ವಿಜಯಪುರ:ಇಲ್ಲೊಬ್ಬ ವ್ಯಕ್ತಿ ಅಪ್ರಾಪ್ತಳನ್ನು ಮದುವೆಯಾಗಿದ್ದು, ಆತನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಕಾರಣದಿಂದ ನೊಂದಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ಕಾಟನಪೇಟೆ ಠಾಣೆ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣದ ಪ್ರಮುಖ ಆರೋಪಿ, ಯುವಕ ಶಶಿಧರ ಭಜಂತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಆತನ ಯುವಕ ಶಿವಾನಂದ (ಶಶಿಧರ) ಭಜಂತ್ರಿ ಮೃತದೇಹ ವಿಜಯಪುರಕ್ಕೆ ಆಗಮಿಸಿದ್ದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ತಮ್ಮ ಮನೆ ಮಗನಿಗೆ ಅನ್ಯಾಯ ಆಗಿದೆ ಎನ್ನುತ್ತಿರುವ ಕುಟುಂಬಸ್ಥರು ಬಸವನ ಬಾಗೇವಾಡಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮೃತದೇಹ ಇಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಸಂದರ್ಭ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ವಡವಡಗಿ ಗ್ರಾಮಸ್ಥರು ಹಾಗೂ ಸಂಬಂಧಿಕರು ಯುವಕನ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭ ಕುಟುಂಬಸ್ಥರನ್ನು ಪೊಲೀಸರು ತಡೆದಿದ್ದಾರೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ ಅರಿವು ಅಗತ್ಯ
ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ತನ್ನ ಸಾವಿಗೆ ಕಾರಣರಾದವರ ಹೆಸರು ಹೇಳಿದ್ದು, ಅವರನ್ನು ಬಂಧಿಸಬೇಕು ಯುವಕನ ಸಾವಿಗೆ ನ್ಯಾಯ ಕೊಡಬೇಕು ಎಂದು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಯುವಕ, “ಆಕೆ ನನ್ನನ್ನು ಆರು ವರ್ಷ ಲವ್ ಮಾಡಿ ಮದುವೆ ಮಾಡಿಕೊಂಡಿದ್ದಾಳೆ. ಇವಾಗ ಜಾತಿ ಸಲುವಾಗಿ ಅವರ ಅಪ್ಪ ಅವ್ವ ಮತ್ತೆ ಅವರ ಕಾಕಾ ಅವರಜ್ಜಿ ಮತ್ತೆ ಅವರು ಸಮಾಜದವ್ರು ಮತ್ತೆ ಡೆಂಗಿ ಬಸವರಾಜ ಇವೆಲ್ಲಾ ನನ್ನ ಸಾವಿಗೆ ಕಾರಣರಾಗಿದ್ದಾರೆ.
ಇದನ್ನೂ ಓದಿ:ಪೋಕ್ಸೋ ಕಾಯ್ದೆ ಅಡಿ ಬಂಧಿತ ಪಾದ್ರಿ ವಿರುದ್ಧ ಪ್ರತಿಭಟನೆ; ಕೋರ್ಟ್​ಗೆ ಕರೆದೊಯ್ಯುವಾಗ ಮುತ್ತಿಗೆ ಯತ್ನ…
ಆಕೆ ಇವಾಗ ನನಗೆ ಉಲ್ಟಾ ಮಾತಾಡ್ತಾ ಇದ್ದಾಳೆ. ನನ್ನ ಹೆಂಡತಿ ನನ್ನ ಜೊತೆ ಆರು ವರ್ಷದಿಂದ ಮಕ್ಕೊಂಡು ಸಂಸಾರ ಮಾಡಿದ್ದಾಳೆ. ನನ್ನತ್ರ ಫೋಟೋ ವಿಡಿಯೋ ಇದೆ. ಅದರ ಜೊತೆ ಮದುವೆ ಪೋಟೋ ವಿಡಿಯೋ ಕೂಡ ಇದೆ. ಇದನ್ನೆಲ್ಲಾ ಪೊಲೀಸರಿಗೆ ಹೇಳಿದ್ರೆ ಕಂಪ್ಲೇಟ್ ತೊಗೋತಾ ಇಲ್ಲ. ನನಗೆ ಮೇಲಧಿಕಾರಿಗಳು ಎನ್‍ಕ್ವೈರಿ ಮಾಡಬೇಕು ಅಂತ ವಿನಂತಿ. ನನ್ನ ಸಾವಿಗೆ ಇವರೆಲ್ಲ ಕಾರಣ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಪ್ರತಿ ತಿಂಗಳಿಗೆ 20ಕ್ಕೂ ಹೆಚ್ಚು ಪೋಕ್ಸೋ ಕೇಸ್: ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ.ನಳಿನಿಕುಮಾರಿ ಹೇಳಿಕೆ
ಆತ್ಮಹತ್ಯೆ ಮಾಡಿಕೊಂಡ ಶಿವಾನಂದನಿಗೆ ಹುಡುಗಿಯನ್ನು ಮದುವೆಯಾಗಿದ್ದಕ್ಕೆ ಹೊಡೆಯುವುದಾಗಿ ಯುವತಿಯ ಮನೆಯವರು ಧಮ್ಕಿ ಹಾಕಿದ್ದರು ಎನ್ನಲಾಗಿದೆ. ಇದಲ್ಲದೇ ಆತನ ಮೇಲೆ ಬಾಲ್ಯವಿವಾಹ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣವೂ ದಾಖಲಾಗಿತ್ತು ಎಂದು ವಿಜಯಪುರ ಜಿಲ್ಲಾ ಎಸ್‍ಪಿ, ಅನಂತ್‍ ಕುಮಾರ್ ಮಾಹಿತಿ ನೀಡಿದ್ದಾರೆ. ಇದರಿಂದ ಯುವಕ ಶಿವಾನಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಯಾರ ಮೇಲೆ ಆರೋಪ ಮಾಡಿದ್ದಾನೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − five =
Remember me
