ಧಾರವಾಡ:ಪತ್ನಿ ಹಾಗೂ ಮಗಳಿಗೆ ವಿಷ ನೀಡಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಶರಣಾಗಿರುವ ಘಟನೆ ಧಾರವಾಡ ಮಹಬೂಬ ನಗರ ಕವಳಿಕಾಯಿ‌ ಚಾಳದಲ್ಲಿ ಶನಿವಾರ ನಡೆದಿದೆ.
ಪತ್ನಿ ಅರ್ಪಿತಾ(28) ಹಾಗೂ ಮಗಳು ಸುಕೃತಾ (4)ಗೆ ವಿಷ ನೀಡಿದ ಮೌನೇಶ ಪತ್ತಾರ(36) ಬಳಿಕ ತಾನೂ ನೇಣಿಗೆ ಕೊರಳೊಡ್ಡಿದ್ದಾರೆ. ಮೌನೇಶ್​ ಧಾರವಾಡ ತಾಲೂಕಿನ ಗರಗ್ ರಸ್ತೆಯಲ್ಲಿರೋ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡತಿದ್ದರು. ಇವರು ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಅಸೂಟಿ ಗ್ರಾಮದವರು. ಉದ್ಯೋಗ ನಿಮಿತ್ತ ಧಾರವಾಡದಲ್ಲಿ ಕುಟುಂಬ ಸಮೇತ ನೆಲೆಸಿದ್ದರು.
ಇದನ್ನೂ ಓದಿ:ನಿಖಿಲ್​ ಕುಮಾರಸ್ವಾಮಿಗೆ ಸ್ವಪಕ್ಷದವರಿಂದಲೇ ಬೈಗುಳ! ಜೆಡಿಎಸ್​ ಯುವರಾಜನ ಸಮಜಾಯಿಷಿಗೂ ಕರಗಲಿಲ್ಲ ಕಾರ್ಯಕರ್ತರ ಆಕ್ರೋಶ
ಆತ್ಮಹತ್ಯೆಗೆ ಕಾರಣವೇನು?ಮೃತರ ಮನೆಯಲ್ಲಿ ಡೆತ್​ನೋಟ್​ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕರೊನಾ ಭಯವೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಮನೆಯಲ್ಲಿ ಪತ್ನಿ ಹಾಗೂ ಮಗಳಿಗೆ ಕರೊನಾ ಲಕ್ಷಣವಿರುವ ಶಂಕೆ ವ್ಯಕ್ತವಾಗಿತ್ತು. ಸ್ಥಳೀಯ ವೈದ್ಯರೊಬ್ಬರ ಬಳಿ ಪರೀಕ್ಷಿಸಿದ್ದರು. ಪತ್ನಿಗೆ ಲೋ ಬಿಪಿ ಮತ್ತು ಮಗಳಿಗೆ ಜ್ವರದ ಲಕ್ಷಣ‌ ಕಂಡು ಬಂದಿತ್ತು. ಇದರ ನಡುವೆ ಮಗಳ ಜ್ವರ ಕಡಿಮೆಯಾಗದಿದ್ದಾಗ ಆತಂಕ ಶುರುವಾಗಿತ್ತು. ಇದೇ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.
ಪೊಲೀಸರು ಡೆತ್​ನೋಟ್ ವಶಕ್ಕೆ ಪಡೆದಿದ್ದು, ಧಾರವಾಡದ ಉಪನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್​ ಅವರಿಗೆ ಕೋವಿಡ್​ 19 ಪಾಸಿಟಿವ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + five =
Remember me
