ಕುಂದಾಪುರ:ತಾಲೂಕಿನ ಗಂಗೊಳ್ಳಿ ದೇವಸ್ಥಾನವೊಂದರಲ್ಲಿ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದ್ದು ಆತನ ರಕ್ಷಿಸಲು ಹೋದ ಇನ್ನಿಬ್ಬರು ಸೇರಿ ಮೂವರು ಗಂಭೀರ ಗಾಯಗೊಂಡಿದ್ದಾರೆ.
ದಾಕಹಿತ್ಲುವಿನ ರಾಘವೇಂದ್ರ ಖಾರ್ವಿ ಆತ್ಮಹತ್ಯೆಗೆ ಯತ್ನಿಸಿದ್ದು ಲಕ್ಷ್ಮಣ್ ಖಾರ್ವಿ ಹಾಗೂ ಜನಾರ್ದನ ಖಾರ್ವಿ ಬಚಾವ್ ಮಾಡಲು ಹೋಗಿ ಸುಟ್ಟ ಗಾಯಗಳಾಗಿದೆ.
ಇದನ್ನೂ ಓದಿ:ನಿರ್ಮಾಪಕ ಜತೆಗಿನ ಸಂಬಂಧ, ಯುವಕನೊಂದಿಗಿನ ಸಲುಗೆ: ಕಿರುತೆರೆ ನಟಿ ಸಾವಿನ ರಹಸ್ಯ ಬಯಲು!
ಅಮಾವಾಸ್ಯೆ ಪೂಜೆ ಇದ್ದ ಹಿನ್ನೆಲೆ ಭಕ್ತಾಧಿಗಳು ಗಂಗೊಳ್ಳಿ ಖಾರ್ವಿಕೇರಿ ಸಮೀಪದಲ್ಲಿರುವ ದೇವಸ್ಥಾನಕ್ಕೆ ಬಂದಿದ್ದರು‌. ಇದೇ ವೇಳೆ ಪೆಟ್ರೋಲ್ ಕ್ಯಾನ್ ಹಿಡಿದು ಬಂದ ರಾಘವೇಂದ್ರ ಮೈಮೇಲೆ ಸುರಿದುಕೊಂಡಿದ್ದಾನೆ.
ನೋಡನೋಡುತ್ತಿದ್ದಂತೆಯೇ ಬೆಂಕಿ ಹತ್ತಿಕೊಂಡಿದ್ದು ಬಚಾವ್ ಮಾಡಲು ಹೋದ ಇಬ್ಬರಿಗೆ ಬೆಂಕಿ ತಾಗಿದೆ. ಕೂಡಲೇ ಗಾಯಾಳುಗಳನ್ನು ಗಂಗೊಳ್ಳಿ ಆಪತ್ಭಾಂದವ ಆಂಬುಲೆನ್ಸ್ ಮೂಲಕ ಸಮಾಜಸೇವಕಾರದ ಇಬ್ರಾಹಿಂ ಗಂಗೊಳ್ಳಿ ಹಾಗೂ ರಜಬ್ ಬುದ್ಧ ಎನ್ನುವರು ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಯುತ್ತಿದೆ.
ಉಪೇಂದ್ರ ನಿರ್ದೇಶನದಲ್ಲಿ ‘ದಿಗ್ಗಜರು 2’!; ನಾಯಕರಾಗಿ ಸುದೀಪ್​, ದರ್ಶನ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + thirteen =
Remember me
