ದಾಬಸ್​ಪೇಟೆ:ಸೋಂಪುರ ಹೋಬಳಿಯ ಗುಂಡೇನಹಳ್ಳಿ ಬಳಿ ಭಾವನಿಂದ ಕೊಲೆಯಾದ ನಾದಿನಿ ಶವ ಕೊಳೆತ ಸ್ಥಿತಿಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದ್ದು, ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ಶಿರಾ ತಾಲೂಕು ಬಿಜ್ಜನಬೆಳ್ಳ ಮೂಲದ ದೀಪಾ (22) ಕೊಲೆಯಾದ ಯುವತಿ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೊಳಾಲ ಹೋಬಳಿಯ ನರಸಾಪುರದ ಗಿರೀಶ್ (32) ಬಂಧಿತ.
ಇದನ್ನೂ ಓದಿ:ಹಾಡುವಾಗ ಛಿದ್ರಗೊಂಡ ಮೆದುಳಿನ ರಕ್ತನಾಳ: ಸಾವು-ಬದುಕಿನ ನಡುವೆ ಮಹಿಳೆಯ ಹೋರಾಟ
ಅಕ್ರಮ ಸಂಬಂಧ:ಯುವತಿ ಹಾಗೂ ಆರೋಪಿ ನಡುವಿನ ಅನ್ಯೋನ್ಯತೆ ಕೊಲೆಗೆ ಕಾರಣವಾಗಿದೆ. ಯುವತಿಗೆ ಮತ್ತೊಬ್ಬನೊಂದಿಗೆ ಮದುವೆ ಸಿದ್ಧತೆ ನಡೆದಿದ್ದನ್ನು ಸಹಿಸದೆ ಕೃತ್ಯ ಎಸಗಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಗಮಧ್ಯೆ ಹತ್ಯೆ:ಮೃತೆ ದೀಪಾ ಬೆಂಗಳೂರಿನ ಅಂದ್ರಹಳ್ಳಿಯಲ್ಲಿ ಅಕ್ಕ- ಭಾವನ ಮನೆಯಲ್ಲಿದ್ದುಕೊಂಡು ಮೆಡಿಕಲ್ ಸ್ಟೋರ್​ನಲ್ಲಿ ಕೆಲಸ ಮಾಡುತ್ತಿದ್ದಳು. ಈ ಮಧ್ಯೆ ದೀಪಾ ಹಾಗೂ ಗಿರೀಶ್ ನಡುವೆ ಸಲುಗೆ ಬೆಳೆದಿತ್ತು.
ಜೂ.14ರಂದು ದೀಪಾಗೆ ಮದುವೆ ನಿಶ್ಚಯವಾಗಿತ್ತು. ಇದರಿಂದ ಕೆರಳಿದ ಆರೋಪಿ, ಜೂ.10ರಂದು ಮದುವೆ ಸಿದ್ಧತೆ ನೆಪದಲ್ಲಿ ದೀಪಾಳನ್ನು ಕರೆದುಕೊಂಡು ತುಮಕೂರಿನ ಕಡೆಗೆ ಹೊರಟಿದ್ದ. ದಾರಿ ಮಧ್ಯೆ ಗುಂಡೇನಹಳ್ಳಿ ಬಳಿ ಇದೇ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿದೆ. ಸಿಟ್ಟಿನಲ್ಲಿ ದೀಪಾ ಮುಖಕ್ಕೆ ಗುದ್ದಿದ್ದಾನೆ. ಯುವತಿ ಕುಸಿದು ಬಿದ್ದಿದ್ದಾಳೆ. ಬಳಿಕ ಆಕೆಯ ಕುತ್ತಿಗೆ ಬಿಗಿದು ಹತ್ಯೆಗೈದು ರಸ್ತೆ ಪಕ್ಕದ ಹಳ್ಳಕ್ಕೆ ಎಸೆದು ಪರಾರಿಯಾಗಿದ್ದ.
ಇದನ್ನೂ ಓದಿ:ಬಂದ್ರೆ ಬರಬೇಕು ಇಂಥಾ ಅದೃಷ್ಟ: ರಾತ್ರೋರಾತ್ರಿ 25 ಕೋಟಿ ರೂ. ಒಡೆಯನಾದ ಗಣಿಕೆಲಸಗಾರ!
ಕಂಪ್ಲೇಂಟ್ ಕೊಟ್ಟು ನಾಟಕ:ಮನೆಗೆ ಮರಳಿದ ಗಿರೀಶ್, ಏನೂ ಗೊತ್ತಿಲ್ಲವೆಂಬಂತೆ ನಟಿಸಿದ್ದ. ದೀಪಾ ಕಣ್ಮರೆಯಾಗಿರುವ ನಾಟಕ ಮಾಡಿ ಎಲ್ಲರನ್ನೂ ನಂಬಿಸಿದ್ದ. ಅಲ್ಲದೆ ನಾದಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದಾಬಸ್ ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದ. ಆದರೆ, ಅನುಮಾನಗೊಂಡ ಪೊಲೀಸರು ಗಿರೀಶ್​ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ನೆಲಮಂಗಲ ಡಿವೈಎಸ್​ಪಿ ಎಂ. ಎಸ್. ಮೋಹನ್​ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಮದುವೆಯಾಗುವುದಾಗಿ ನಂಬಿಸಿ ಸ್ಟಾರ್​ ನಟಿಗೆ ವಂಚನೆ: ಬಂಧಿತ ಆರೋಪಿಗಳಿಂದ ಸ್ಪೋಟಕ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 3 =
Remember me
