ಬೆಂಗಳೂರು:ವ್ಯಕ್ತಿಯೊಬ್ಬ ನೇಲ್ ಕಟರ್​ ನುಂಗಿದ್ದಲ್ಲದೇ ಅದನ್ನು ಮರೆತೇ ಬಿಟ್ಟಿದ್ದ. ಆದರೆ 8 ವರ್ಷಗಳ ಬಳಿಕ ಬೆಂಗಳೂರಿನ ವೈದ್ಯರು ಅದನ್ನು ಹೊರತೆಗೆದಿದ್ದಾರೆ. 38 ವರ್ಷದ ಈ ವ್ಯಕ್ತಿ ತನ್ನ 30ನೇ ವಯಸ್ಸಿನಲ್ಲಿ ಈ ನೇಲ್ ಕಟರ್ ನುಂಗಿದ್ದ.
ನೇಲ್ ಕಟರ್ ನುಂಗಿದ್ದ ಈ ವ್ಯಕ್ತಿ ಆ ಕುರಿತು ಪಾಲಕರು, ಮನೆಯವರಿಗೆ ಹೇಳಿರಲಿಲ್ಲ. ಗೊತ್ತಾದರೆ ಬಯ್ಯುತ್ತಾರೆ ಎಂದು ಸುಮ್ಮನಿದ್ದ. ಮದುವೆಯಾದ ಮೇಲೆ ಹೆಂಡತಿಗೂ ಈ ವಿಷಯ ಹೇಳಿರಲಿಲ್ಲ. ಹೇಗೂ ನೋವು ಇರದ್ದರಿಂದ ಸುಮ್ಮನಿದ್ದೆ, ಆಮೇಲೆ ಅದನ್ನು ಮರೆತೇಬಿಟ್ಟಿದ್ದೆ ಎಂಬುದಾಗಿ ಈತ ವೈದ್ಯರ ಬಳಿ ಹೇಳಿಕೊಂಡಿದ್ದಾನೆ.
ಇತ್ತೀಚೆಗೆ ಹೊಟ್ಟೆನೋವು ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹೋಗಿದ್ದ ಈತನ ಬಳಿ ವೈದ್ಯರು ಎಕ್ಸ್​-ರೇ ತೆಗೆಸಲು ಹೇಳುತ್ತಾರೆ. ಬಳಿಕ ಪರಿಶೀಲನೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ವಸ್ತುವೊಂದು ಇರುವುದು ಕಂಡುಬಂದಿತ್ತು. ಈ ಬಗ್ಗೆ ವೈದ್ಯರು ವಿಚಾರಿಸಿದಾಗ ಈತ 8 ವರ್ಷಗಳ ಹಿಂದಿನ ಘಟನೆ ನೆನಪಾಗಿ ವೈದ್ಯರಿಗೆ ಅದನ್ನು ಹೇಳಿದ್ದಾನೆ.
ಇದನ್ನೂ ಓದಿ:ವಿವಿ ಕ್ಯಾಂಪಸ್​ನಲ್ಲಿ ಮದ್ಯಪಾನ-ಧೂಮಪಾನ ನಮ್ಮ ಹಕ್ಕು ಎಂದ ವಿದ್ಯಾರ್ಥಿನಿ!
ನನಗೆ 30 ವರ್ಷವಾಗಿದ್ದಾಗ ಮದ್ಯವ್ಯಸನ ಬಿಡಿಸಲು ನನ್ನನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು. ಅಲ್ಲಿರುವುದು ಹಿಂಸೆ ಅನಿಸಿದ್ದಾಗ ಒಂದು ದಿನ ಸಿಟ್ಟಿನಲ್ಲಿ ನೇಲ್ ಕಟರ್ ನುಂಗಿ ಅಲ್ಲಿದ್ದ ಸಿಬ್ಬಂದಿಗೆ ತಿಳಿಸಿದ್ದೆ. ಅವರು ಆಗ ಎರಡು ಬಾಳೆಹಣ್ಣು ತಿನ್ನು, ಬೆಳಗ್ಗೆ ದೇಹದಿಂದ ಹೊರಹೋಗುತ್ತದೆ ಎಂದಿದ್ದರು. ನಾನು ಬೆಳಗ್ಗೆ ಅದು ದೇಹದಿಂದ ಹೊರ ಹೋಯ್ತು ಎಂದುಕೊಂಡಿದ್ದೆ. ಅದಾಗಿ 8 ವರ್ಷಗಳ ಮೇಲೆ ವೈದ್ಯರು ಏನಾದರೂ ನುಂಗಿದ್ದೀರಾ ಎಂದು ಕೇಳಿದಾಗಲೇ ಅದು ಮತ್ತೆ ನೆನಪಾಗಿದ್ದು ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾನೆ.
ಈತ ಯಾವುದಾದರೂ ಏರ್​ಪೋರ್ಟ್​ಗೆ ಹೋಗಿದ್ದರೆ ಇಲ್ಲವೇ ಎಂಆರ್​​ಐ ಸ್ಕ್ಯಾನ್​ಗೆ ಒಳಗಾಗಿದ್ದರೆ ಮ್ಯಾಗ್ನೆಟಿಕ್​ ವೇವ್ಸ್​ನಿಂದಾಗಿ ತೊಂದರೆ ಅನುಭವಿಸುವ ಸಾಧ್ಯತೆ ಇರುತ್ತಿತ್ತು ಎಂದಿರುವ ವೈದ್ಯರು, ಹೊಟ್ಟೆಯಲ್ಲಿದ್ದ ನೇಲ್ ಕಟರ್ ತುಕ್ಕು ಹಿಡಿದಿತ್ತು ಎಂದು ತಿಳಿಸಿದ್ದಾರೆ.
ಪತಿ ಯಾವುದೇ ಕ್ಷಣದಲ್ಲೂ ನಮ್ಮನ್ನು ಕೊಲ್ಲಬಹುದು: ಮಕ್ಕಳಿಬ್ಬರ ಸಹಿತ ವಿಡಿಯೋ ಮಾಡಿ ಸಹಾಯ ಕೇಳಿದ ಪತ್ನಿ

ಅಮ್ಮನೂ ಕನ್ನಡ ಕಲಿತು ಬರೆಯುವಂತೆ ಮಾಡಿದ ‘ಮುಂಗಾರು ಮಳೆ’ ನಟಿ ಪೂಜಾ ಗಾಂಧಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 15 =
Remember me
