ಬೆಂಗಳೂರು:ರೋಡ್​​ನಲ್ಲಿ ರೋಮ್ಯಾನ್ಸ್ ಮಾಡುವುದು ಈಗ ಇದು ಫ್ಯಾಶನ್ ಆಗಿಬಿಟ್ಟಿದೆ. ಬೈಕ್ ಟ್ಯಾಂಕರ್ ಮೇಲೆ ಹುಡುಗಿಯನ್ನು ಕೂರಿಸಿಕೊಂಡು ಬೈಕ್​​ ಒಡಿಸುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಇತ್ತೀಚೆಗಷ್ಟೇ ಬೆಂಗಳೂರಿನ ಫ್ಲೈ ಓವರ್ ಮೇಲೆ ಯುವಕನೊಬ್ಬ ಮಹಿಳೆಯನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡು ಕುತ್ತಿಗೆಗೆ ಕೈ ಹಾಕಿಕೊಂಡು ಅಪಾಯಕಾರಿಯಾಗಿ ಬೈಕ್ ಓಡಿಸುತ್ತಿರುವುದು ಕ್ಯಾಮರಾ ಕಣ್ಣಿಗೆ ಸೆರೆಯಾಗಿತ್ತು.
ಬೈಕ್ ನಂಬರ್ ಪ್ಲೇಟ್ ಮತ್ತು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ಗುರುತಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋವನ್ನು ಗಮನಿಸಿದ ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
Man rides bike with woman sitting on lap, duo traced by Bengaluru cops…pic.twitter.com/LGuLATg1Gg
— D.Shivsagar (@SarkarSupremacy)May 19, 2024

ಮಹಿಳೆ ಬೈಕ್ ಸವಾರನ ಮಡಿಲಲ್ಲಿ ಒಂದು ಬದಿಯಲ್ಲಿ ತನ್ನ ತೋಳುಗಳನ್ನು ಅವನ ಕುತ್ತಿಗೆಗೆ ಸುತ್ತಿಕೊಂಡು ಕುಳಿತಿರುವುದು ಕಂಡುಬರುತ್ತದೆ. ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆಯಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು ಸಂಚಾರ ಪೊಲೀಸರು ಬೈಕ್ ನಂಬರ್ ಪ್ಲೇಟ್ ಮತ್ತು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಬೈಕ್ ಚಲಾಯಿಸಿದ ಯುವಕ ಮತ್ತು ಮಹಿಳೆಯನ್ನು ಗುರುತಿಸಿದ್ದಾರೆ. “ನಾವು ಅಪರಾಧಿಯನ್ನು ಗುರುತಿಸಿದ್ದೇವೆ. ಈ ಹಿಂದೆ ಆತ ಮಾಡಿರುವ ಉಲ್ಲಂಘನೆಗಳ ಪಟ್ಟಿಯನ್ನು ಪತ್ತೆ ಮಾಡುತ್ತೇವೆ,” ಎಂದು ಬೆಂಗಳೂರು ಸಂಚಾರ ಉತ್ತರ ವಿಭಾಗದ ಡಿಸಿಪಿ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
