ವಿಜಯನಗರ:ಪ್ರೇಯಸಿಯೊಂದಿಗೆ ಮದುವೆ ಆಗಲು ಆಗಲಿಲ್ಲ ಎಂಬ ಕಾರಣಕ್ಕೆ ಪ್ರೇಮಿ ಆಕೆಯನ್ನು ಕೊಲೆ ಮಾಡಿ, ಅವಳ ರುಂಡ ಹಿಡಿದುಕೊಂಡು ಪೊಲೀಸ್ ಸ್ಟೇಷನ್​ಗೆ ಬಂದಿದ್ದು, ಹತ್ಯೆಗೀಡಾದವಳ ಅಣ್ಣ ಕೊಲೆಗಾರನನ್ನು ತನಗೊಪ್ಪಿಸಿ ಎಂದು ಠಾಣೆಯ ಮುಂದೆ ರೊಚ್ಚಿಗೆದ್ದ ಪ್ರಕರಣವೂ ನಡೆದಿದೆ.
ನಿರ್ಮಲಾ (23 ) ಭೀಕರವಾಗಿ ಹತ್ಯೆಯಾದ ಯುವತಿ. ಭೋಜರಾಜ ಎನ್ನುವ ಪಾಗಲ್ ಪ್ರೇಮಿ, ತಾನು ಪ್ರೀತಿಸುತ್ತಿದ್ದ ನಿರ್ಮಲಾ (23) ಎಂಬಾಕೆಯನ್ನು ಮದುವೆಯಾಗಲು ಆಗಲಿಲ್ಲ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾನೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ಈ ಕೊಲೆ ನಡೆದಿದೆ.
ಆಕೆಯನ್ನು ಮದುವೆಯಾಗಲು ಅವಳ ಮನೆಯವರು ಒಪ್ಪಲಿಲ್ಲ ಎಂಬ ಕಾರಣಕ್ಕೆ ಎರಡು ತಿಂಗಳ ಹಿಂದೆ ಈತ ಬೇರೊಬ್ಬಳನ್ನು ಮದುವೆಯಾಗಿದ್ದ. ಆದರೆ ನಿರ್ಮಲಾಳ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಈತ, ಬೇರೊಂದು ಊರಿನಲ್ಲಿ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ, ಪರೀಕ್ಷೆಗಾಗಿ ಓದಲು ಊರಿಗೆ ಬಂದಿದ್ದರಿಂದು ಇಂದು ಆಕೆಯ ಕೊಲೆ ಮಾಡಿ ರುಂಡ ಖಾನಾಹೊಸಹಳ್ಳಿ ಪೊಲೀಸ್​ ಠಾಣೆಗೆ ಹಿಡಿದುಕೊಂಡು ಬಂದಿದ್ದ.
ಈ ಸಂದರ್ಭದಲ್ಲಿ ಪೊಲೀಸ್ ಠಾಣೆ ಎದುರು ಜಮಾಯಿಸಿದ ನಿರ್ಮಲಾ ಕಡೆಯವರು, ಆರೋಪಿಯನ್ನು ತಮಗೆ ಒಪ್ಪಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ತಂಗಿಯನ್ನು ಕೊಂದವನನ್ನು ನಮಗೆ ಕೊಡಿ ಎಂದು ಅಣ್ಣ ಶ್ರೀಕಾಂತ್ ರೊಚ್ಚಿಗೆದ್ದ ಪ್ರಸಂಗವೂ ನಡೆಯಿತು. ಶ್ರೀಕಾಂತ್​ನನ್ನು ಹಿಡಿಯಲು, ನಿರ್ಮಲಾ ಕುಟುಂಬಸ್ಥರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಕೂಡ್ಲಿಗಿ ಡಿವೈಎಸ್​​ಪಿ ಹರೀಶ್ ರೆಡ್ಡಿ, ಸಿಪಿಐ ಸೋಮಶೇಖರ್, ವಸಂತ್ ಅಸೋದೆ, ಪಿಎಸ್ಐ ತಿಮ್ಮಣ್ಣ ಚಾಮನೂರು, ನಾಗರತ್ನ ನೇತೃತ್ವದಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ಆರೋಪಿಯನ್ನು ಜೀಪ್​ನಲ್ಲಿ ಹತ್ತಿಸಿಕೊಂಡು ಕರೆದೊಯ್ದಿದ್ದಾರೆ.
ಕೂಡ್ಲಿಗಿಯಲ್ಲೊಂದು ಬೆಚ್ಚಿಬೀಳೋ ಘಟನೆ: ಮದುವೆಗೆ ಒಪ್ಪಲಿಲ್ಲವೆಂದು ರುಂಡ ಕಡಿದು ಪೊಲೀಸ್​ ಠಾಣೆಗೆ ತಂದ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + 8 =
Remember me
