ಬೆಂಗಳೂರು:ಯುವತಿಯರಿಗೆ ಹಿರೋಯಿನ್ ಆಗುವ ಚಾನ್ಸ್ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿ ಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಧವನ್​ ಸೋಹಾ ಎಂದು ಗುರುತಿಸಲಾಗಿದೆ. ಈತ ಪ್ರಖ್ಯಾತ ಸಿನಿಮಾ ನಟ ನಟಿಯರ ಜೊತೆ ರೀಲ್ಸ್ ಮಾಡಿ ಪೋಟೋ ತೆಗೆಸಿಕೊಳ್ಳುತ್ತಿದ್ದ. ಇದನ್ನೇ ಬಳಸಿಕೊಂಡು ಈ ಭೂಪ ಅನೇಕ ಯುವತಿಯರಿಗೆ ವಂಚನೆ ಮಾಡಿದ್ದಾನೆ ಎನ್ನಲಾಗಿದೆ. ಈತ ಸಿನಿಮಾದಲ್ಲಿ ನಟಿಸಬೇಕು ಅಂತಾ ಆಸೆ ಇರುವವರನ್ನೇ ಟಾರ್ಗೆಟ್ ಮಾಡುತ್ತಿದ್ದ.

ಇನ್ಸ್ಟಾಗ್ರಾಂನಲ್ಲಿ ಈತನ ರೀಲ್ಸ್​ಗೆ ಮರುಳಾಗಿ ಅನೇಕ ಯುವತಿಯರು ಮೋಸ ಹೋಗಿದ್ದಾರೆ. ಈತ ಬರೋಬ್ಬರಿ 58 ಮಂದಿಗೆ ವಂಚಿಸಿದ್ದಾರೆ.
ಈತ ವಂಚಿಸಿದ ರೀತಿಯೂ ಬಹಳ ವಿಚಿತ್ರ. ಈತ ಮೊದಲಿಗೆ ಒಂದು ಪ್ಲೆಮಿಂಗೋ ಸೆಲೆಬ್ರಿಟೀಸ್ ವಲ್ಡ್ ಎಂಬ ಆಕ್ಟಿಂಗ್ ಕ್ಲಾಸ್ ತೆರೆದಿದ್ದ. ಇನ್ಸ್ಟಿಟ್ಯೂಟ್​ನಲ್ಲಿ ನಟನೆ ಕಲಿಯಲು ಬರುವವರಿಗೆ ಸಿನಿಮಾದಲ್ಲಿ ಲೀಡ್​ ರೋಲ್​ ಕೊಡಿಸುತ್ತೇನೆ ಎಂದು ವಂಚನೆ ಮಾಡಿದ್ದಾನೆ.
ಈತ ಪ್ರತಿಯೊಬ್ಬರ ಬಳಿ ಬರೋಬ್ಬರಿ 30 ರಿಂದ 50 ಸಾವಿರ ಪಡೆದು ವಂಚನೆ ಮಾಡಿದ್ದು ಇದೇ ರೀತಿ ಹಲವರಿಗೆ ಲಕ್ಷಾಂತರ ರೂಪಾಯಿ ವಂಚಿಸಿರೋ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − one =
Remember me
