ಬೆಂಗಳೂರು:ತಂಗಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಶಂಕೆ ಮೇರೆಗೆ ಬಾಮೈದನನ್ನು ಕೊಂದ ತರಕಾರಿ ವ್ಯಾಪಾರಿ ಕೆಂಗೇರಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಸತೀಶ್ ಕುಮಾರ್ (25) ಕೊಲೆಗೀಡಾದ ಯುವಕ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ವೆಂಕಟೇಶ್ ಸೋಮವಾರ ಮಧ್ಯಾಹ್ನ ಈ ಕೃತ್ಯ ಎಸಗಿದ್ದು, ಮಂಗಳವಾರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಕೌಟುಂಬಿಕ ವಿಚಾರವಾಗಿ ಚಿಕ್ಕನಹಳ್ಳಿಯ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಬಾವ-ಬಾಮೈದನ ನಡುವೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಕೆರಳಿದ ವೆಂಕಟೇಶ್, ತರಕಾರಿ ಕತ್ತರಿಸಲು ಇಟ್ಟುಕೊಂಡಿದ್ದ ಚಾಕುವಿನಿಂದ ಸತೀಶ್‌ನ ಕುತ್ತಿಗೆ, ತೊಡೆ ಮತ್ತು ಹೊಟ್ಟೆಗೆ ಇರಿದು ಹತ್ಯೆ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಮಗಳೂರಿನ ಸತೀಶ್‌ನ ತಂಗಿಯನ್ನು ವೆಂಕಟೇಶ್ ವಿವಾಹವಾಗಿದ್ದು, ಕೆಂಗೇರಿಯಲ್ಲಿ ದಂಪತಿ ನೆಲೆಸಿದೆ. ನಗರದಲ್ಲಿ ಫುಡ್‌ ಡೆಲಿವರಿ ಬಾಯ್ ಆಗಿದ್ದ ಸತೀಶ್‌ಗೆ ವೆಂಕಟೇಶ್‌ನ ವಿವಾಹಿತ ಸೋದರಿ ಜತೆಗೆ ಸಲುಗೆ ಬೆಳೆದಿತ್ತು. ತನ್ನ ಪತಿ ಮತ್ತು ಮಗು ಬಿಟ್ಟು ಕೆಂಗೇರಿ ಉಪ ನಗರದಲ್ಲಿ ಸತೀಶ್ ಜತೆ ವೆಂಕಟೇಶ್ ತಂಗಿ ಲಿವಿಂಗ್ ಟುಗೆದರ್‌ನಲ್ಲಿ ನೆಲೆಸಿದ್ದಳು.
ಇತ್ತೀಚೆಗೆ ಇಬ್ಬರ ಮಧ್ಯೆ ಮನಸ್ತಾಪ ಬೆಳೆದು ಸತೀಶ್ ದೂರವಾಗಿದ್ದ. ತನ್ನ ತಂಗಿ ಜತೆ ಅಕ್ರಮ ಸಂಬಂಧ ಹೊಂದಿ ಬದುಕು ನಾಶ ಮಾಡಿದ ಎಂದು ಬಾಮೈದ ಸತೀಶ್ ಮೇಲೆ ವೆಂಕಟೇಶ್ ಸಿಟ್ಟುಗೊಂಡಿದ್ದ. ಇದೇ ಹೊತ್ತಿಗೆ ಸತೀಶ್ ಜತೆ ತಂಗಿ ಗಲಾಟೆ ವಿಚಾರ ತಿಳಿದು ಮತ್ತಷ್ಟು ಕೆರಳಿದ್ದ.
ಮಾತುಕತೆ ಸಲುವಾಗಿ ಸೋಮವಾರ ಚಿಕ್ಕನಹಳ್ಳಿ ಬಳಿಗೆ ವೆಂಕಟೇಶ್ ಕರೆಸಿಕೊಂಡಿದ್ದ. ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿದೆ. ಬಾಮೈದನ ಹತ್ಯೆ ಮಾಡಿದ ಬಳಿಕ ಶ್ರೀರಂಗಪಟ್ಟಣಕ್ಕೆ ತೆರಳಿದ ವೆಂಕಟೇಶ್, ಅಲ್ಲಿ ತನ್ನ ರಕ್ತಸಿಕ್ತ ಬಟ್ಟೆಗಳನ್ನು ಬದಲಿಸಿ ರಾತ್ರಿಯಿಡೀ ಏಕಾಂಗಿಯಾಗಿ ನದಿ ದಡೆಯಲ್ಲಿ ಕುಳಿತಿದ್ದಾನೆ. ಕೊನೆಗೆ ಬಂಧನ ಭೀತಿಯಿಂದ ಕೆಂಗೇರಿ ಠಾಣೆಗೆ ಬಂದು ವೆಂಕಟೇಶ್ ಶರಣಾಗಿದ್ದಾನೆ. ತನ್ನ ಬಾಮೈದನನ್ನು ಹತ್ಯೆ ಮಾಡಿರುವುದಾಗಿ ಪೊಲೀಸರಿಗೆ ಹೇಳಿದ್ದಾನೆ. ಈ ವಿಚಾರ ತಿಳಿದ ಕೂಡಲೇ ಪೊಲೀಸರು, ಆತನನ್ನು ವಶಕ್ಕೆ ಪಡೆದು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋದಾಗ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ವಯಸ್ಕ ಪುತ್ರಿಯರ ಜತೆ ನದಿಗೆ ಹಾರಿದ ತಾಯಿ; ಮೂವರ ಶವವೂ ಪತ್ತೆ

ಜಿಮ್​ನಲ್ಲಿ ಮಾತಾಡ್ತ ಮಾತಾಡ್ತ ಕುಸಿದು ಬಿದ್ದು ಸಾವಿಗೀಡಾದ ಬಾಡಿಬಿಲ್ಡರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + eleven =
Remember me
