ಬೆಂಗಳೂರು:ಈ ಭೂಪನಿಗೆ ಅದೇನು ತಳಮಳವೋ ಗೊತ್ತಿಲ್ಲ. ಅಸ್ಸಾಮಿನಿಂದ ಬೆಂಗಳೂರಿಗೆ ವಿಮಾನದಲ್ಲಿ ಬರಲು ಎಷ್ಟು ಹೊತ್ತು ಬೇಕು? ಕೆಲವೇ ಗಂಟೆಗಳಲ್ಲಿ ಬಂದು ಬಿಡಬಹುದು. ಈತನಿಗೆ ಮಾತ್ರ ತನ್ನನ್ನು ತಡೆದುಕೊಳ್ಳಲು ಆಗಲಿಲ್ಲ ಎಂದು ಕಾಣುತ್ತದೆ. ಹಾರುತ್ತಿದ್ದ ವಿಮಾನದಲ್ಲೇ ಈತ ಸಿಗರೇಟ್​ ಸೇದಿ ಇದ್ದ ಎಲ್ಲಾ ಪ್ರಯಾಣಿಕರಿಗೂ ಒಮ್ಮೆಗೆ ಶಾಕ್​ ನೀಡಿದ್ದಾನೆ.
ಮಧ್ಯರಾತ್ರಿ 01:30 6E 716 ಇಂಡಿಗೂ ವಿಮಾನದಲ್ಲಿ ಈ ಘಟನೆ ನಡೆದಿದೆ. ಈತನನ್ನು ಅಸ್ಸಾಂ ಮೂಲದ ಶೇಹರಿ ಚೌಧರಿ ಎಂದು ಗುರುತಿಸಲಾಗಿದೆ. ಈತ ಒಮ್ಮೆಲೆ ತನ್ನ ಆಸನದಿಂದ ಎದ್ದು ಶೌಚಾಲಯಕ್ಕೆ ಹೋಗಿದ್ದಾನೆ. ಅಲ್ಲಿ ಸಿಗರೇಟ್​ಗೆ ಬೆಂಕಿ ಹಚ್ಚಿ ಸೇದಿದ್ದಾನೆ. ಇದರಿಂದಾಗಿ ಶೌಚಾಲಯದಿಂದ ಹೊಗೆ ಮತ್ತು ವಾಸನೆ ಬಂದಿದ್ದು ಪ್ರಯಾಣಿಕರು ಒಮ್ಮೆಗೆ ಗಾಬರಿಗೆ ಒಳಗಾಗಿದ್ದಾರೆ. ಹೀಗಾಗಿ ವೈಮಾನಿಕ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಪ್ರಯಾಣಿಕ ಸಿಗರೇಟ್ ಸೇದಿರುವುದು ಬೆಳಕಿಗೆ ಬಂದಿದೆ.

ಹೀಗಾಗಿ ಬೆಂಗಳೂರಿನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಕೂಡಲೆ ಏರ್​ಲೈನ್ಸ್​ ಸಿಬ್ಬಂದಿ ಪ್ರಯಾಣಿಕನನ್ನು ಭದ್ರತಾ ಪಡೆಯ ವಶಕ್ಕೆ ಒಪ್ಪಿಸಿದ್ದಾರೆ. ವಿಮಾನದಲ್ಲಿ ಸ್ಮೋಕಿಂಗ್ ಮಾಡಿದ್ದಕ್ಕೆ ಏರ್ಪೋಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ಜತೆಗೆ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 10 =
Remember me
