ಬೆಂಗಳೂರು:ಈ ಮಹಿಳೆ ಅಕ್ರಮ ಸಂಬಂಧಕ್ಕೆ ಒಪ್ಪಿಲ್ಲ ಎಂದು ಸಿಟ್ಟಿಗೆದ್ದ ಕೀಚಕ, ಆಕೆಗೆ ಚಾಕು ಹಾಕಿದ್ದಾನೆ! ಹೌದು, ಆರ್.ಟಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಟದಹಳ್ಳಿಯಲ್ಲಿ‌ ಈ ಘಟನೆ ನಡೆದಿದ್ದು ಹಬೀಬಾ ತಾಜ್ (30) ಗೆ ಚಾಕು ಇರಿತಕ್ಕೊಳಗಾಗಿದ್ದಾರೆ
ಹಬೀಬಾ ತಾಜ್​ಗೆ ವಿವಾಹವಾಗಿದ್ದು 6 ವರ್ಷದ ಹಿಂದೆ ಪತಿ ತೀರಿ ಹೋಗಿದ್ದರು. ಎರಡು ಮಕ್ಕಳ ಜೊತೆಗೆ ಈಕೆ ಧೈರ್ಯದಿಂದ ವಾಸಮಾಡಿಕೊಂಡಿದ್ದರು. ಆಗಿನಿಂದ ಹಬೀಬಾಗೆ ಆಟೋ ಚಾಲಕ ಶೇಕ್ ಮೆಹಬೂಬ್​(32) ನ ಪರಿಚಯವಾಗಿತ್ತು. ಇತ್ತ ಕಡೆ ಈ ಭೂಪ ಶೇಕ್ ಮೆಹಬೂಬ್​ಗೂ ಮದುವೆಯಾಗಿ ಮಕ್ಕಳಿದ್ದಾರೆ. ಆದರೂ ಈ ಆಟೋ ಡ್ರೈವರ್ ಪರಸ್ತ್ರೀ ಸಂಗ ಮಾಡಿದ್ದಾನೆ.
ಹೀಗಿರುವಾಗ ಇತ್ತೀಚೆಗೆ ಈ ಮಹಿಳೆ ಶೇಕ್ ಮೆಹಬೂಬ್​ನಿಂದ ದೂರವಾಗಲು ನೋಡುತ್ತಿದ್ದಳು. ಈಕೆ ಬೇರೊಂದು ಮದುವೆಯಾಗಲೂ ತಯಾರಾಗಿದ್ದಳು. ಆದರೆ ಇದು ಶೇಕ್ ಮೆಹಬೂಬ್ ಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವವೆಯೂ ಗಲಾಟೆಯಾಗುತ್ತಿತ್ತು. ನಿನ್ನೆ ರಾತ್ರಿ‌ 12 ಗಂಟೆಗೂ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಆಗ ಅಕ್ರಮ ಸಂಬಂಧ ಸಾಕು ಎಂದಿದ್ದ ಹಬೀಬಾ ತಾಜ್​ಗೆ ಶೇಕ್ ಮೆಹಬೂಬ್ ಚಾಕು ಇರಿದಿದ್ದಾನೆ.
ಈಗ ಗಾಯಾಳು ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಶೇಕ್​ ಮೆಹಬೂಬ್​ ಇನ್ನೂ ಪೊಲೀಸರ ಕೈಗೆ ಸಿಗದ ಕಾರಣ ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + one =
Remember me
