ದೊಡ್ಡಬಳ್ಳಾಪುರ :ಯುಗಾದಿ ಹಬ್ಬದ ಸಮಯಕ್ಕೆ ಅಳಿಯಂದಿರು ಅತ್ತೆ-ಮಾವನ ಮನೆಗೆ ಹೋಗಿ ಉಪಚಾರ ಮಾಡಿಸಿಕೊಳ್ಳುವುದು ಸಾಮಾನ್ಯ ವಿಚಾರ. ಆದರೆ, ಇಲ್ಲೊಬ್ಬ ತನ್ನ ಅತ್ತೆ ಮಾವನಿಗೆ ಚಾಕುವಿನಿಂದ ಇರಿದು, ಪೊಲೀಸರ ಅತಿಥಿಯಾಗಿರುವ ಪ್ರಸಂಗ ವರದಿಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ದೇವಸ್ಥಾನ ಬೀದಿಯಲ್ಲಿ ಅತ್ತೆ ಮನೆಗೆ ನುಗ್ಗಿದ ಅಳಿಯ ಅತ್ತೆ ಹಾಗೂ ಮಾವನ ಮೇಲೆ ಚೂರಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಮಾವ ಶ್ರೀನಿವಾಸ್(65) ಹಾಗೂ ಅತ್ತೆ ಜಯಮ್ಮ (60) ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಅಳಿಯ ಮಂಜುನಾಥ್(40)ನನ್ನು ದೊಡ್ಡಬಳ್ಳಾಪುರ ಪಟ್ಟಣ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಸೇಬುಹಣ್ಣನ್ನು ಆರ್ಡರ್ ಮಾಡಿದವನಿಗೆ ಬಂದಿದ್ದು ದುಬಾರಿ ಬೆಲೆಯ ಆ್ಯಪಲ್ ಮೊಬೈಲ್!
ಇಪ್ಪತ್ತೆರಡು ವರ್ಷದ ಹಿಂದೆ ಮದುವೆಯಾಗಿದ್ದ ಮಂಜುನಾಥ್ ಹಾಗೂ ಅನುಸೂಯ ದಂಪತಿ, ಮಕ್ಕಳೊಂದಿಗೆ ಗೌರಿಬಿದನೂರಿನ ದೋಭಿ ಕಾಲನಿಯಲ್ಲಿ ವಾಸವಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ್ ಮದ್ಯಕ್ಕೆ ದಾಸನಾಗಿದ್ದು, ಪತ್ನಿಯೇ ಮನೆ ನಿರ್ವಹಣೆ ಮಾಡುತ್ತಿದ್ದರು ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ದಂಪತಿ ನಡುವೆ ವೈಮನಸ್ಯ ಹುಟ್ಟಿ, ಪತ್ನಿ ಅನಸೂಯ ದೊಡ್ಡಬಳ್ಳಾಪುರದ ತವರುಮನೆಗೆ ಬಂದಿದ್ದರು. ಇದರಿಂದ ಕುಪಿತಗೊಂಡಿದ್ದ ಆರೋಪಿ ಅತ್ತೆ ಮನೆಗೆ ನುಗ್ಗಿ ಪತ್ನಿಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ. ಈ ವೇಳೆ ಅಡ್ಡ ಬಂದ ಅತ್ತೆ ಮತ್ತು ಮಾವನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನೀಟ್-ಪಿಜಿ ವೈದ್ಯಕೀಯ ಪ್ರವೇಶ ಪರೀಕ್ಷೆ ಮುಂದೂಡಿಕೆ
ಹಾಸನ ಶಾಸಕ ಪ್ರೀತಂ ಗೌಡಗೆ ಕರೊನಾ
ಇನ್ನು ರಾಜಧಾನಿಯಲ್ಲಿ ವೀಕೆಂಡ್​ ಕರ್ಫ್ಯೂ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
