ಬೆಂಗಳೂರು:ಮನೆ ಮುಂದೆ ನಾಯಿಯನ್ನು ಕರೆದುಕೊಂಡು ಬಂದು ವಿಚಾರಣೆ ಮಾಡಿಸುತ್ತೀಯಾ ಎಂದು ಆರೋಪಿಸಿದ ಈ ಆರೋಪಿಗಳು ಈತನೊಂದಿಗೆ ಜಗಳಕ್ಕೆ ಇಳಿದಿದ್ದಾರೆ. ಪರಿಣಾಮ ನಾಯಿ ಮಾಲೀಕ ಕೊಲೆಯಾಗಿ ಹೋಗಿದ್ದಾನೆ! ಅಂದ ಹಾಗೆ ಇದೇ ವಿಚಾರವಾಗಿ ಈ ಹಿಂದೆಯೂ ಈ ಎರಡೂ ಪಕ್ಷಗಳ ನಡುವೆ ಜಗಳವಾಗಿತ್ತು. ಅದು ಪೊಲೀಸ್​ ಠಾಣೆಯ ಮೆಟ್ಟಿಲನ್ನೂ ಏರಿತ್ತು.
ಇದನ್ನೂ ಓದಿ:ಪಕ್ಷಿಯಿಂದ ನಾಯಿಗೆ ಟ್ವಿಟರ್​ ಲೋಗೋ ಬದಲಿಸಿದ ಎಲಾನ್​ ಮಸ್ಕ್​: ಕಾರಣ ಹೀಗಿದೆ…
ಮನೆ ಮುಂದೆ ನಾಯಿ ಕರೆದುಕೊಂಡು ಬಂದು ಗಲೀಜು ಮಾಡಿಸ್ತಿಯಾ ಎನ್ನೊ ವಿಚಾರಕ್ಕೆ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು ಈ ಘಟನೆ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮುನಿರಾಜು ಎಂದು ಗುರುತಿಸಲಾಗಿದೆ. ಇದೇ ಘಟನೆಯಲ್ಲಿ ಮತ್ತೊರ್ವ ವ್ಯಕ್ತಿ ಮುರುಳಿ ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ ಕೊಲೆ ಆರೋಪಿಗಳನ್ನು ಪ್ರಮೋದ್, ರವಿಕುಮಾರ್ ಮತ್ತು ಪಲ್ಲವಿ ಎಂದು ಗುರುತಿಸಲಾಗಿದೆ.
ಪ್ರಮೋದ್ ಎಂಬಾತ ಮುನಿರಾಜು ಎಂಬುವವರ ಮನೆ ಮುಂದೆ ನಿತ್ಯವೂ ನಾಯಿಯನ್ನು ಕರೆದುಕೊಂಡು ಬರ್ತಿದ್ದ. ಈ ಹಿಂದೆ ಪ್ರಮೋದ್ ಮತ್ತು ರವಿಕುಮಾರ್, ನಾಯಿ ಜತೆಗೆ ಬಂದು ಮುನಿರಾಜು ಮನೆ ಮುಂದೆ ಸಿಗರೇಟ್ ಸೇದಿ ಸಮಸ್ಯೆ ಉಂಟುಮಾಡಿದ್ದರು. ಈ ವಿಚಾರಕ್ಕೆ ಮುನಿರಾಜು, ಪೊಲೀಸ್ ಠಾಣೆಗೆ ದೂರು ನೀಡಿದ್ದ.
ಈ ಸಂದರ್ಭ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಇಬ್ಬರಿಗು ಕರೆದು ಬೈದು ಬುದ್ದಿ ಹೇಳಿ ಮುಚ್ಚಳಿಕೆ ಬರೆಸಲಾಗಿತ್ತು. ಠಾಣೆಗೆ ಹೋಗಿ ಬಂದು ಮರುದಿನ ಮತ್ತೆ ಗಲಾಟೆಯಾಗಿದೆ. ಗಲಾಟೆ ವೇಳೆ ಮುನಿರಾಜು ಮೇಲೆ ಪ್ರಮೋದ್ ಮತ್ತು ರವಿಕುಮಾರ್ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಈ ಕೊಲೆಗೆ ಪ್ರಮೋದ್ ಪತ್ನಿ ಪಲ್ಲವಿ ಸಹ ಸಾಥ್ ನೀಡಿದ್ದಾರೆ ಎನ್ನುವ ಆರೋಪಿಸಲಾಗಿದೆ. ಈ ಘಟನೆಯಲ್ಲಿ ಮುನಿರಾಜು 68 ಸಾವು ಹಾಗು ಮುರುಳಿ ಎಂಬಾತನ ಮೇಲೂ ತೀವ್ರ ಹಲ್ಲೆ ಮಾಡಲಾಗಿದೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + two =
Remember me
