ಮಂಗಳೂರು:ಕಾವೂರಿನ ಟಿಪ್ಪರ್ ಚಾಲಕ ಗಣೇಶ್ (40) ತನ್ನ ಪತ್ನಿ ಶಾಂತಾ (30) ಅವರನ್ನು ಬಜ್ಪೆ ಸಮೀಪದ ಕರಂಬಾರು ಅಂತೋಣಿಕಟ್ಟೆಯ ಕಲ್ಲಿನ ಕ್ವಾರಿಗೆ ದೂಡಿ ಕೊಲೆ ಮಾಡಿ ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ಗಣೇಶ್ ಹಾಸನ ಮೂಲದವನಾಗಿದ್ದು, ಕಾವೂರು ಪರಿಸರದಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪತ್ನಿ ಶಾಂತಾ ಕಾಸರಗೋಡು ಮೂಲದವರು. ದಂಪತಿಗೆ ಪುತ್ರ ಮತ್ತು ಪುತ್ರಿ ಇದ್ದಾರೆ. ಈ ಹಿಂದೆ ಕಾವೂರು ಸಮೀಪದ ಮರಕಡದಲ್ಲಿ ಹಾಗೂ ಇತ್ತೀಚೆಗೆ ಕಾವೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪತಿ-ಪತ್ನಿ ಮಧ್ಯೆ ವಿರಸ ಉಂಟಾದ ಕಾರಣ ಪತ್ನಿ ಮಕ್ಕಳನ್ನು ಕರೆದುಕೊಂಡು ತವರಿಗೆ ಹೋಗಿದ್ದು, ಕೆಲ ಸಮಯ ಪ್ರತ್ಯೇಕವಾಗಿ ವಾಸವಾಗಿದ್ದರು. ಇತ್ತೀಚೆಗೆ ಆತ ಆಕೆಯ ಮನೆಗೆ ತೆರಳಿ ಮಾತುಕತೆ ನಡೆಸಿ ಕಾವೂರಿಗೆ ಕರೆಸಿಕೊಂಡಿದ್ದ.
ಇದನ್ನೂ ಓದಿ:ಶಿಕ್ಷಕ ನೌಕರಿಯಲ್ಲಿ ವಂಚನೆ ಪ್ರಕರಣ: ಅನಾಮಿಕಾ ಶುಕ್ಲಾ ಆಯ್ತು, ಈಗ ಪ್ರದೀಪ್​​​​​​​​ಕುಮಾರ್ ಸರದಿ
ಗುರುವಾರ ಸಂಜೆ ಗಣೇಶ್ ಪತ್ನಿ ಶಾಂತಾಳನ್ನು ಕರೆದುಕೊಂಡು ಹೊರಗೆ ಹೋಗಿದ್ದು, ವಾಪಸ್ ಬಂದಿರಲಿಲ್ಲ. ಮನೆಯಲ್ಲಿ ಮಕ್ಕಳು ಮತ್ತು ಅಜ್ಜಿ (ಶಾಂತಾ ಅವರ ತಾಯಿ) ಇದ್ದರು. ಗಣೇಶ್ ತನ್ನ ಮನೆಗೆ ಫೋನ್ ಮಾಡಿ ಪತ್ನಿಯನ್ನು ಟಿಪ್ಪರ್‌ನಲ್ಲಿ ಕಲ್ಲು ಸಾಗಾಟ ಕೆಲಸ ಮಾಡುತ್ತಿದ್ದ ಕರಂಬಾರಿನ ಕಲ್ಲಿನ ಕ್ವಾರಿಗೆ ದೂಡಿ ಕೊಲೆ ಮಾಡಿರುವುದಾಗಿ ಅತ್ತೆಗೆ ತಿಳಿಸಿದ್ದಾನೆ. ಅತ್ತೆ ಬಳಿಕ ಕಾವೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಗುರುವಾರ ರಾತ್ರಿ ಕರಂಬಾರಿಗೆ ತೆರಳಿ ಶಾಂತಾ ಅವರ ಶವವನ್ನು ಪತ್ತೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಗೆ ನೈಜ ಕಾರಣ ತಿಳಿದು ಬಂದಿಲ್ಲ. ಆದರೆ ಪತ್ನಿಯ ಮೇಲಿನ ಅಸಮಾಧಾನ ಕಾರಣ ಎನ್ನಲಾಗಿದೆ. ಆರೋಪಿ ಗಣೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಮತ್ತೊಂದು ಮೃಗೀಯ ವರ್ತನೆ: ಗುಂಡೇಟಿಗೆ ಆನೆ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
