ದಾವಣಗೆರೆ:ಗೂಡ್ಸ್ ರೈಲಿನಡಿ ಸಿಲುಕಿಕೊಂಡಿದ್ದ ಶಿಕ್ಷಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಗುರುವಾರ (ಸೆ.14) ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಆನ್‌ಲೈನ್ ಪೊಂಜಿ ಸ್ಕ್ಯಾಮ್​​: 1000 ಕೋಟಿ ರೂ. ಹಗರಣದಲ್ಲಿ ಬಾಲಿವುಡ್ ನಟ ಗೋವಿಂದ ವಿಚಾರಣೆ
ಬಿ.ದುರ್ಗದಲ್ಲಿ ಮುಖ್ಯ ಶಿಕ್ಷಕನಾಗಿದ್ದ ಶಿವಕುಮಾರ್ ಎಂಬ ವ್ಯಕ್ತಿ, ಹಳಿ ದಾಟಲು ಹೋದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ರೈಲ್ವೆ ನಿಲ್ದಾಣದ ಪ್ಲಾಟ್ಫಾರಂ 1 ರಿಂದ 2ಕ್ಕೆ ಹೋಗಲು ಹಳಿ ದಾಟುವಾಗ ಗೂಡ್ಸ್​ ರೈಲು ಏಕಾಏಕಿ ಬಂದ ಕೂಡಲೇ ಹಳಿಯ ನಡುವೆ ಮಲಗಿಕೊಂಡು ತಮ್ಮ ಜೀವ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ:ಬದುಕಿದ್ದವರನ್ನು ಮೃತರೆಂದು ಘೋಷಣೆ; ಸಂಬಳ ಸಿಗದೆ ಪರದಾಡಿದ ನೌಕರರು… ಈ ಅವ್ಯವಸ್ಥೆಗೆ ಅಸಲಿ ಕಾರಣವೇನು?
ರೈಲಿನ ಹಳಿಗಳನ್ನು ದಾಟಲು ಹೋದ ಶಿಕ್ಷಕ, ರೈಲಿನಡಿ ಸಿಲುಕಿರುವುದನ್ನು ಗಮನಿಸಿದ ರೈಲ್ವೆ ಇಲಾಖೆ ಸಿಬ್ಬಂದಿ, ಕೂಡಲೇ ರೈಲನ್ನು ನಿಲ್ಲಿಸಲು ಸೂಚನೆ ನೀಡಿದ್ದಾರೆ. ತದನಂತರ ವ್ಯಕ್ತಿಯನ್ನು ರಕ್ಷಣೆ ಮಾಡಿದ ಆರ್​ಪಿಎಫ್ ಪೊಲೀಸರು, ಗಾಯಗೊಂಡ ಶಿಕ್ಷಕನನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ‌ ಚಿಕಿತ್ಸೆ ಕೊಡಿಸಿದ್ದಾರೆ.
‘ಜವಾನ್’​ ಹೊಗಳಿದ ಅಲ್ಲು ಅರ್ಜುನ್; 3 ದಿನಗಳಲ್ಲಿ ಮೂರು ಬಾರಿ ‘ಪುಷ್ಪ’ ಸಿನಿಮಾ ನೋಡಿದ್ದೇನೆ ಎಂದ ಕಿಂಗ್​ ಖಾನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
