ಆನೇಕಲ್:ಇಬ್ಬರು ಮಕ್ಕಳ ತಾಯಿಯ ಕುತ್ತಿಗೆಗೆ ಇರಿದಿದ್ದಲ್ಲದೆ ತಾನೂ ಕುತ್ತಿಗೆಗೆ ಚುಚ್ಚಿಕೊಂಡ ಪ್ರಕರಣವೊಂದು ನಡೆದಿದೆ. ಬೆಂಗಳೂರು ಹೊರವಲಯದ ಆನೇಕಲ್​ನ ಬಹದ್ದೂರ್​ಪುರದಲ್ಲಿ ಈ ದುಷ್ಕೃತ್ಯ ನಡೆದಿದೆ.
ಹೊಸೂರು ಮೂಲದ ಮಿಥುನ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಈತ ಬಹದ್ದೂರ್​ಪುರ ನಿವಾಸಿ ಚೈತ್ರಾ ಕುತ್ತಿಗೆಗೆ ಇರಿದಿದ್ದಾನೆ. ಇಬ್ಬರನ್ನೂ ಆನೇಕಲ್​ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೈತ್ರಾ ಪರಿಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ:ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!
ಮಿಥುನ್ ಮತ್ತು ಚೈತ್ರಾ ಕಳೆದ ಎರಡು ವರ್ಷಗಳಿಂದ ಆನೇಕಲ್​ನ ಟ್ರೆಂಟ್​ ಬಟ್ಟೆ ಮಳಿಗೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಇಬ್ಬರ ಮಧ್ಯೆ ಸ್ನೇಹ ಉಂಟಾಗಿತ್ತು. ಚೈತ್ರಾಗೆ ಮದುವೆಯಾಗಿ ಇಬ್ಬರು ಮಕ್ಕಳಿರುವುದು ಮಿಥುನ್​ಗೆ ಗೊತ್ತಿದ್ದೂ ಇಬ್ಬರ ಮಧ್ಯೆ ಅಕ್ರಮ ಸಂಬಂಧವೂ ಉಂಟಾಗಿತ್ತು.
ಇದು ಚೈತ್ರಾ ಮನೆಯವರಿಗೆ ಗೊತ್ತಾಗಿ ರಾಜಿ ಪಂಚಾಯಿತಿ ನಡೆದಿತ್ತು. ತಮಿಳುನಾಡಿನ ಹೊಸೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಇಷ್ಟಾದರೂ ಮಿಥುನ್​ ಚೈತ್ರಾಳ ಬೆನ್ನುಬಿದ್ದಿದ್ದ. ಮಾತ್ರವಲ್ಲದೆ ಇದೇ ವಿಷಯಕ್ಕೆ ಎರಡು ದಿನಗಳ ಹಿಂದೆ ವಿಷ ಕುಡಿದು ಆಸ್ಪತ್ರೆಗೂ ದಾಖಲಾಗಿದ್ದ.
ಇದನ್ನೂ ಓದಿ:ಅನಗತ್ಯವಾಗಿ ಮಹಾಪ್ರಾಣ ಪ್ರಯೋಗಿಸಬೇಡಿ..: ನಟ ಜಗ್ಗೇಶ್​ಗೆ ‘ಮೇಷ್ಟ್ರ’ ಕನ್ನಡ ಪಾಠ!
ಮಿಥುನ್ ಇಂದು ಹೊಸೂರಿನ ಆಸ್ಪತ್ರೆಯಿಂದ ನೇರವಾಗಿ ಚೈತ್ರಾ ಮನೆಗೆ ಬಂದಿದ್ದ. ಆಸ್ಪತ್ರೆಯಿಂದಲೇ ತಂದಿದ್ದ ಕತ್ತರಿಯಿಂದ ಚೈತ್ರಾಳ ಕುತ್ತಿಗೆಗೆ ಇರಿದಿದ್ದಾನೆ. ನಂತರ ತಾನೂ ಕುತ್ತಿಗೆಗೆ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಬಿದ್ದು ಒದ್ದಾಡುತ್ತಿದ್ದವರನ್ನು ನೋಡಿದ ಅಕ್ಕಪಕ್ಕದ ಮನೆಯವರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
70ಕ್ಕೂ ಅಧಿಕ ಚಿನ್ನದ ಪದಕ ಗಳಿಸಿರುವ ‘ಯೋಗಸಂಧ್ಯಾ’; ಹೆಗ್ಗಡೆ-ಬಿಎಸ್​ವೈ ಅವರಿಂದ ಯೋಗರತ್ನ ಪ್ರಶಸ್ತಿ ಪ್ರದಾನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + twelve =
Remember me
