ಚಿಕ್ಕಬಳ್ಳಾಪುರ:ಇಂದು ಪ್ರೇಮಿಗಳ ದಿನ, ಪ್ರೇಮಿಗಳ ಪಾಲಿನ ಸ್ವರ್ಗತಾಣ ನಂದಿಗಿರಿಧಾಮದಲ್ಲಿ ಪ್ರೇಮಿಗಳು ಕೈ ಕೈ ಹಿಡಿದು ಪ್ರೇಮಿಗಳ ದಿನ ಆಚರಣೆ ಮಾಡುತ್ತಾ ಖುಷಿ ಖುಷಿಯಿಂದ ಕಾಲ ಕಳೆಯುತ್ತಿರುತ್ತಾರೆ. ಆದರೆ ಟಿಪ್ಪು ಡ್ರಾಪ್ ನಿಂದ ಬಿದ್ದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರೋ ಪ್ರಕರಣ ಬಯಲಾಗಿದೆ. ಮೂರು ದಿನಗಳ ಹಿಂದ ಅನಾಥವಾಗಿದ್ದ ಬೈಕ್ ಹಿಂದೆ ಬಿದ್ದಿದ್ದ ಪೊಲೀಸರಿಗೆ ಯುವಕನ ಆತ್ಮಹತ್ಯೆ ಪ್ರಕರಣ ಇಂದು ಬಯಲಿಗೆ ಬಂದಿದ್ದು ಪ್ರೇಮಿಗಳು ಶಾಕ್ ಆಗುವಂತಾಗಿದೆ.
ಕಳೆದ ಶನಿವಾರ ತನ್ನ ಸ್ನೇಹಿತನ ಕೆಎ 11 ಇಎಸ್ 9027 ನಂಬರಿನ ಡ್ಯೂಕ್ ಬೈಕ್ ನಲ್ಲಿ ನಂದಿಬೆಟ್ಟಕ್ಕೆ ಬಂದ ಅರುಣ್, ಪಾರ್ಕಿಂಗ್ ಪ್ಲಾಟ್​ನಲ್ಲಿ ತನ್ನ ಬೈಕ್ ನಿಲ್ಲಿಸಿ ಅಲ್ಲಿದ್ದ ಲಾಕ್​ರೂಂ ನಲ್ಲಿ ತನ್ನ ಹೆಲ್ಮೆಟ್ ಇಟ್ಟು ಸೀದಾ ನಂದಿಬೆಟ್ಟದ ಮೇಲ್ಭಾಗಕ್ಕೆ ಹೋಗಿದ್ದಾನೆ. ಆದರೆ ಶನಿವಾರ ಬೆಟ್ಟದ ಮೇಲೆ ಹೋದವನು ಮರಳಿ ವಾಪಾಸ್ ಬಂದಿಲ್ಲ. ಶನಿವಾರ, ಭಾನುವಾರ, ಸೋಮವಾರ ಕಾದರೂ ಅರುಣ್ ವಾಪಾಸ್ ಬಾರದ ಹಿನ್ನೆಲೆ ಅನುಮಾನಗೊಂಡ ಹೆಲ್ಮೆಟ್ ಲಾಕ್ ರೂಂ ಮಾಲೀಕರು ಪೊಲೀಸರಿಗೆ ತಿಳಿಸಿದ್ದು ಸಿ ಸಿ ಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಅರುಣ್ ಹೋಗಿರುವ ವಿಡಿಯೋ ಸಿಕ್ಕಿದೆ. ಆದರೆ ವಾಪಾಸ್ ಬಂದಿರೋ ವಿಡಿಯೋ ಸಿಕ್ಕಿಲ್ಲ. ಹೀಗಾಗಿ ಬೆಟ್ಟವೆಲ್ಲಾ ತಡಿಕಾಡಿದಾಗ ಟಿಪ್ಪು ಡ್ರಾಪ್ ನ ಜಾಗದಲ್ಲಿ ಅರುಣ್ ಬ್ಯಾಗ್ ಪತ್ತೆಯಾಗಿದೆ.
ಇನ್ನೂ ಬ್ಯಾಗ್ ನಲ್ಲಿ ಡೆತ್ ನೋಟ್ ಸಹ ಪತ್ತೆಯಾಗಿದ್ದು, ಡೆತ್ ನೋಟ್​ನಲ್ಲಿ ಸಾವಿಗೆ ನಿಖರ ಕಾರಣ ಬರೆದಿಲ್ಲವಾದರೂ ‘ತಾನು ಸಂತೋಷವಾಗಿ ಸಾಯುತ್ತಿದ್ದೇನೆ. ರಾಜಕೀಯ ವ್ಯವಸ್ಥೆ ಸರಿ ಇಲ್ಲ. ನಟ ಉಪೇಂದ್ರರ ಪ್ರಜಾಕೀಯ ಪಕ್ಷದ ಸಿದ್ದಾಂತಗಳನ್ನ ಜನ ಬೆಂಬಲಿಸಿಬೇಕು’ ಎಂಬ ಅಭಿಲಾಷೆ ಹೊರ ಹಾಕಿದ್ದಾನೆ ಎನ್ನಲಾಗಿದೆ. ಇನ್ನೂ ಆತ್ಮಹತ್ಯೆ ಮಾಡಿಕೊಂಡ ಅರುಣ್ ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅಂಬರಹಳ್ಳಿ ನಿವಾಸಿಯಾಗಿದ್ದು, ಬೆಂಗಳೂರಿನ ಬಿಟಿಎಂ ಲೇಔಟ್​ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದು ಸ್ನೇಹಿತರು ಜೊತೆ ಪಿಜಿಯಲ್ಲಿ ಉಳಿದುಕೊಂಡಿದ್ದ. ಇನ್ನೂ ಆತ್ಮಹತ್ಯೆ ಮಾಡಿಕೊಂಡ ಅರುಣ್​ಗೆ ಅಂತಹ ಹೇಳಿಕೊಳ್ಳುವ ಸಮಸ್ಯೆ ಇಲ್ಲವಾದರೂ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂಬುದೇ ವಿಚಿತ್ರವಾಗಿದೆ.
ಸದ್ಯ ಟಿಪ್ಪು ಡ್ರಾಪ್ ನಿಂದ ಕೆಳಗೆ ಬಿದ್ದಿರೋ ಅರುಣ್ ಮೃತದೇಹ ಪತ್ತೆ ಮಾಡಲು ನಂದಿಬೆಟ್ಟದ ದುರ್ಗಮ ಹಾದಿಯಲ್ಲಿ ಸ್ಥಳೀಯರ ಸಹಕಾರದೊಂದಿಗೆ ನಂದಿಗಿರಿಧಾಮ ಪೊಲೀಸರು, ಹಾಗೂ ಮೃತನ ಸಂಬಧಿಕರು ತೆರಳಿದ್ದು ಮೃತದೇಹ ಬಂಡೆಯ ಮೇಲ್ಭಾಗದಲ್ಲಿ ಸಿಲುಕಿ ಹಾಕಿಕೊಂಡಿದ್ದು ಮೃತದೇಹ ತರಲು ಪ್ರಯತ್ನ ನಡೆಸಿದ್ದಾರೆ. ಓಟ್ಟಿನಲ್ಲಿ ಪ್ರೇಮಿಗಳ ದಿನವೇ ನಂದಿಬೆಟ್ಟದಲ್ಲಿ ಯವಕನ ಆತ್ಮಹತ್ಯೆ ಪ್ರಕರಣ ಬಯಲಾಗಿದ್ದು ಪ್ರೇಮಿಗಳಿಗೂ ಅರೆಕ್ಷಣ ಭಯಪಡುವಂತಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 16 =
Remember me
