ವಿಜಯಪುರ:ಬಾಕಿ ಉಳಿಸಿಕೊಂಡಿದ್ದ, ಹಣವನ್ನು ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಅರಬೆತ್ತಲೆಯಾಗಿ ಕೂಡಿ ಹಾಕಿರುವ ಪ್ರಕರಣ ವಿಜಯಪುರ ಜಿಲ್ಲೆಯ ಮದ್ದೇಬಿಹಾಳ ತಾಲ್ಲೂಕಿನಲ್ಲಿ ನಡೆದಿದೆ.
ಘಟನೆಯೂ ಮುದ್ದೇಬಿಹಾಳ ನಗರದ ಭೋಸಲೆ ಬಂಕ್​ನಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಪೊಲೀಸರು ಮೌನೇಶ್​ ಪತ್ತಾರ್​ ಎಂಬುವವನರನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂತ್ರಸ್ತನ ಪತ್ನಿ ರಂಗಮ್ಮ ದೂರು ನೀಡಿದ ಹಿನ್ನಲೆ ಕ್ರಮ ಕೈಗೊಳ್ಳಲಾಗಿದೆ.
ಮುದ್ದೇಬಿಹಾಳ ಪಟ್ಣಣದಲ್ಲಿರುವ ತಮಿಳುನಾಡಿನ ಶಿವಶಕ್ತಿ ಬೋರ್​ವೆಲ್ಸ್​ನ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮೌನೇಶ್​ ಭೋಸಲೆ ಬಂಕ್​ನವರಿಗೆ 10-15 ಲಕ್ಷ ರೂಪಾಯಿ ಡೀಸೆಲ್ ಹಣವನ್ನು ಬಾಕಿ ಉಳಿಸಿಕೊಂಡಿದ್ದರು.
ಶಿವಶಕ್ತಿ ಬೋರ್​ವೆಲ್ಸ್​ನ ಲಾರಿಗೆ ಭೋಸಲೆ ಬಂಕ್​ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಡೀಸೆಲ್​ ಹಾಕಿಸುತ್ತಿದ್ದರು. ಆದರೆ, ಹಣವನ್ನು ನೀಡದೆ ಮೌನೇಶ್​ ಬಾಕಿ ಉಳಿಸಿಕೊಂಡಿದ್ದರು. ಈ ಸಂಬಂಧ ಹಲವು ಬಾರಿ ಹಣ ಪಾವತಿಸುವಂತೆ ಬಂಕ್​ನವರು ಕೇಳಿಕೊಂಡರು ಸಹ ಬಾಕಿ ಮೊತ್ತವನ್ನು ನೀಡದೆ ಸತ್ತಾಯಿಸುತ್ತಿದ್ದರು.
ಇದನ್ನೂ ಓದಿ:ಲಿವ್​-ಇನ್​-ರಿಲೇಶನ್​ಶಿಪ್​ನಲ್ಲಿದ್ದ ಅಪ್ರಾಪ್ತ ವಯಸ್ಕಳ ಹತ್ಯೆ ಮಾಡಿ ಪ್ರಿಯಕರ ಸಾವಿಗೆ ಶರಣು
ಈ ಸಂಬಂಧ ಮೌನೇಶ್​ ಹಾಗೂ ಕುಟುಂಬಸ್ಥರನ್ನು ಭೋಸಲೆ ಬಂಕ್​ನ ಮಾಲೀಕ ಕೂಡಿ ಹಾಕಿದ್ಧಾರೆ. ಪತ್ನಿ ಹಾಗೂ ಮಕ್ಕಳನ್ನು ಪೊಲೀಸ್​ ಠಾಣೆಗೆ ತೆರಳದಂತೆ ಬಂಕ್​ ಮಂದಿ ಕೂಡಿ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತನ್ನ ಪತಿಯನ್ನು ಅರಬೆತ್ತಲಾಗಿ ಕೂಡಿ ಹಾಕಿರುವ ವಿಚಾರ ತಿಳಿದ ಮೌನೇಶ್​ ಪತ್ನಿ ರಂಗಮ್ಮ ಮುದ್ದೇಬಿಹಾಳ ಪೊಲೀಸ್​ ಠಾಣೆಗೆ ದೂರು ನೀಡಿದ್ಧಾರೆ. ಅಮಾನವೀಯ ಕೃತ್ಯದ ಕುರಿತು ಸ್ಥಳಕ್ಕೆ ದೌಡಾಯಿಸಿದ ಪೊಲೀಸ್​ ಅಧಿಕಾರಿ ಆರೀಫ್ ಮುಶಾಪುರೆ ಹಾಗೂ ತಹಶೀಲ್ದಾರ್​ ರೇಖಾ ಭೋಸಲೆ ಬಂಕ್​ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ಧಾರೆ.
ವಿಚಾರಣೆ ನಂತರ ಭೋಸಲಲೆ ಬಂಕ್​ ಸಿಬ್ಬಂದಿಯನ್ನು ಅಧಿಕಾರಿಗಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ತನ್ನ ಪತಿಯನ್ನು ರಕ್ಷಿಸಿದ್ದಕ್ಕೆ ಮೌನೇಶ್​ ಪತ್ನಿ ರಂಗಮ್ಮ ಅಧಿಕಾರಿಗಳ ಕಾಲಿಗೆ ಎರಗಿ ನಮಸ್ಕರಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
