ಬೆಂಗಳೂರು:ಹಿಂದು ಎಂದು ನಂಬಿಸಿ ಪ್ರೇಮವಿವಾಹವಾದ ವ್ಯಕ್ತಿ, ತನ್ನನ್ನು ಬಲವಂತವಾಗಿ ಇಸ್ಲ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ ಎಂದು ಆರೋಪಿಸಿದ ಮಹಿಳೆ, ಕೆ.ಜಿ. ಹಳ್ಳಿ ಠಾಣೆಗೆ ದೂರು ಕೊಟ್ಟಿದ್ದಾಳೆ. ಮಾರತ್ತಹಳ್ಳಿಯ ರಾಮಾಂಜನೇಯ ಲೇಔಟ್​ನ 29 ವರ್ಷದ ಮಹಿಳೆ ಕೊಟ್ಟ ದೂರಿನ ಮೇರೆಗೆ ಪತಿ ಸಿದ್ಧಾರ್ಥ ಅಲಿಯಾಸ್ ಮೊಹಮ್ಮದ್ ಸಾದಿಕ್ ಹಾಗೂ ಆತನ ಸಂಬಂಧಿಕರು ಸೇರಿ ಆರು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
2016ರಲ್ಲಿ ಮಾರತ್ತಹಳ್ಳಿಯ ಕಂಪನಿಯಲ್ಲಿ ಮಹಿಳೆ ಮತ್ತು ಸಾದಿಕ್ ಕೆಲಸ ಮಾಡುತ್ತಿದ್ದರು. ಈ ವೇಳೆ ಸಾದಿಕ್ ತನ್ನ ಹೆಸರು ಸಿದ್ಧಾರ್ಥ ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೆ, ತಾನು ಅನಾಥ ಎಂದು ಹೇಳಿಕೊಂಡಿದ್ದ. ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು. ನಂತರ, ನನ್ನನ್ನು ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿದ್ದ. ಕಳೆದ ವರ್ಷ ಧರ್ಮಸ್ಥಳಕ್ಕೆ ಕರೆದೊಯ್ದು ಅಲ್ಲಿ ಗಣಪತಿ ವಿಗ್ರಹದ ಮುಂದೆ ತಾಳಿ ಕಟ್ಟಿದ್ದ. 2019ರ ಸೆಪ್ಟೆಂಬರ್​ನಲ್ಲಿ, ‘ನಾನು ಹಿಂದು ಅಲ್ಲ, ನನ್ನ ನಿಜವಾದ ಹೆಸರು ಮೊಹಮ್ಮದ್ ಸಾದಿಕ್’ ಎಂದು ತಿಳಿಸಿದ್ದ. ತಮ್ಮ ಸಂಬಂಧಿಕರನ್ನು ಒಪ್ಪಿಸಿ ವಿನೋಬಾನಗರದ ತನ್ನ ಮನೆಗೆ ಕರೆದೊಯ್ದು ತಾಯಿ, ಸಹೋದರ ಮತ್ತು ಅತ್ತೆಯನ್ನು ಪರಿಚಯ ಮಾಡಿಸಿದ್ದ. ಬಳಿಕ ಸಾದಿಕ್ ಮತ್ತು ಆತನ ಕುಟುಂಬಸ್ಥರು ಬಲವಂತವಾಗಿ ನನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸಿದರು. ಪತಿಯ ಸ್ನೇಹಿತ ಇಮ್ರಾನ್ ಷರೀಫ್ ಲೈಂಗಿಕ ಕಿರುಕುಳ ನೀಡಿದ್ದು, ಈ ವಿಷಯವನ್ನು ಬೇರೆಯವರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಮಧ್ಯೆ ಗರ್ಭಿಣಿಯಾಗಿದ್ದ ವಿಷಯ ತಿಳಿದು ಪತಿ ಹಾಗೂ ಆತನ ಸಂಬಂಧಿಕರು ಗರ್ಭಪಾತ ಮಾಡಿಸಿದರು. ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡು ಮನೆಯಿಂದ ಹೊರಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿಂದೆಯೂ ದೂರು: ಪ್ರೀತಿಸುತ್ತಿದ್ದ ಸಾದಿಕ್ ಮದುವೆಯಾಗದೆ ವಂಚಿಸಿದ್ದಾನೆ ಎಂದು ಆರೋಪಿಸಿ ಇದೇ ಮಹಿಳೆ ಈ ಹಿಂದೆಯೂ ದೂರು ಕೊಟ್ಟಿದ್ದರು. ಬಳಿಕ ಇಬ್ಬರೂ ಮದುವೆಯಾಗಿದ್ದರು. ಇದೀಗ ಧರ್ಮ ತಿಳಿಸದೆ ವಿವಾಹವಾಗಿ ಬಲವಂತವಾಗಿ ಮತಾಂತರ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ದೂರಿನ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೆ.ಜಿ. ಹಳ್ಳಿ ಪೊಲೀಸರು ತಿಳಿಸಿದ್ದಾರೆ.
ಬಾಡಿಗೆ ಸೋಗಿನಲ್ಲಿ ಬಂದು ಆಟೋ ಚಾಲಕನ ಸುಲಿಗೆ
ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಆಟೋ ಹತ್ತಿದ ಇಬ್ಬರು ವ್ಯಕ್ತಿಗಳು ಚಾಲಕ ಹಾಗೂ ಆತನ ಸ್ನೇಹಿತನಿಗೆ ಕೊಡಲಿ ತೋರಿಸಿ ಹಣ, ಮೊಬೈಲ್ ಸುಲಿಗೆ ಮಾಡಿದ್ದಾರೆ. ಲಗ್ಗರೆ ನಿವಾಸಿ ಮಂಜುನಾಥ್ ಹಾಗೂ ಎನ್.ಎಂ. ಸ್ವಾಮಿ ಸುಲಿಗೆ ಗೊಳಗಾದವರು. ಜು.31ರ ರಾತ್ರಿ ಮೆಜೆಸ್ಟಿಕ್​ನಿಂದ ಬೊಮ್ಮಸಂದ್ರಕ್ಕೆ ಆಟೋದಲ್ಲಿ ಬಾಡಿಗೆಗೆ ಹೋಗಿ ಬರುತ್ತಿದ್ದರು. ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ವಿಲ್ಸನ್ ಗಾರ್ಡನ್​ಗೆ ಹೋಗಬೇಕೆಂದು ಒಬ್ಬ ವ್ಯಕ್ತಿ ಹತ್ತಿದ್ದಾನೆ. ಬನ್ನೇರುಘಟ್ಟ ರಸ್ತೆಯಲ್ಲಿ ಮತ್ತೊಬ್ಬ ವ್ಯಕ್ತಿ ವಿಲ್ಸನ್ ಗಾರ್ಡನ್ ಹೋಗಬೇಕು ಎಂದು ಹೇಳಿ ಆಟೋ ಹತ್ತಿದ್ದ. ಡೇರಿ ಸರ್ಕಲ್ ಬಳಿ ಆಟೋ ಪಂಕ್ಚರ್ ಆಗಿತ್ತು. ಆಗ ಮಂಜುನಾಥ್ ತನ್ನ ಸ್ನೇಹಿತ ಸ್ವಾಮಿಗೆ ಕರೆ ಮಾಡಿ ಬರುವಂತೆ ಸೂಚಿಸಿದ್ದ. ನಂತರ ಟೈರ್ ಬದಲಾಯಿಸಿ ಹೊರಟಿದ್ದಾರೆ. ವಿಲ್ಸನ್ ಗಾರ್ಡನ್ ನಾಲಾ ರಸ್ತೆ ಬಳಿ ಇಳಿಯುವ ವೇಳೆ ಮಂಜುನಾಥ್​ಗೆ ಕೊಡಲಿ ತೋರಿಸಿ 700 ರೂ., ಮೊಬೈಲ್ ಕಸಿದುಕೊಂಡಿದ್ದಾರೆ. ಸ್ವಾಮಿ ಕಾಲಿಗೆ ಕೊಡಲಿಯ ಹಿಂಬಾಗದಿಂದ ಹೊಡೆದು 1,200 ರೂ. ಮತ್ತು ಬ್ಲೂಟೂತ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eight =
Remember me
