ಬೆಂಗಳೂರು:ಇದೊಂದು ಸಿನಿಮೀಯ ಘಟನೆ. ಆತ ತನ್ನ ಪುತ್ರನ ಮದುವೆ ಹಣ ಹೊಂದಿಸಲು ಮನೆಯಿಂದ ಹೊರಟಿದ್ದ. ಯಾವುದೋ ಧ್ಯಾನದಲ್ಲಿ ಬೆಂಗಳೂರು ರೈಲು ಹಿಡಿದಿದ್ದ. ಶ್ರಮದಾಯಕ ಪ್ರಯಾಣ ಹಾಗೂ ಆತಂಕದಿಂದ ಆತ ಮತಿ ತಪ್ಪಿ ಮೈಸೂರು ತಲುಪಿದ.
ಮೈಸೂರಿನಲ್ಲಿ ಗೊತ್ತು, ಗುರಿಯಿಲ್ಲದೆ ಬೀದಿ, ಬೀದಿ ಅಲೆಯಲಾರಂಭಿಸಿದ. ರಸ್ತೆಯಲ್ಲಿ ಹೋಗುತ್ತಿದ್ದವರು ಅನುಕಂಪದಿಂದ ಕೊಟ್ಟ ಆಹಾರವನ್ನು ಸೇವಿಸಿ ಮೂರು ವರ್ಷ ಕಳೆದ. ಇದೀಗ ಮೈಸೂರು ಮಹಾನಗರಪಾಲಿಕೆಯ ಅಧಿಕಾರಿಗಳ ಕೈಗೆ ಸಿಕ್ಕು ನಂಜರಾಜ ಬಹಾದ್ದೂರು ಅನಾಥಾಶ್ರಮ ಸೇರಿದ್ದ. ಅಲ್ಲಿ ಆತನಿಗೆ ಮಾನಸಿಕ ಚಿಕಿತ್ಸೆ ಕೊಡಿಸಿದ ಬಳಿಕ ಹಳೆಯದ್ದನ್ನೆಲ್ಲಾ ನೆನಪಿಸಿಕೊಂಡ.
ಆತನ ಹೆಸರು ಕರಂ ಸಿಮಗ್​. ಈಗ ಆತನಿಗೆ 70 ವರ್ಷ. ಮೂಲತಃ ಉತ್ತರ ಪ್ರದೇಶದ ಒಂದು ಗ್ರಾಮದವನು. ಮೂರು ವರ್ಷಗಳ ಹಿಂದೆ ಈತನ ಮಗನ ಮದುವೆ ನಿಗದಿಯಾಗಿತ್ತು. ಅದಕ್ಕಾಗಿ ಹಣ ಹೊಂದಿಸಿಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ.ಅಚಾತುರ್ಯದಿಂದ ಈತ ತಾನು ಹೋಗಬೇಕಿದ್ದ ಊರಿನ ರೈಲಿನ ಬದಲು ಬೆಂಗಳೂರು ರೈಲು ಹತ್ತಿದ್ದ. ಸುದೀರ್ಘ ಪ್ರಯಾಣ ಮತ್ತು ಆತಂಕದಿಂದ ಈತ ಮತಿಭ್ರಮಣೆಗೆ ಒಳಗಾದ. ಅದು ಹೇಗೋ ಮೈಸೂರು ತಲುಪಿಕೊಂಡಿದ್ದ.
ಇದನ್ನೂ ಓದಿ:ಸತ್ಯ ಹೇಳೋಕೆ ಸಿದ್ಧೀಕಿ ಪತ್ನಿ ಆಯ್ಕೆ ಮಾಡಿಕೊಂಡ ದಾರಿ ಇದು …
ಮೈಸೂರಿನಲ್ಲಿ ಹುಚ್ಚನಂತೆ ಬೀದಿ, ಬೀದಿ ಅಲೆಯುತ್ತಿದ್ದ. ಈತನ ಸ್ಥಿತಿ ಕಂಡು ಯಾರಾದರೂ ಊಟ ಕೊಟ್ಟರೆ ಊಟ ಮಾಡುತ್ತಿದ್ದ. ಇಲ್ಲವಾದರೆ ಉಪವಾಸವಿದ್ದು ರಸ್ತೆ ಬದಿ ಮಲಗುತ್ತಿದ್ದ. ಕೆಲದಿನಗಳ ಹಿಂದೆ ಮೈಸೂರಿನ ಕೆಲ ಅಧಿಕಾರಿಗಳ ಕಣ್ಣಿಗೆ ಬಿದ್ದ. ತಕ್ಷಣವೇ ಅವರು ಈತನನ್ನು ನಂಜರಾಜ ಬಾಹದ್ದೂರ್​ ಅನಾಥಾಶ್ರಮಕ್ಕೆ ಸೇರಿಸಿದ್ದರು.
ಅಲ್ಲಿ ಈತನಿಗೆ ಮಾನಸಿಕ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಆತನಿಗೆ ಹಿಂದಿನದ್ದನ್ನೆಲ್ಲ ನೆನಪಿಗೆ ಬಂದಿದೆ. ತನ್ನ ಪೂರ್ವಪರವನ್ನೆಲ್ಲ ನೆನಪಿಸಿಕೊಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ. ಅದರಂತೆ ಊರಿನಲ್ಲಿದ್ದ ಆತನ ಮಕ್ಕಳನ್ನು ಸಂಪರ್ಕಿಸಿದಾಗ, ಈತನನ್ನು ಗುರುತಿಸಿದರು. ಸತ್ತು ಹೋಗಿರಬಹುದು ಎಂದುಕೊಂಡಿದ್ದ ತಮ್ಮ ತಂದೆ ಬದುಕಿರುವುದನ್ನು ಕೇಳಿ ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದೀಗ ಆತನನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿಕೊಡಲಾಗುತ್ತಿದೆ.
ರಾಮಜನ್ಮ ಭೂಮಿಯಲ್ಲಿ ಮತ್ತಷ್ಟು ಪುರಾತನ ವಿಗ್ರಹ, ಶಿವಲಿಂಗ, ಅವಶೇಷಗಳು ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
