ಬೆಂಗಳೂರು:ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿ ಡ್ರೆಸ್ ಚೇಂಜ್ ಮಾಡುವುದನ್ನು ಮೊಬೈಲ್​​ನಲ್ಲಿ ರೆಕಾರ್ಡ್ ಮಾಡಿ, ನಂತರ ಮನೆಯಲ್ಲಿ ನೋಡಿ ಎಂಜಾಯ್​ ಮಾಡ್ತಿದ್ದ ಕಾಮುಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಕಳೆದ 6 ವರ್ಷಗಳಿಂದ ಲ್ಯಾಬ್ ಟೆಕ್ನಿಷಿಯನ್ ಆಗಿರುವ 29 ವರ್ಷದ ಮಾಲತೇಶ್ ಎಂಬುವನೇ ಆ ದುಷ್ಕರ್ಮಿ.
ಆಸ್ಪತ್ರೆಯ ಆಪರೇಷನ್ ರೂಂನಲ್ಲಿ ಹೆಚ್ಚಾಗಿ ಇರುತ್ತಿದ್ದ ಎನ್ನಲಾದ ಮಾಲತೇಶ್, ಆಪರೇಷನ್ ವೇಳೆಗೆ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವ ಸಮಯಕ್ಕೆ ಕಾಯುತ್ತಿದ್ದ. ಆ ವೇಳೆಗೆ ಮೊಬೈಲ್​ನಲ್ಲಿ ಕ್ಯಾಮೆರಾ ಆನ್ ಮಾಡಿ, ಚಾರ್ಜ್​ಗೆ ಹಾಕುವ ನೆಪದಲ್ಲಿ ಚೇಂಜಿಂಗ್ ರೂಂನಲ್ಲಿ ತನ್ನ ಮೊಬೈಲ್​ಅನ್ನು ಇಡುತ್ತಿದ್ದ. ಅದರಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವುದನ್ನು ರೆಕಾರ್ಡ್ ಮಾಡುತ್ತಿದ್ದ. ನಂತರ ಆ ರೆಕಾರ್ಡಿಂಗ್​ಅನ್ನು ಮನೆಯಲ್ಲಿ ಒಬ್ಬನೇ ಇದ್ದಾಗ ನೋಡಿ ಎಂಜಾಯ್ ಮಾಡುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ:ರಾಜಕಾರಣಿಗಳ, ಪೊಲೀಸ್ ಅಧಿಕಾರಿಗಳ ನಕಲಿ ಖಾತೆ ಮಾಡಿದ್ದ, ಹಣ ಪಡೆಯುತ್ತಿದ್ದ !
ಹೀಗೆ ಒಂದು ದಿನ ಚಾರ್ಜ್​ಗೆ ಹಾಕಿದ್ದ ಆತನ ಮೊಬೈಲ್ಅನ್ನು ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರು ನೋಡಿದ್ದಾರೆ. ಕ್ಯಾಮೆರಾ ಆನ್ ಆಗಿದ್ದು, ರೆಕಾರ್ಡ್​ ಮಾಡುತ್ತಿರುವುದನ್ನು ನೋಡಿ ಶಾಕ್ ಆಗಿದ್ದಾರೆ. ಮೊಬೈಲ್ ಪರಿಶೀಲಿಸಿದಾಗ ಅವನ ಅಸಲಿಯತ್ತು ಬೆಳಕಿಗೆ ಬಂದಿದೆ. ಕೂಡಲೇ ಮಹಿಳಾ ಸಿಬ್ಬಂದಿ ಸಂಜಯ್ ಗಾಂಧಿ ಆಸ್ಪತ್ರೆಯ ಆಡಳಿತಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಂಜಯ್ ಗಾಂಧಿ ಆಸ್ಪತ್ರೆಯ ಆಡಳಿತ ಮಂಡಳಿಯವರು ಮಾಲತೇಶ್​ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ತಿಲಕ ನಗರ ಪೊಲೀಸರು ವಿಕೃತ ಮನಸ್ಕ ಮಾಲತೇಶ್​ನನ್ನು ಬಂಧಿಸಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವೆಬ್​ ಧಾರಾವಾಹಿಗಳಂತೆ ಕಂತುಕಂತಿನಲ್ಲಿ ಬ್ಲೂ ಫಿಲಂ ಪ್ರಸಾರ ಮಾಡುತ್ತಿರುವ ಆ್ಯಪ್​ಗಳು !

ಕಲ್ಲಿದ್ದಲು ಕಳ್ಳಸಾಗಾಣಿಕೆ ಸಿಬಿಐ ತನಿಖೆ : “ನನಗೆ ಏನೂ ಗೊತ್ತಿಲ್ಲ” ಎಂದ ರುಜಿರಾ ಬ್ಯಾನರ್ಜಿ

ಹದಿಹರೆಯದ ಮಗಳನ್ನೇ ರೇಪ್ ಮಾಡಿ ಗರ್ಭಿಣಿಯಾಗಿಸಿದ, ಗರ್ಭಪಾತವಾದ ಮೇಲೆ ಮತ್ತೆ ಮೇಲೆರಗಿದ… ಕೋರ್ಟ್ ಹೇಳಿದ್ದೇನು ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
