂಡು ಬಂದಿದ್ದ. ಸ್ನೇಹಿತ ಪ್ರಶಾಂತ್ ಅಲ್ಲೇ ಸಮೀಪದಲ್ಲಿದ್ದು, ಆತನನ್ನು ಕರೆದುಕೊಂಡು ಬರುವುದಾಗಿ ಹೇಳಿ ಹೋಗಿದ್ದ. ಮೊದಲೇ ರೂಪಿಸಿದ ಸಂಚಿನಂತೆ ಪ್ರಶಾಂತ್ ಮೂಲಕ ಮಾರಕಾಸ್ತ್ರ ತರಿಸಿದ್ದ ಮಹೇಶ್, ಹಲ್ಲೆ ನಡೆಸಿ ಯೊಗೇಶ್​ನ ಹತ್ಯೆ ಮಾಡಿದ್ದ. ನಂತರ ಸ್ನೇಹಿತನ ಜತೆ ಸ್ಥಳದಿಂದ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight + 12 =
Remember me
