ಬೆಂಗಳೂರು:ಸಿಲಿಕಾನ್​ ಸಿಟಿಯಲ್ಲಿ ರಾತ್ರಿ ಅಥವಾ ಬೆಳಗಿನ ಜಾವದಲ್ಲಿ ಒಂಟಿಯಾಗಿ ಮಹಿಳೆಯರು ತಿರುಗಾಡುವುದು ಸುರಕ್ಷಿತವಲ್ಲ ಎಂಬುದಕ್ಕೆ ಮತ್ತೊಂದು ಕರಾಳ ಘಟನೆ ಸಾಕ್ಷಿಯಾಗಿದೆ.
ನಗರದ ಡಿಜೆ ಹಳ್ಳಿಯ ಮೋದಿ ಗಾರ್ಡನ್ ಬಳಿ ನಡೆದಿರುವ ಘಟನೆಯೊಂದು ಇಡೀ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸುವಂತಿದೆ. ಬೆಳ್ಳಂಬೆಳಗ್ಗೆ ವಾಕಿಂಗ್ ಹೋಗುವ ಒಂಟಿ ಮಹಿಳೆಯರಿಗೆ ಈ ಒಂದು ಘಟನೆ ಎಚ್ಚರಿಕೆ ಗಂಟೆಯಾಗಿದೆ.
ಇದನ್ನೂ ಓದಿ:ಫೇಸ್​​ಬುಕ್​​ನಲ್ಲಿ ಅವಾಚ್ಯ ಕಾಮೆಂಟ್​; ಸೈಬರ್​ ಕ್ರೈಂಗೆ ದೂರು ನೀಡಿದ ವಿಧಾನ ಪರಿಷತ್​ ಸದಸ್ಯ
ಒಂಟಿ ಮಹಿಳೆಯರಿಗಾಗಿ ಕಾದಿದ್ದ ವಿಕೃತ ಕಾಮಿಯೊಬ್ಬ ಮಹಿಳೆಯೊಬ್ಬಳ ಮುಂದೆ ಅಸಹ್ಯವಾಗಿ ನಡೆದುಕೊಂಡಿದ್ದಾನೆ. ಚಪ್ಪಲಿಯಿಂದ ಒದೆ ತಿಂದರೂ ತನ್ನ ವಿಕೃತಿ ಬಿಡದ ಕಾಮುಕ ಪ್ಯಾಂಟ್ ಚಿಚ್ಚಿ ಮಹಿಳೆಯ ಮುಂದೆಯೇ ಹಸ್ತಮೈಥುನ ಮಾಡಿ ವಿಚಿತ್ರವಾಗಿ ವರ್ತಿಸಿದ್ದಾನೆ. ಅಲ್ಲದೆ, ಆಕೆಯ ಮೇಲೆರಗಿ, ಬಟ್ಟೆಯನ್ನು ಹಿಡಿದು ಎಳೆದಾಡಿದ್ದಾನೆ. ಈ ಎಲ್ಲ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಹಾಯಕ್ಕಾಗಿ ಮಹಿಳೆ ಕೂಗಿಕೊಂಡಾಗ ವಿಕೃತ ಕಾಮಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಘಟನೆ ಬಳಿಕ ಮಹಿಳೆ ಜೆಸಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದಾದ ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ದತ್ತು ಅಲಿಯಾಸ್ ಚೋಟು ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಪೊಲೀಸ್​​ ಅಧಿಕಾರಿಯನ್ನು ಬಲಿ ಪಡೆದ ಕೋಳಿ: ದುರಂತ ಘಟನೆ ಹಿಂದಿದೆ ಶಾಕಿಂಗ್​ ಕಾರಣ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
