ಕಾರವಾರ:ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಹಣ ಬರುತ್ತದೆ. ಆದರೆ ರಸ್ತೆಗೆ ಡಾಂಬರೀಕರಣ ಮಾಡಿ ಮೂರು ದಿನ ಕಳೆಯುವುದರೊಳಗೆ ರಸ್ತೆ ಕಿತ್ತು ಹೋಗುತ್ತದೆ. ಹೀಗೆ ಸಂಪೂರ್ಣ ಗುಂಡಿಮಯವಾಗಿರುವ ಹಬ್ಬುವಾಡ ರಸ್ತೆಯನ್ನ ತಾತ್ಕಾಲಿಕವಾಗಿ ದುರಸ್ತಿಪಡಿಸುವ ಮೂಲಕ ವೃದ್ಧರೋರ್ವರು ವರ್ಷಗಳಿಂದ ಸದ್ದಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಹಬ್ಬುವಾಡ ರಸ್ತೆಯಲ್ಲಿ ಪ್ರತಿನಿತ್ಯ ಗುಂಡಿ ತಪ್ಪಿಸಲು ಹೋಗಿ ವಾಹನಗಳ ಸವಾರರು ಅಪಘಾತದಿಂದ ಸಾವು- ನೋವುಗಳಿಗೆ ತುತ್ತಾಗುತ್ತಲೇ ಇರುತ್ತಾರೆ. ಈ ಬಗ್ಗೆ ಸ್ಥಳೀಯರ ಒತ್ತಾಯವಿದ್ದರೂ, ಅಧಿಕಾರಿಗಳ ಗಮನಕ್ಕಿದ್ದರೂ ರಸ್ತೆ ದುರಸ್ತಿ ಕಾರ್ಯ ಮಾತ್ರ ಆಗುತ್ತಿಲ್ಲ. ಇದನ್ನ ಗಮನಿಸಿದ ಕಾರವಾರದ ಬಾಂಡಿಶಿಟ್ಟಾ ನಿವಾಸಿ ಜಾನ್, ಈ ರಸ್ತೆ ಗುಂಡಿಗಳನ್ನ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಬೆಳಿಗ್ಗೆಯೇ ಸೈಕಲನ್ನೇರಿ, ಆ ಸೈಕಲ್‌ನ್ನು ರಸ್ತೆಯಲ್ಲಿ ಅಡ್ಡ ನಿಲ್ಲಿಸಿ, ಗುಂಡಿಗಳನ್ನ ಮುಚ್ಚುವ ಕಾರ್ಯಕ್ಕೆ ಇಳಿಯುತ್ತಾರೆ. ಮನೆಯಿಂದಲೇ ಬುಟ್ಟಿ, ಗುದ್ದಲಿಗಳ ಸಮೇತ ಆಗಮಿಸಿ, ಕಲ್ಲು- ಮಣ್ಣನ್ನ ಗುಂಡಿಗೆ ತುಂಬಿ ತಾತ್ಕಾಲಿಕವಾಗಿ ರಸ್ತೆಗಳನ್ನ ದುರಸ್ತಿ ಪಡಿಸುವ ಕಾರ್ಯಕ್ಕೆ ಈ ವೃದ್ಧ ಮುಂದಾಗಿದ್ದಾರೆ.
ವೃದ್ಧನ ನಿಸ್ವಾರ್ಥದ ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ  ವೃದ್ಧನ ಸಮಾಜ ಸೇವೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
VIDEO | 13,500 ಮೀಟರ್ ಎತ್ತರದಿಂದ ಸ್ಕೈಡೈವ್ ಮಾಡಿದ 104 ವರ್ಷದ ಅಜ್ಜಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
