ಬೆಂಗಳೂರು:ಕೆಲವರು ಮದುವೆಯಾಗಲು ಒಂದು ಹುಡುಗಿ ಸಿಕ್ಕರೆ ಸಾಕು ಎಂದು ವರ್ಷಗಟ್ಟಲೆ ಕಾಯುತ್ತಿರುವುದು ಹೊಸದೇನಲ್ಲ. ಆದರೆ ಇಲ್ಲೊಬ್ಬ ವರ ಮಹಾಶಯ ಇಬ್ಬಿಬ್ಬರು ವಧುಗಳನ್ನು ಏಕಕಾಲಕ್ಕೆ ಕೈಹಿಡಿದು ವಿಧ್ಯುಕ್ತವಾಗಿ ಮದುವೆಯಾಗಿದ್ದಾರೆ.
ಹೀಗೆ ಇಬ್ಬರು ಹೆಂಡಿರ ಮುದ್ದಿನ ಗಂಡ ಎನಿಸಿಕೊಂಡಿರುವ ವರ ಮಹಾಶಯರ ಹೆಸರು ಉಮಾಪತಿ. ಇವರು ಕೋಲಾರ ಜಿಲ್ಲೆ ಮುಳಬಾಗಿಲು ವೇಗಮಡಗು ಎಂಬಲ್ಲಿನ ಶ್ರೀಮತಿ ರಾಣೇಮ್ಮ, ಶ್ರೀಮತಿ ಸುಬ್ಬಮ್ಮ, ಶ್ರೀನಾಗರಾಜಪ್ಪ ಅವರ ಅವರ ದ್ವಿತೀಯ ಹಾಗೂ ತೃತೀಯ ಪುತ್ರಿ ಇಬ್ಬರನ್ನೂ ವರಿಸಿದ್ದಾರೆ. ಸಹೋದರಿಯರಾದ ಸುಪ್ರಿಯ ಹಾಗೂ ಲಲಿತ ಇಬ್ಬರನ್ನೂ ಉಮಾಪತಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.
ಮುಳಬಾಗಿಲು ತಾಲೂಕಿನ ದೊಡ್ಡಲಕ್ಷ್ಮಮ್ಮ-ಚಿಕ್ಕಚನ್ನರಾಯಪ್ಪ ಅವರ ದ್ವಿತೀಯ ಪುತ್ರ ಉಮಾಪತಿ ಅವರ ಈ ಅಪರೂಪದ ಮದುವೆ ಇತ್ತೀಚೆಗೆ ನಡೆದಿದೆ. ಇವರ ಮದುವೆ ಆರತಕ್ಷತೆ ಮೇ 7ರಂದು ಮುಳಬಾಗಿಲು ತಾಲೂಕಿನ ತಿಮ್ಮರಾವುತನಹಳ್ಳಿಯ ವೇಗಮಡುಗು ಗ್ರಾಮದಲ್ಲಿರುವ ವಧುವಿನ ಸ್ವಗೃಹದಲ್ಲಿ ನಡೆದಿದ್ದು, ಅದರ ಆಹ್ವಾನ ಪತ್ರಿಕೆ ಈಗ ವೈರಲ್ ಆಗಿದೆ.
ಉಮಾಪತಿ ಇಬ್ಬರನ್ನು ಮದುವೆಯಾಗಲು ಪ್ರಮುಖ ಕಾರಣವಿದೆ. ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ. ಅಕ್ಕನಿಗೆ ಮದುವೆಯಾಗದೆ ತಂಗಿ ಲಲಿತಾಗೆ ಮದುವೆ ಆಗುವುದಿಲ್ಲ. ಹೀಗಾಗಿ ಅಕ್ಕನ ಹಿತ ಹಾಗೂ ಭವಿಷ್ಯದ ಕುರಿತು ಚಿಂತಿಸಿದ ತಂಗಿ ಲಲಿತ, ‘ನನ್ನನ್ನು ಮದುವೆ ಆಗಬೇಕೆಂದರೆ ಅಕ್ಕನನ್ನೂ ಮದುವೆ ಮಾಡಿಕೊಳ್ಳಬೇಕು’ ಎಂಬ ಷರತ್ತನ್ನು ವರ ಉಮಾಪತಿಗೆ ವಿಧಿಸಿದ್ದರು. ಅದಕ್ಕೆ ಒಪ್ಪಿದ ಅವರು ಮೇ 7ರಂದು ಗ್ರಾಮದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸಹೋದರಿಯರಿಬ್ಬರನ್ನೂ ‌ಮದುವೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
