ಬೆಂಗಳೂರು:ಆನ್‌ಲೈನ್‌ನಲ್ಲಿ ವೈನ್ ಬಾಟಲ್ ಆರ್ಡರ್ ಮಾಡಿದ್ದ ಗ್ರಾಹಕನಿಂದ ಕ್ರೆಡಿಟ್ ಕಾರ್ಡ್ ನಂಬರ್ ಪಡೆದ ಸೈಬರ್ ಕಳ್ಳರು, 730 ರೂಪಾಯಿ ಬದಲಿಗೆ 1.79 ಲಕ್ಷ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.
ಅಲಿ ಅಸ್ಕರ್ ರಸ್ತೆ ದಿ ಎಂಬೆಸ್ಸಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿರುವ 80 ವರ್ಷದ ನಿವೃತ್ತ ಅಧಿಕಾರಿ ವಂಚನೆಗೆ ಒಳಗಾದವರು. ಆ.19ರಂದು ವಿಭೂತಿಪುರದ ಕ್ರಿಸ್ಟಲ್ ವೈನ್ಸ್ ಪೋರ್ಟಲ್‌ನಲ್ಲಿ 1 ವೈನ್ ಬಾಟಲ್ ಆರ್ಡರ್ ಮಾಡಿದ್ದಾರೆ. ವಾಪಸ್ ಕರೆ ಮಾಡಿದ ಅಪರಿಚಿತ ನೀಲೇಶ್ ಚೌಧರಿ, ವೈನ್ ಶಾಪ್ ನೌಕರ ಎಂದು ಪರಿಚಯಿಸಿಕೊಂಡಿದ್ದಾನೆ. ನಿವೃತ್ತ ಅಧಿಕಾರಿ ವೈನ್ ಬಾಟಲ್ ಜತೆಗೆ 1 ಪ್ಯಾಕೇಟ್ ಸಿಗರೇಟ್ ಸಹ ಆರ್ಡರ್ ಮಾಡಿದ್ದರು. ಒಟ್ಟಾರೆ ಬಿಲ್ 730 ರೂ. ಆಗಿತ್ತು. ಅದಕ್ಕೆ ನಿವೃತ್ತ ಅಧಿಕಾರಿ, ಪೇಟಿಎಮ್‌ನಲ್ಲಿ ಬಿಲ್ ಪಾವತಿಗೆ ಮುಂದಾದಾಗ ನೀಲೇಶ್, ಪೇಟಿಎಮ್ ಸೇವೆ ಇಲ್ಲ. ಕ್ರೆಡಿಟ್ ಕಾರ್ಡ್‌ನಲ್ಲಿ ಪಾವತಿಗೆ ಸೂಚಿಸಿದ್ದಾನೆ. ಅದಕ್ಕೆ ಒಪ್ಪಿದ ಗ್ರಾಹಕ, ತನ್ನ ಕ್ರೆಡಿಟ್ ಕಾರ್ಡ್ ನಂಬರ್ ಕೇಳಿದಾಗ 99,860 ರೂ. ಮತ್ತು 31,000ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ.
ಗಾಬರಿಕೊಂಡ ಗ್ರಾಹಕ, ನೀಲೇಶ್‌ಗೆ ಕರೆ ಮಾಡಿ ಪ್ರಶ್ನಿಸಿದ್ದರು. ಅದಕ್ಕೆ ವಂಚಕ, ನಾನು ಮದ್ಯ ಸೇವನೆ ಮಾಡಿದ್ದು, ಗೊತ್ತಾಗದೆ ತಪ್ಪು ನಂಬರ್ ಒತ್ತಿದ್ದೇನೆ. ನಿಮ್ಮ ಬೇರೆ ಕ್ರೆಡಿಟ್ ಕಾರ್ಡ್ ನಂಬರ್ ಹೇಳಿ. ವಾಪಸ್ ಹಣ ಕಳುಹಿಸುತ್ತೆನೆ ಎಂದು ಪುಸಲಾಯಿಸಿದ್ದಾನೆ. ಆಗ ನಿವೃತ್ತ ಅಧಿಕಾರಿ, ಮತ್ತೊಂದು ಕಾರ್ಡ್ ನಂಬರ್ ಕೊಟ್ಟಾಗ ಅದರಲ್ಲಿಯೂ 19,190 ರೂ. ಮತ್ತು 29,280 ರೂ. ಹಂತ ಹಂತವಾಗಿ ವರ್ಗಾವಣೆ ಮಾಡಿಕೊಂಡು ಸಂಪರ್ಕ ಕಡಿತ ಮಾಡಿದ್ದಾನೆ. ಕೊನೆಗೆ ವಂಚನೆ ಮಾಡಿರುವುದು ಗೊತ್ತಾಗಿ ನಿವೃತ್ತ ಅಧಿಕಾರಿ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾಗಿದ್ದ ಸಹೋದರಿ ರಕ್ಷಾಬಂಧನದಂದೇ ಪತ್ತೆ; ಕಾಣೆಯಾಗಿದ್ದ ತಂಗಿ ‘ರಿಮಿ’ಗೆ ಇದ್ದ ‘ಅಡ್ಡಿ’ ಏನು?
ಫ್ರೀ ಕೊಟ್ರೂ ಊಟ-ತಿಂಡಿ-ನೀರು ಏನೂ ಬೇಡ ಎಂದು ಹೇಳಿ ಸಿಕ್ಕಿಬಿದ್ದ ಸ್ಮಗ್ಲರ್; ಹೊಟ್ಟೆಯಲ್ಲಿತ್ತು 11 ಕೋಟಿ ರೂ. ಮೌಲ್ಯದ ಡ್ರಗ್ಸ್


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
