ಬಾಗಲಕೋಟೆ:ಹಸಿರು ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ದರ್ಗಾದಲ್ಲಿ ಕೇಸರಿ ಬಟ್ಟೆ ಹಿಡಿದು ತೋರಿ ಭವಿಷ್ಯ ಹೇಳಿದ ಪ್ರಸಂಗವೊಂದು ನಡೆದಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಈ ಭವಿಷ್ಯ ನುಡಿಯಲಾಗಿದೆ.
ಹೆಬ್ಬಳ್ಳಿ ಗ್ರಾಮದ ಪ್ರಸಿದ್ದ ಲಾಲಸಾಬವಲಿ ದರ್ಗಾದಲ್ಲಿ ಲಾಲಸಾಬ್ ಅಜ್ಜ ಮೊಹರಂ ಹಬ್ಬದ ಸಂದರ್ಭದಲ್ಲಿ ನುಡಿದ ಈ ಭವಿಷ್ಯದ ವಿಡಿಯೋ ತುಣುಕು ಗಮನ ಸೆಳೆದಿದ್ದು, ವೈರಲ್ ಆಗಲಾರಂಭಿಸಿದೆ. ಕೇಸರಿ ಬಟ್ಟೆಯ ತುಂಡೊಂದನ್ನು ಹಿಡಿದು ಮಾತನಾಡಿದ ಅವರು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಕೇಸರಿ ವಸ್ತ್ರ ಹಿಡಿದು ಮಾತನಾಡಿದ ಅವರು, ಇದರ ಸಲುವಾಗಿ ಬಹಳ ಗುದ್ದಾಡುತ್ತಾರೆ, ಬಹಳ ಹೆಣಗಳು ಉರುಳುತ್ತವೆ, ಬರೆದಿಟ್ಟುಕೊಳ್ಳಿ. ಆದರೆ ಕುರ್ಚಿ ಮಾತ್ರ ಗಟ್ಟಿ ಇದೆ ಎನ್ನುವ ಮೂಲಕ ಅವರು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಲಾಲಸಾಬ್ ನುಡಿದ ಈ ಭವಿಷ್ಯ ಕುತೂಹಲ ಕೆರಳಿಸಿದ್ದು, ಚರ್ಚೆಗೆ ಒಳಗಾಗಿದೆ.
ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!

hospital
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
