ಬೆಂಗಳೂರು:ಖಾಸಗಿ ಕಂಪನಿ ಉದ್ಯೋಗಿಯೊಬ್ಬ ವೆಬ್​ಸೈಟ್ ಜಾಹೀರಾತು ನೋಡಿ ವೇಶ್ಯೆಯನ್ನು ಮನೆಗೆ ಕರೆಸಿ 97 ಸಾವಿರ ರೂ. ಕಳೆದುಕೊಂಡಿದ್ದಾನೆ.
ವೈಟ್​ಫೀಲ್ಡ್​ನ ನಿವಾಸಿ ಹಣ ಕಳೆದುಕೊಂಡವರು. ನ.13ರಂದು ವೆಬ್​ಸೈಟ್​ನಲ್ಲಿ ಕಾಲ್​ಗರ್ಲ್ ಎಂದಿದ್ದ ಮೊಬೈಲ್ ನಂಬರ್​ಗೆ ಕರೆ ಮಾಡಿ ವೇಶ್ಯೆಯನ್ನು ಮನೆಗೆ ಕರೆಸಿಕೊಂಡಿದ್ದ. ಮನೆಗೆ ಬಂದ ಮಹಿಳೆ 10 ಸಾವಿರ ರೂ. ಪಡೆದಿದ್ದಳು. ನಂತರ ತನ್ನನ್ನು ಎನ್​ಜಿಒ ಅಧಿಕಾರಿ ಎಂದು ಪರಿಚಯಿಸಿಕೊಂಡ ಆಕೆ, ತಾನು ಕೇಳಿದಷ್ಟು ಹಣ ಕೊಡದಿದ್ದರೆ ಅತ್ಯಾಚಾರ ಮಾಡಿದ್ದಾಗಿ ಪೊಲೀಸರಿಗೆ ದೂರು ಕೊಡುವುದಾಗಿ ಬ್ಲಾ್ಯಕ್​ವೆುೕಲ್ ಮಾಡಿದ್ದಳು.
ಇದನ್ನೂ ಓದಿ:ಆರು ವರ್ಷದ ಬಾಲಕಿಯ ಭೀಕರ ಕೊಲೆ: ಅಂಗಾಂಗಗಳು ಕಾಣೆ- ನರಬಲಿ ಶಂಕೆ!
ಯುವಕನೊಬ್ಬನಿಗೆ ಕರೆ ಮಾಡಿದ ಮಹಿಳೆ ಈತನಿಗೆ ಮೊಬೈಲ್ ಕೊಟ್ಟಿದ್ದಳು. ಆತ, ಈಗಲೇ 2 ಲಕ್ಷ ರೂ. ಹಾಕಬೇಕು. ಠಾಣೆ ಮೆಟ್ಟಿಲೇರಿದರೆ 5 ಲಕ್ಷ ರೂ. ಕೊಡಬೇಕಾಗುತ್ತದೆ ಎಂದು ಬೆದರಿಸಿದ್ದ. ನಂತರ ಮಹಿಳೆ ಮೊಬೈಲ್ ತೆಗೆದುಕೊಂಡು ಆನ್​ಲೈನ್ ಮೂಲಕ ತನ್ನ ಖಾತೆಗೆ ಹಂತಹಂತವಾಗಿ 87 ಸಾವಿರ ರೂ. ಹಾಕಿಸಿಕೊಂಡು ಪರಾರಿಯಾಗಿದ್ದಾಳೆ ಎಂದು ದಿನೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ವೈಟ್​ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಜೆ ಇಲ್ಲದೆ ಬಸವಳಿದ ಖಾಕಿ: ಪೊಲೀಸರ ತೀವ್ರ ಅಸಮಾಧಾನ, ಅಧಿಕಾರಿಗಳ ಸಮರ್ಥನೆ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 3 =
Remember me
